ಕೈನಲ್ಲಿರುವ ಚಿತ್ರಗಳೆಲ್ಲವೂ ಪ್ಯಾನ್ ಇಂಡಿಯಾ! ಇದು ಭಗವಂತ ನನಗೆ ಕೊಟ್ಟ ವರ ಎಂದ ಸ್ಟಾರ್​ ನಟಿ

ವಿಜಯವಾಣಿ - 2024-07-28T195640.973
Published on

ಟಾಲಿವುಡ್​ ಅಂಗಳದಿಂದ ಸದ್ಯ ಸಾಲು ಸಾಲು ಸೂಪರ್​ಹಿಟ್ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಈ ಪೈಕಿ ಸ್ಟಾರ್​ ನಟರ ಚಿತ್ರಗಳೇ ಹೆಚ್ಚು. ಪ್ರತಿಬಾರಿ ನಾಯಕನ ಹೆಸರು ಮುಂಚೂಣಿಗೆ ಬರುವುದು ನಮಗೆಲ್ಲಾ ಗೊತ್ತಿರುವ ವಿಷಯವೇ. ಆದ್ರೆ, ಪ್ರಥಮ ಬಾರಿಗೆ ನಟಿಯೊಬ್ಬರ ಜನಪ್ರಿಯತೆ ನಟರ ಹುಬ್ಬೇರಿಸಿರುವುದು ಇದೀಗ ಭಾರೀ ಆಶ್ಚರ್ಯಕ್ಕೆ ಕಾರಣವಾಗಿದೆ. ಈಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸಣ್ಣ-ಪುಟ್ಟ ಪಾತ್ರಗಳಿಂದ. ಆದರೆ ಇಂದು ಅವರ ಕೈನಲ್ಲಿರುವುದೆಲ್ಲವೂ ಪ್ಯಾನ್ ಇಂಡಿಯಾ ಸಿನಿಮಾಗಳು.

ತನ್ನ ವೃತ್ತಿಜೀವನವನ್ನು ಸ್ಟಾರ್​ ನಟರ ಸಿನಿಮಾಗಳಲ್ಲಿ ಚಿಕ್ಕ ಪಾತ್ರವನ್ನು ಮಾಡುವ ಮೂಲಕ ಪ್ರಾರಂಭಿಸಿದ ನಟಿ ಮೀನಾಕ್ಷಿ ಚೌಧರಿ, ಇಂದು ಅದೇ ಟಾಪ್ ಹೀರೋಗಳ ಜತೆ ಮುಖ್ಯಭೂಮಿಕೆಯಲ್ಲಿ ನಟಿಸುವ ಸುವರ್ಣಾವಕಾಶವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ರಿಲೀಸ್ ಆಗಿದ್ದ ಮಹೇಶ್ ಬಾಬು ನಟನೆಯ 'ಗುಂಟೂರು ಕಾರಂ' ಚಿತ್ರದಲ್ಲಿ ಲೀಡ್​ ರೋಲ್​ನಲ್ಲಿ ಕಾಣಿಸಿಕೊಂಡ ಮೀನಾಕ್ಷಿಗೆ ಇದೀಗ ಸಾಲು ಸಾಲು ಸಿನಿಮಾಗಳ ಆಫರ್ ಹುಡುಕಿಕೊಂಡು ಬರುತ್ತಿವೆ.

ವಿಜಯ್ ಆಂಥೋನಿ ನಟನೆಯ 'ಕೋಲೆ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಮೀನಾಕ್ಷಿ ಚೌಧರಿ, ಪ್ರಸ್ತುತ ವಿಜಯ್ ಅಭಿನಯದ 'ಗೋಟ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೇವಲ ಟಾಲಿವುಡ್​ ಮಾತ್ರವಲ್ಲದೇ ತಮಿಳು ಚಿತ್ರರಂಗದಲ್ಲಿ ಆಫರ್ ಪಡೆಯುತ್ತಿರುವ ಚೌಧರಿ, ಈ ಬೆಳವಣಿಗೆ, ನಟಿಸುವ ಅವಕಾಶಗಳು ದೇವರು ನನಗೆ ಕೊಟ್ಟ ವರ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಫರ್​ಗಳು ನನ್ನ ಹುಡುಕಿಕೊಂಡು ಬರುತ್ತಿವೆ ಎಂದರು.

"ನಟ ವೆಂಕಟೇಶ್ ಅವರ ಹೊಸ ತೆಲುಗು ಚಿತ್ರದೊಂದಿಗೆ ವರುಣ್ ತೇಜ್ ನಟನೆಯ 'ಮಟ್ಕಾ' ಚಿತ್ರದಲ್ಲಿಯೂ ನಟಿಸುತ್ತಿದ್ದೇನೆ. ಸದ್ಯ ನನ್ನ ಕೈಯಲ್ಲಿರುವುದು ಪ್ಯಾನ್ ಇಂಡಿಯಾ ಚಿತ್ರಗಳೆ. ಇದನ್ನೆಲ್ಲ ನೋಡುತ್ತಿದ್ದರೆ ಒಂದು ಕಡೆ ಖುಷಿಯಾದರೆ ಇನ್ನೊಂದು ಕಡೆ ತುಂಬ ಭಯವು ಆಗ್ತಿದೆ. ಸಾಕಷ್ಟು ಒತ್ತಡವೂ ಇದೆ. ಯಂಗ್ ಹೀರೋಗಳು ಹಾಗೂ ಟಾಪ್ ಹೀರೋಗಳ ಜತೆ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಖಷಿಯಿದೆ" ಎಂದು ಹೇಳಿದರು. ಸೆಪ್ಟಂಬರ್​ನಲ್ಲಿ ಮೀನಾಕ್ಷಿ ನಟಿಸಿರುವ ಎರಡು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net