ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಬೆನ್​ ಸ್ಟೋಕ್ಸ್​! ದಿಗ್ಗಜರ ಸಾಲಿನಲ್ಲಿ ಇಂಗ್ಲೆಂಡ್​ ಬ್ಯಾಟರ್​

ವಿಜಯವಾಣಿ-2024-07-28T213517.415
Published on

ಪ್ರಸ್ತುತ ವೆಸ್ಟ್ ಇಂಡೀಸ್​ ವಿರುದ್ಧ ಟೆಸ್ಟ್​ ಮ್ಯಾಚ್​ನ ನಾಯಕತ್ವ ವಹಿಸಿಕೊಂಡಿದ್ದ ಇಂಗ್ಲೆಂಡ್​ ತಂಡದ ಕ್ಯಾಪ್ಟನ್ ಬೆನ್​ ಸ್ಟೋಕ್ಸ್​, ಇಂದು ಎರಡನೇ ಇನ್ನಿಂಗ್ಸ್​ನ ಮೂರನೇ ಮ್ಯಾಚ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಮೂರನೇ ವೇಗದ ಅರ್ಧಶತಕ ಸಿಡಿಸುವ ಮೂಲಕ ಬೆನ್​ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಈ ಐತಿಹಾಸಿಕ ದಾಖಲೆ ನಿರ್ಮಿಸಿದ ಸ್ಟೋಕ್ಸ್​​ಗೆ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನಿಂದಲೂ ಇಂತಹ ದಾಖಲೆಗಳನ್ನು ನಿರ್ಮಿಸುವಲ್ಲಿ ಮುಂದಿರುವ ಇಂಗ್ಲೆಂಡ್​ ಆಟಗಾರರು, ಅಭಿಮಾನಿಗಳ ಹುಬ್ಬೇರಿಸುವಲ್ಲಿ ನಿಸ್ಸಿಮರು ಎಂದೇ ಹೇಳಬಹುದು. ಇಂದು ನಡೆದ ವೆಸ್ಟ್ ಇಂಡೀಸ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಕೇವಲ 24 ಎಸೆತಗಳಲ್ಲಿ 9 ಬೌಂಡರಿ, ಒಂದು ಸಿಕ್ಸರ್​ ಸಿಡಿಸುವ ಮೂಲಕ ವೇಗದ ಅರ್ಧಶತಕ ಬಾರಿಸಿದರು. ಅಂತಿಮವಾಗಿ 27 ಎಸೆತಕ್ಕೆ 57 ರನ್​ ಕಲೆಹಾಕಿದ ಸ್ಟೋಕ್ಸ್​, ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಹೊರಹೊಮ್ಮಿದರು.

ಇಂಗ್ಲೆಂಡ್ ಪರ ಓಪನಿಂಗ್ ಬಂದ ಸ್ಟೋಕ್ಸ್​ ಅರ್ಧಶತಕ (57)  ಬಾರಿಸುವ ಮೂಲಕ ವೆಸ್ಟ್​ ಇಂಡೀಸ್​ ಬೌಲರ್​ಗಳಿಗೆ ಬೆವರಿಳಿಸಿದ್ದಾರೆ. 10 ವಿಕೆಟ್​ಗಳ ಜಯ ಸಾಧಿಸಿದ ಇಂಗ್ಲೆಂಡ್​, 3-0 ಅಂತರದಿಂದ ಕೆರಿಬಿಯನ್​ ಪಡೆಯನ್ನು ಕ್ಲೀನ್ ಸ್ವೀಪ್​ ಮಾಡಿದೆ. ಸರಣಿಯಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದ ಆರ್ಕ್ ವುಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net