

ಬೆಳಗಾವಿ: ಪತಿ ಪರಸ್ತ್ರೀಯೊಂದಿಗೆ ಓಡಿ ಹೋಗಿದ್ದಾನೆ ಎಂದು ಬೆಳಗಾವಿಯಲ್ಲಿ ಮಾರ್ಚ್ 28ರಂದು ಮಹಿಳೆಯೊರ್ವಳು ದಾಖಲಿಸಿದ್ದ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಎಪಿಎಂಸಿ ಪೊಲೀಸರು ಈ ಪ್ರಕರಣ ಆರೋಪಿಗಳನ್ನು ಸರೆಹಿಡಿದಿದ್ದಾರೆ.
ಬೆಳಗಾವಿಯ ಅಂಬೇಡ್ಕರ್ ನಗರ ನಿವಾಸಿ ರಮೇಶ ಕಾಂಬಳೆ (38) ಕೊಲೆಯಾದ ದುರ್ದೈವಿ. ಪರಪುರುಷನ ಜತೆಗಿನ ಸಂಬಂಧಕ್ಕಾಗಿ ಮಹಿಳೆ ತನ್ನ ಸ್ನೇಹಿತರೊಂದಿಗೆ ಸೇರಿ ಗಂಡನನ್ನೇ ಕೊಂದಿದ್ದಾಳೆ. ಬೆಳಗಾವಿ ಎಪಿಎಂಸಿ ಪೊಲೀಸರಿಂದ ಮೃತನ ಪತ್ನಿ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಮನೆಯಲ್ಲಿ ಮೊಬೈಲ್ ಬಿಟ್ಟು ಮಾರ್ಚ್ 28ರಂದು ರಮೇಶ್ ನಾಪತ್ತೆಯಾಗಿದ್ದ. ಏಪ್ರಿಲ್ 5ರಂದು ಗಂಡ ರಮೇಶ್ ನಾಪತ್ತೆ ಆಗಿದ್ದಾನೆಂದು ಪತ್ನಿ ಸಂಧ್ಯಾ ದೂರು ನೀಡಿದ್ದಳು. ಪತಿ ಪರಸ್ತ್ರೀಯೊಂದಿಗೆ ಓಡಿ ಹೋಗಿದ್ದಾನೆ ಎಂದು ಕಥೆ ಕಟ್ಟಿದ್ದಳು. ರಮೇಶ ಫೋನ್ ಮನೆಯಲ್ಲೇ ಇದ್ದರೂ ಯಾವುದೇ ಸ್ನೇಹಿತರ ಕರೆ ಬರದಿದ್ದಾಗ ರಮೇಶ್ ಪೋಷಕರಿಗೆ ಸಂದೇಹ ಬಂದು ಪೊಲೀಸರಿಗೆ ತಿಳಿಸಿದ್ದಾರೆ.
ರಮೇಶ ಪೋಷಕರ ದೂರಿನ ಮೆರೆಗೆ ಎಪಿಎಂಪಿ ಠಾಣೆ ಪೊಲೀಸರು, ಬಳಿಕ ರಮೇಶ್ ಪತ್ನಿ ಸಂಧ್ಯಾ ಹಾಗೂ ರಮೇಶ ಸ್ನೇಹಿತರನ್ನು ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ಪತ್ನಿ, ಸ್ನೇಹಿತರು ತಾವೇ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ರಮೇಶ್ ಪತ್ನಿ ಸಂಧ್ಯಾ ಹಾಗೂ ಬಾಳು ನಡುವೆ ಅನೈತಿಕ ಸಂಬಂಧ ಬೆಳಕಿಗೆ ಬಂದಿದೆ.
ವೃತ್ತಿಯಲ್ಲಿ ಪೇಂಟರ್ ಆಗಿದ್ದ ರಮೇಶ್ ಕಾಂಬಳೆ. ಈತನ ಸ್ನೇಹಿತ ಬಾಳು ಬಿರಂಜೆ ಹಾಗೂ ಪತ್ನಿ ಸಂಧ್ಯಾ ಮಧ್ಯೆ ಅನೈತಿಕ ಸಂಬಂಧ ಇತ್ತು. ಈ ಸಂಬಂಧಕ್ಕೆ ಅಡ್ಡಿಯಾಗಿದ್ದ ರಮೇಶ್‌ಗೆ ಪತ್ನಿ, ಸ್ನೇಹಿತನಿಂದಲೇ ಖೆಡ್ಡಾ ತೋಡಲಾಗಿತ್ತು. ಸಂಧ್ಯಾಗೆ ಆಕೆಯ ಪ್ರಿಯಕರ ಬಾಳು ಕೃತ್ಯಕ್ಕೆ ಸಹಕರಿಸಿದ್ದನು. ಬಾಳು ಸ್ನೇಹಿತರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ರಮೇಶ್ನನ್ನು ಕೊಲೆ ಮಾಡಿ ಗೋವಾದ ಚೋರ್ಲಾ ಘಾಟ್ನಲ್ಲಿ ಶವ ಬಿಸಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಮೇಶ್ ಮೃತದೇಹ ಪತ್ತೆಗಾಗಿ ಮುಂದಾಗಿದ್ದಾರೆ.