ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ರಾಜ್ಯ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭ ಮಾಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಆರಂಭದಲ್ಲೇ ವಿಘ್ನವೊಂದು ಎದುರಾಗಿದೆ.
ಜನಾರ್ದನ ರೆಡ್ಡಿ ಅವರ ಸಾಮಾಜಿಕ ಜಾಲತಾಣಗಳ ಖಾತೆಯನ್ನೇ ಹ್ಯಾಕರ್ಸ್ಗಳು ಹ್ಯಾಕ್ ಮಾಡಿದ್ದು, ರೆಡ್ಡಿ ಆಪ್ತ ದಾಮೋದರ ರೆಡ್ಡಿ ಅವರು ದೂರು ದಾಖಲಿಸಿದ್ದಾರೆ. ಹೊಸ ಪಕ್ಷ ಕಟ್ಟಿಕೊಂಡು 2023ರ ಚುನಾವಣೆಗೆ ತಯಾರಿಯಲ್ಲಿರುವ ರೆಡ್ಡಿಗೆ ಆರಂಭದಲ್ಲೇ ಹ್ಯಾಕರ್ಸ್ ಹಾವಳಿ ಇಟ್ಟಿದ್ದಾರೆ.
ಗಾಲಿ ಜನಾರ್ದನ ರೆಡ್ಡಿ ಹೆಸರಿನಲ್ಲಿರುವ ಸಾಮಾಜಿಕ ಜಾಲಾತಾಣದ ಎಲ್ಲ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್ಸ್ ಹಾವಳಿಯಿಂದಾಗಿ ಇದೀಗ ರೆಡ್ಡಿ ಟೀಮ್ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಹ್ಯಾಕರ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೆಡ್ಡಿಯ ಆಪ್ತ ಸಹಾಯಕ ದಾಮೋದರ ರೆಡ್ಡಿ ಸೈಬರ್ ಠಾಣಿಗೆ ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ನಿಮ್ಮ ಕಣ್ಣಿಗೊಂದು ಸವಾಲ್: ಸಾಧ್ಯವಾದ್ರೆ ಈ ಫೋಟೋದಲ್ಲಿರುವ ಹೆಲಿಕಾಪ್ಟರ್ ಪತ್ತೆ ಹಚ್ಚಿ…
ತನ್ನೊಂದಿಗೆ ಬೈಕ್ನಲ್ಲಿ ಬರಲು ನಿರಾಕರಿಸಿದ ಮಹಿಳೆಯ ಮೇಲೆ ಹೆಲ್ಮೆಟ್ನಿಂದ ಹಲ್ಲೆ ಮಾಡಿದ ಸವಾರ!
ಇದು ವಿಶ್ವದ ಶ್ರೀಮಂತ ಬೆಕ್ಕು! ಇದರ ಒಟ್ಟು ಆಸ್ತಿಯ ಮೌಲ್ಯ ತಿಳಿದರೆ ನಿಮ್ಮ ಹುಬ್ಬೇರುವುದು ಖಚಿತ