Beauty Tips | ಮೇಕಪ್​​ ಮಾಡುವಾಗ ಬ್ರಶ್​, ಸ್ಪಂಜು, ಕೈ ಬೆರಳನ್ನು ಬಳಸ್ತಿರಾ? ಇದ್ರಲ್ಲಿ ನಿಮ್ಮ ಮುಖಕ್ಕೆ ಯಾವುದು ಸೂಕ್ತ ಗೊತ್ತಾ?

Beauty Tips
Published on

ಮೇಕಪ್​​ ಮಾಡುವಾಗ ಬ್ರಶ್​, ಸ್ಪಂಜು, ಕೈ ಬೆರಳನ್ನು ಬಳಸ್ತಿರಾ? ಇದ್ರಲ್ಲಿ ನಿಮ್ಮ ಮುಖಕ್ಕೆ ಯಾವುದು ಸೂಕ್ತ ಗೊತ್ತಾ? Beauty Tips

ಮುಂಬೈ: ನಾವೆಲ್ಲರೂ ಸಾಮಾನ್ಯವಾಗಿ ಕೇಳಿದ್ದೇವೆ ( Beauty Tips ) ಮೇಕಪ್ ಮಾಡಲು ಸೆಲೆಬ್ರಿಟಿಗಳು ಹೆಚ್ಚಾಗಿ ಮೇಕಪ್ ಬ್ರಶ್​ಗೆ ಆದ್ಯತೆ ನೀಡಿದರೆ, ಮೇಕಪ್ ಕಲಾವಿದರು ತಮ್ಮ ಕೈ ಬೆರಳುಗಳನ್ನು ಬಳಸುತ್ತಾರೆ, ಇನ್ನೂ ಕೆಲವರು ಮೇಕಪ್ ಸ್ಪಂಜ್​​​ಗಳನ್ನು ಬಳಸ್ತಾರೆ ಅಂತ. ಹಾಗಾದ್ರೆ ಮೇಕಪ್​​ ಮಾಡಲು ಉತ್ತಮವಾದ ಸಾಧನ ಯಾವುದು? ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಮೇಕಪ್ ಮಾಡಲು ಸೂಕ್ತವಾದ ಸಾಧನ:

1. ಬೆರಳುಗಳು: ಹೆಚ್ಚಿನ ಜನರು ನಮ್ಮ ಮುಖಕ್ಕೆ ಬೆರಳುಗಳ ಮೂಲಕವೇ ಕ್ರೀಮ್​​, ಪೌಡರ್, ಮಾಶ್ಚರೈಸರ್​​​​​ಅನ್ನು ಹಚ್ಚುತ್ತಾರೆ. ಹೀಗೆ ಕೈ ಬೆರಳುಗಳ ಮೂಲಕ ಮೇಕಪ್​ ಮಾಡಲು ನೀವು ಬಯಸಿದರೆ, ಉಂಗುರದ ಬೆರಳು ಅತ್ಯುತ್ತಮವಾಗಿದೆ. ಏಕೆಂದರೆ ಅದು ಮುಖಕ್ಕೆ ಕಡಿಮೆ ಒತ್ತಡವನ್ನು ನೀಡುತ್ತದೆ. ಮುಖಕ್ಕೆ ಕ್ರೀಮ್, ಮಾಶ್ಚರೈಸರ್​​​​​ಅನ್ನು ಹಚ್ಚುವಾಗ ಯಾವಾಗಲೂ ರಬ್ ಮಾಡುವ ಬದಲು ಬೆರಳುಗಳಿಂದ ಟ್ಯಾಪ್ ಮಾಡುವುದು ಉತ್ತಮ. ನೆನಪಿರಲಿ, ನಿಮ್ಮ ಬೆರಳುಗಳಿಂದ ಮೇಕ್ಅಪ್ಅನ್ನು ಮಾಡುವಾಗ ಮೊದಲು ಕೈಗಳನ್ನು ತೊಳೆಯಲು ಮರೆಯದಿರಿ.

