

ಬೆಂಗಳೂರು: ಜುಲೈ 19 ರಂದು ಬನಶಂಕರಿಯಲ್ಲಿ ಬರ್ಬರವಾಗಿ ಹತ್ಯೆಯಾದ ರೌಡಿ ಶೀಟರ್ ಬಬ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್ನಗರ ಇನ್ಸ್‌ಪೆಕ್ಟರ್ ಭರತ್ರನ್ನು ವರ್ಗಾವಣೆ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ:
ಕೊಲೆಯಾದ ರೌಡಿಶೀಟರ್ ಬಬ್ಲಿ ಈ ಹಿಂದೆ ಶಾಂತಿನಗರದ ಸ್ಮಶಾನದ ಬಳಿ ಅರುಣ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಈ ಸಂಬಂಧ ಅಶೋಕ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಬಬ್ಲಿಯನ್ನು ಬಂಧಿಸದೇ ಇನ್ಸ್‌ಪೆಕ್ಟರ್ ಅಶೋಕ್ ನಿರ್ಲಕ್ಷ್ಯ ವಹಿಸಿ, ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪ ಹಿನ್ನೆಲೆ ವರ್ಗಾವಣೆ ಮಾಡಲಾಗಿದೆ.
ರೌಡಿಗಳಿಗೆ ಶಾಕ್ ಕೊಟ್ಟ ಪೊಲೀಸರು:
ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಪಶ್ಚಿಮ ವಿಭಾಗದ ಕೆಂಗೇರಿ ಸಬ್ಡಿವಿಷನ್ ನಲ್ಲಿ 200ಕ್ಕೂ ಹೆಚ್ಚು ಪೊಲೀಸರಿಂದ ಚಾಮರಾಜಪೇಟೆ, ಬ್ಯಾಟರಾಯನಪುರ, ಜೆಜೆ ನಗರದಲ್ಲಿ ದಾಳಿ ನಡೆಸಲಾಯಿತು.