

ಬೆಂಗಳೂರು: ಜ್ಯುವೆಲ್ಲರಿ ಶಾಪ್ಗಳಲ್ಲಿ ಯಾರನ್ನಾದರೂ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಪೂರ್ವಪರ ಬಗ್ಗೆ ಎಚ್ಚರವಹಿಸುವು ತುಂಬಾ ಒಳಿತು. ಕೆಲಸಕ್ಕೆ ಸಿಗ್ತಾರೆ ಅಂತಾ ಸಿಕ್ಕ ಸಿಕ್ಕವರನ್ನು ಸೇರಿಸಿಕೊಂಡರೆ ಕೊನೆಗೆ ಉಂಡೆ ನಾಮ ಬೀಳುವುದು ಗ್ಯಾರೆಂಟಿ ಎನ್ನುವುದಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ.
ಖತರ್ನಾಕ್ ಮಹಿಳೆಯೊಬ್ಬಳು ಕೆಲಸಕ್ಕೆ ಸೇರಿದ ಒಂದೇ ವಾರದಲ್ಲಿ ಜುವೆಲ್ಲರಿ ಶಾಪ್ನಲ್ಲಿ ತನ್ನ ಕೈಚಳಕ ತೋರಿದ್ದಾಳೆ. ಚಿನ್ನ ತೋರಿಸುವ ಕೆಲಸ ಮಾಡುತ್ತಲೇ ಚಿನ್ನಾಭರಣವನ್ನು ಎಗರಿಸಿಕೊಂಡು ಹೋಗಿದ್ದಾಳೆ. ಯಲಹಂಕದ ಪ್ರತಿಷ್ಠಿತ ಜ್ಯುವೆಲ್ಲರ್ಸ್ನಲ್ಲಿ ಮಹಿಳೆ ಕೆಲಸಕ್ಕೆ ಸೇರಿದ್ದಳು. ಚಿನ್ನ ಮತ್ತು ವಜ್ರದ ಆಭರಣಗಳ ಜಾಗದಲ್ಲಿ ನಕಲಿ ಆಭರಣಯಿಟ್ಟು ಮಾಲೀಕನಿಗೆ ಅನುಮಾನ ಬಾರದಂತೆ ಆತನಿಗೆ ಪಂಗನಾಮ ಹಾಕುತ್ತಿದ್ದವಳನ್ನು ಕೊನೆಗೆ ಬಂಧಿಸಲಾಗಿದೆ.
ಬಂಧಿತಳನ್ನು ವಾಣಿ ವಾಡೇಕರ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಬರೋಬ್ಬರಿ 58.60 ಲಕ್ಷ ರೂ. ಮೌಲ್ಯದ ಡೈಮಂಡ್ ಹಾಗೂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈಕೆ Rmz galleriya ಮಾಲ್ನಲ್ಲಿರುವ ತನಿಷ್ಕ್ ಜುವೆಲ್ಲರಿಯಲ್ಲಿ ಸೇಲ್ಸ್ ಆಫೀಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು.
ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)