2. ಬ್ರಶ್​​​ಗಳು: ಮೇಕಪ್ ಬ್ರಶ್​ಗಳು, ನಿಮ್ಮ ಬೆರಳುಗಳಂತೆ ಉತ್ತಮವಾಗಿ ಮೇಕಪ್​​​ ಮಾಡಲು ಸಹಾಯ ಮಾಡುತ್ತದೆ. ಮೇಕಪ್​​ ಬ್ರಶ್​​​ಗಳನ್ನು ಬಳಸುವಾಗ ಎಲ್ಲ ಕ್ರೀಮ್​​, ಪೌಂಢೇಶನ್​​ಗಳನ್ನು ಒಟ್ಟಿಗೆ ಸೇರಿಸಿ ಹಚ್ಚುವುದನ್ನು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಸ್ಕಿನ್​​ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚಿದೆ.

ನಿಮ್ಮ ಚರ್ಮದ ಬಣ್ಣ ಕಾಣದ ರೀತಿಯಲ್ಲಿ ನೀವು ಮೇಕಪ್​​​ಅನ್ನು ಬಯಸಿದರೆ ಮೇಕಪ್ ಬ್ರಶ್​ ಅನ್ನು ಬಳಸುವುದು ಸೂಕ್ತ. ಮೊಡವೆಯನ್ನು ಮರೆಮಾಚಲು ನೀವು ಬ್ಯೂಟಿ ಬ್ಲೆಂಡರ್ ಸ್ಪಾಂಜ್ ​​ಅನ್ನು ಬಳಸುವ ಬದಲು ಮೇಕಪ್ ಬ್ರಶ್​ ಅನ್ನು ಬಳಸುವುದು ಒಳಿತು. ಮುಖಕ್ಕೆ ಸರಿಹೊಂದುವ ರೀತಿಯಲ್ಲಿ ಫೌಂಡೇಶನ್ ಬ್ರಶ್​ ಅನ್ನು ಬಳಸುವುದರ ಮೂಲಕ ಮೊಡವೆ ಕಲೆಗಳನ್ನು ಮರೆಮಾಚಬಹುದು. ಹಾಗೆಯೇ ಮೇಕಪ್​​​ ಮಾಡಲು ಮೊನಚಾದ ತುದಿಯ ಮೇಕಪ್ ಬ್ರಶ್​ಗಳ ಬದಲು ಮೃದುವಾದ ಬ್ರಶ್​ ಬಳಸುವುದ ಅವಶ್ಯಕವಾಗಿದೆ.

3. ಸ್ಪಂಜುಗಳು: ನೀವು ನ್ಯಾಚುರಲ್​​ ಮೇಕಪ್​​ ಅನ್ನು ಬಯಸಿದರೆ ಮೇಕಪ್​ ಸ್ಪಂಜ್ ಅತ್ಯುತ್ತಮವಾಗಿದೆ. ನಿಮ್ಮ ಮೇಕಪ್​ ಹೆಚ್ಚು ಗಂಟೆಗಳ ಕಾಲ ಉಳಿಯಳು ಮೇಕಪ್​​ ಸ್ಪಂಜ್​​​ ಸಹಾಯ ಮಾಡುತ್ತದೆ. ಬ್ರಶ್​​​ಗಳಂತೆ ಮುಖದ ಮೇಲೆ ಗೆರೆಗಳು ಬೀಳದಂತೆ ಇದು ತಡೆಯುತ್ತದೆ. ಮುಖಕ್ಕೆ ಹಚ್ಚಿದ ಕ್ರೀಮ್​ಗಳು, ಫಾಂಡೇಶನ್​​ಗಳು ಎದ್ದು ಕಾಣದ ರೀತಿಯಲ್ಲಿ ನ್ಯಾಚುರಲ್​​​ ಬ್ಯೂಟಿಯನ್ನ ಈ ಮೇಕಪ್​ ಸ್ಪಂಜ್ ನೀಡುತ್ತದೆ.

ಕೊನೆಯದಾಗಿ, ನೀವು ನಿಮ್ಮ ಮುಖಕ್ಕೆ ಸರಿ ಹೊಂದುವ ಯಾವುದೇ ಮೇಕಪ್​ ​​​ಐಟಂಗಳನ್ನು ಬಳಸುವಾಗ ಅದು ಉತ್ತಮ ಗುಣಮಟ್ಟವನ್ನು ಹೊಂದಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net