ಗ್ಲೋಯಿಂಗ್ ಸ್ಕಿನ್ ನಮ್ಮದಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಕೆಮಿಕಲ್ನಿಂದ ಚರ್ಮಕ್ಕೆ ಹಾನಿಯಾಗಬಹುದು ಎಂಬ ಭಯ ನಮ್ಮನ್ನು ಕಾಡುತ್ತಿರುತ್ತದೆ. ಈ ಆತಂಕ ಹೋಗಲಾಡಿಸಲು ಹಾಗೂ ಮೃದುವಾದ, ಹೊಳೆಯುವ ತ್ವಚೆ ನಿಮ್ಮದಾಗಬೇಕು ಎಂಬ ಆಶಯದಿಂದ ಈ ಸಿಂಪಲ್ ಟಿಪ್ಸ್ ಅನ್ನು ತಿಳಿಸಲಾಗಿದೆ. ಕಡಿಮೆ ಸಮಯದಲ್ಲಿ ಮಲ್ಲಿಗೆ ಹೂವಿನಿಂದ ಮಾಡುವ ಫೇಸ್ಪ್ಯಾಕ್ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಮಲ್ಲಿಗೆ ಹೂವು ಕಾಲಜನ್, ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಏಜಿಂಗ್ ಗುಣಗಳನ್ನು ಹೊಂದಿದೆ. ಇದು ಮುಖದಲ್ಲಿನ ಕಾಂತಿ ಹೆಚ್ಚಿಸುವುದರ ಜತೆಗೆ ಬ್ಯಾಕ್ಟೀರಿಯಾಗಳನ್ನ ಹೋಗಲಾಡಿತ್ತದೆ.

ಇದನ್ನು ಓದಿ: ಜಾಯಿಕಾಯಿಯಿಂದ ಎಷ್ಟೆಲ್ಲಾ ಪ್ರಯೋಜನೆ ಇದೆ ಗೊತ್ತಾ? ಉತ್ತಮ ಆರೋಗ್ಯಕ್ಕಾಗಿ ಈ ಟಿಪ್ಸ್
ಫೇಸ್ಪ್ಯಾಕ್ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:
- ಬೀಟ್ರೂಟ್ – 1 ಸಣ್ಣ ತುಂಡು (ಬೇಯಿಸಿದ) – ವಿಟಮಿನ್ ಸಿ ಸಮೃದ್ಧವಾಗಿದೆ
- ಬಾದಾಮಿ – 3
- ತುಳಸಿ ಎಲೆಗಳು- 3
- ದುಂಡು ಮಲ್ಲಿಗೆ ಹೂವು- 2
ತಯಾರಿಸುವ ವಿಧಾನ:
ಮೊದಲಿಗೆ ಮಿಕ್ಸರ್ ಜಾರ್ ತೆಗೆದುಕೊಂಡು ಅದರಲ್ಲಿ ಬೇಯಿಸಿದ ಬೀಟ್ರೂಟ್, ನೆನೆಸಿದ ಬಾದಾಮಿ, ತುಳಸಿ ಎಲೆಗಳು ಮತ್ತು ದುಂಡುಮಲ್ಲಿಗೆ ಹೂವನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದರ ನಂತರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು 1-2 ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ 5 ನಿಮಿಷಗಳ ಕಾಲ ಮುಖದ ಮೇಲೆ ಇರಿಸಿದ ನಂತರ ಮುಖವನ್ನು ತೊಳೆಯಿರಿ. ಮಸಾಜ್ ಮಾಡುವುದರಿಂದ ಮುಖದ ಹೊಳಪು ಹೆಚ್ಚುತ್ತದೆ ಮತ್ತು ಟ್ಯಾನ್ ಆಗಿರುವುದು ಹೋಗುತ್ತದೆ. ಮುಖದ ಮೇಲಿನ ಸುಕ್ಕು ಕಡಿಮೆಯಾಗುತ್ತದೆ. ವಾರಕ್ಕೆ 3-4 ಬಾರಿ ಈ ಫೇಸ್ಪ್ಯಾಕ್ ಅನ್ನು ಬಳಸಬಹುದು. ಚರ್ಮದ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಿ ನಂತರ ಬಳಸಿ.
ನಮ್ಮಲ್ಲಿನ ಈ ಚಿಕ್ಕ ಬದಲಾವಣೆಯೂ ಮೈಗ್ರೇನ್ ಮುನ್ಸೂಚನೆ; ಇಲ್ಲಿದೆ ಉಪಯುಕ್ತ ಮಾಹಿತಿ