ಇದು ವಿಶ್ವದ ಶ್ರೀಮಂತ ಬೆಕ್ಕು! ಇದರ ಒಟ್ಟು ಆಸ್ತಿಯ ಮೌಲ್ಯ ತಿಳಿದರೆ ನಿಮ್ಮ ಹುಬ್ಬೇರುವುದು ಖಚಿತ

Cat
Published on

ನವದೆಹಲಿ: ಪ್ರಪಂಚದಾದ್ಯಂತ ಅನೇಕ ಬಿಲಿಯನೇರ್‌ಗಳಿದ್ದಾರೆ. ಈ ಪಟ್ಟಿಯಲ್ಲಿ ಮೊದಲ 10 ಸ್ಥಾನಗಳಲ್ಲಿ ಭಾರತೀಯರೂ ಇದ್ದಾರೆ. ಅವರ ಆಸ್ತಿ ಕೋಟಿಗಟ್ಟಲೆ ಇರುವುದು ಎಲ್ಲರಿಗೂ ಗೊತ್ತು. ಆದರೆ, ಬೆಕ್ಕುಗಳಿಗೂ ಕೋಟಿ ಕೋಟಿ ಆಸ್ತಿ ಇದೆ ಅಂದ್ರೆ ನೀವು ನಂಬುತ್ತೀರಾ? ನಂಬಲೇಬೇಕು. ಬೆಕ್ಕುಗಳು ಸಹ ತಮ್ಮ ಸ್ವಂತ ಆಸ್ತಿಯನ್ನು ಗಳಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಪ್ರಪಂಚದಾದ್ಯಂತ ಕೋಟ್ಯಾಧಿಪತಿ ಬೆಕ್ಕುಗಳೂ ಇವೆ.

ಅಮೆರಿಕದ ಪಾಪ್​ ಸ್ಟಾರ್​ ಆಗಿರುವ ಟೈಲರ್​ ಸ್ವಿಫ್ಟ್​ ಅವರ ಬೆಕ್ಕು ನಮ್ಮೆಲ್ಲರಿಗಿಂತಲೂ ಶ್ರೀಮಂತವಾಗಿದೆ ಎಂಬುದು ನಿಮಗೆ ಗೊತ್ತಾ? ಹೊಸ ವರದಿಗಳ ಪ್ರಕಾರ ಟೈಲರ್​ ಅವರ ಒಲಿವಿಯಾ ಬೆನ್ಸನ್​ ಹೆಸರಿನ ಬೆಕ್ಕು ವಿಶ್ವದ ಶ್ರೀಮಂತ ಸಾಕು ಪ್ರಾಣಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ರೋಲಿಂಗ್ ಸ್ಟೋನ್ಸ್ ವರದಿಯ ಪ್ರಕಾರ ಬೆಕ್ಕಿನ ಆಸ್ತಿಯ ಅಂದಾಜು ಮೌಲ್ಯ 97 ಮಿಲಿಯನ್ ಡಾಲರ್​ (ಸುಮಾರು ರೂ 800 ಕೋಟಿ) ಇದೆ.

ಆಲ್ ಅಬೌಟ್ ಕ್ಯಾಟ್ಸ್ ಎಂಬ ವೆಬ್‌ಸೈಟ್‌ನಿಂದ ಪಟ್ಟಿಯನ್ನು ಸಂಗ್ರಹಿಸಲಾಗಿದೆ. ಇದು ಇನ್‌ಸ್ಟಾಗ್ರಾಮ್ ಡೇಟಾವನ್ನು ಬಳಸಿಕೊಂಡು ಒಲಿವಿಯಾ ಬೆಕ್ಕಿನ ಆಸ್ತಿಯ ಮೌಲ್ಯವನ್ನು ಲೆಕ್ಕಹಾಕಿದೆ. ಆನ್‌ಲೈನ್ ಟೂಲ್, ಇನ್‌ಫ್ಲುಯೆನ್ಸ್ ಮಾರ್ಕೆಟಿಂಗ್ ಹಬ್ ಹಾಗೂ ಇನ್​ಸ್ಟಾಗ್ರಾಂನ ಪ್ರತಿ ಪೋಸ್ಟ್‌ಗೆ ಪ್ರತಿ ಸಾಕುಪ್ರಾಣಿಗಳ ಗಳಿಕೆಯನ್ನು ಅಂದಾಜು ಮಾಡಲಾಗಿದೆ.

ಒಲಿವಿಯಾ Instagram ಪ್ರಭಾವದ ಪ್ರಪಂಚದ ಹೊರಗೂ ತನ್ನ ಯಶಸ್ಸನ್ನು ಕಂಡುಕೊಂಡಿದ್ದಾಳೆ. ಹಲವಾರು ಸಂಗೀತ ವಿಡಿಯೋಗಳಲ್ಲಿ ತನ್ನ ಮಾಲೀಕರೊಂದಿಗೆ ನಟಿಸಿ, ತನ್ನದೇ ಆದ ವ್ಯಾಪಾರದ ಮಾರ್ಗವನ್ನು ರಚಿಸಿದೆ. ಡಯಟ್ ಕೋಕ್ ಮತ್ತು ನೆಡ್ ಸ್ನೀಕರ್ಸ್ ಸೇರಿದಂತೆ ಅನೇಕ ದೊಡ್ಡ ಬಜೆಟ್ ಜಾಹಿರಾತುಗಳಲ್ಲಿ ಒಲಿವಿಯಾ ನಟಿಸಿದೆ.

ಆಲ್ ಅಬೌಟ್ ಕ್ಯಾಟ್ಸ್ ವೆಬ್​ಸೈಟ್​ ಪ್ರಕಾರ, ಒಲಿವಿಯಾ ಮೌಲ್ಯವು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದು ಬೆಕ್ಕು ನಲಾ ಕ್ಯಾಟ್, ಅಂದಾಜು 100 ಮಿಲಿಯನ್ ಡಾಲರ್​​ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಗುಂಥರ್ VI ಹೆಸರಿನ ಬೆಕ್ಕು 500 ಮಿಲಿಯನ್ ಡಾಲರ್​ ಆಸ್ತಿಯೊಂದಿಗೆ ವಿಶ್ವದ ಶ್ರೀಮಂತ ಸಾಕುಪ್ರಾಣಿ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net