ಹಳಿ ತಪ್ಪಿದ Bellary-Ghaziabad ಟ್ರೈನ್​; 39 ರೈಲುಗಳ ಸಂಚಾರ ರದ್ದು, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

Bellary to Gaziabad
Published on

ತೆಲಂಗಾಣ: ಬಳ್ಳಾರಿಯಿಂದ ಉತ್ತರ ಪ್ರದೇಶದ ಗಾಜಿಯಾಬಾದ್​ಗೆ (Bellary-Ghaziabad)  ಕಬ್ಬಿಣದ ಅದಿರು ಸಾಗಿಸುತ್ತಿದ್ದ ಗೂಡ್ಸ್​ ಟ್ರೈನ್​ನ 12 ಬೋಗಿಗಳು (ವ್ಯಾಗ್​ಗಳು) ಹಳಿ ತಪ್ಪಿದ ಪರಿಣಾಮ 39 ಪ್ಯಾಸೆಂಜರ್​​ ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ರಾಘವಪುರಂ ಮತ್ತು ರಾಮಗುಂಡಂ ಮಧ್ಯೆ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ಇದರಿಂದ ಸೌತ್ ಸೆಂಟ್ರಲ್​ ರೈಲು ವಿಭಾಗದ(ಎಸ್​ಸಿಆರ್​) ಆನೇಕ ರೈಲುಗಳಿಗೆ ವ್ಯಾಪಕ ಆಡಚರಣೆ ಉಂಟಾಗಿದೆ. 39 ರೈಲುಗಳನ್ನು ಸಂಚಾರ ರದ್ದು ಮಾಡಲಾಗಿದ್ದು, 69 ರೈಲುಗಳ ಸಂಚಾರ ಬದಲಾವಣೆ ಮಾಡಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಹಳಿ ತಪ್ಪಿದ ಬೋಗಿಗಳ ತಗೆಯಲು ದೊಡ್ಡ ಕ್ರೆನ್​ಗಳ ಮೂಲಕ ಕಾರ್ಯಚಾರಣೆ ನಡೆಯುತ್ತಿದ್ದು, ತಾತ್ಕಾಲಿಕವಾಗಿ ಬೇರೆ ಟ್ರಾಕ್​ ನಿರ್ಮಿಸಲಾಗುತ್ತಿದೆ. ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಗುರುವಾರ ಅಥವಾ ಶುಕ್ರವಾರ ವೇಳೆಗೆ ರೈಲುಗಳ ಸಂಚಾರ ಪುನಾರಂಭಗೊಳ್ಳಲಿದೆ ಎಂದು ಎಸ್​ಸಿಆರ್  ಸಾರ್ವಜನಿಕ ಸಂಪರ್ಕ ಮುಖ್ಯ ಅಧಿಕಾರಿ ಎ.ಶ್ರೀಧರ್​ ತಿಳಿಸಿದ್ದಾರೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್​ ಅವರು ಮಾಹಿತಿ ಪಡೆದಿದ್ದು, ಕಾರ್ಯಚಾರಣೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ಕೊಟ್ಟಿದ್ದಾರೆ. ಹಳಿ ತಪ್ಪಿದ ಪರಿಣಾಮ ದಕ್ಷಿಣ ಭಾರತಕ್ಕೆ ಬರುವ ಎಕ್ಸ್​ಪ್ರೆಸ್​ಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹೈದರಾಬಾದ್​ನ ಕರೀಂ ನಗರ, ನಾಂದೇಡ್​ ಮತ್ತು ತಿರುಪತಿಗೆ ಹೊರಡುವ ರೈಲುಗಳನ್ನು ಬಂದ್​ ಮಾಡಲಾಗಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net