

ಬೆಂಗಳೂರು: ಬ್ಯಾಂಕ್ನಲ್ಲಿ ಪತ್ನಿ, ಸಾರ್ವಜನಿಕರ ಎದುರೇ ರೌಡಿ ಬಬ್ಲಿ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ರವಿ ಮತ್ತು ಪ್ರದೀಪ್ ಅಲಿಯಾಸ್ ಚೋಟು ಬಂಧಿತರು. ಕೃತ್ಯದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಬಂಧನಕ್ಕಾಗಿ ಬಲೆ ಬೀಸಿದ್ದ ಪೊಲೀಸರ ತಂಡಕ್ಕೆ ಬೇಗೂರು ಕೆರೆ ಬಳಿ ಆರೋಪಿಗಳು ಅಡಗಿರುವ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಪೊಲೀಸರು ಅಲ್ಲಿಗೆ ಹೋದಾಗ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಎಚ್ಚೆತ್ತ ಕೋರಮಂಗಲ ಇನ್ಸ್ಪೆಕ್ಟರ್ ಬಿ.ಕೆ. ರವಿ ಮತ್ತು ಸಿದ್ದಪ್ಪ ಸರ್ವಿಸ್ ಪಿಸ್ತೂಲ್ ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರು. ಲೆಕ್ಕಿಸದೆ ಹಲ್ಲೆ ನಡೆಸಿದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.