ಬೆಳ್ಳಿ ಚುಕ್ಕಿ ಶುಕ್ರ ಈಗ ಸುಂದರ

Venus
Published on

| ಡಾ.ಎ.ಪಿ ಭಟ್, ಭೌತಶಾಸ್ತ್ರಜ್ಞ, ಉಡುಪಿ

ಸುಮಾರು 19 ತಿಂಗಳಿಗೊಮ್ಮೆ ಸಂಜೆಯ ಪಶ್ಚಿಮ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಗ್ರಹ ಮೇ 30ರಂದು 43 ಡಿಗ್ರಿ ಎತ್ತರದಲ್ಲಿ ಹೊಳೆಯಲಿದೆ. ಮೇ 30ರಿಂದ ಜುಲೈ ಅಂತ್ಯದವರೆಗೂ ಹೊಳಪು ಕಾಣಲಿದ್ದು, ಆಗಸ್ಟ್ ಆರಂಭದಲ್ಲಿ ಕಣ್ಮರೆಯಾಗುತ್ತದೆ.

ಪ್ರಸ್ತುತ ಮೇ 30ರಿಂದ ಭೂಮಿಗೆ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ದಿಗಂತದೆಡೆಗೆ ಕೆಳಗಿಳಿಯುತ್ತಾ ಪ್ರಭೆ ಹೆಚ್ಚಿಸಿಕೊಳ್ಳುತ್ತಾ ಜುಲೈ 7ರಂದು ಅತಿ ಹೆಚ್ಚಿನ ಪ್ರಭೆಯಲ್ಲಿ ಕಂಗೊಳಿಸುತ್ತದೆ. ಶುಕ್ರ ಈಗ ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ. ದೂರದಿಂದ ಆ.8ರ ಹೊತ್ತಿಗೆ 4 ಕೋಟಿ ಕಿ.ಮೀ.ವರೆಗೆ ಸಮೀಪಿಸುತ್ತದೆ.

ಹೀಗೆ ಶುಕ್ರ ಗ್ರಹ ಕಾಣಿಸಲು ಪ್ರಮುಖ ಕಾರಣ ಬುಧ ಗ್ರಹದಂತೆ ಸೂರ್ಯ ಭೂಮಿ ದೂರಕ್ಕಿಂತ ಕಡಿಮೆ ದೂರದಲ್ಲಿ ಇರುವುದು. ಸೂರ್ಯನಿಂದ ಬುಧ ಸುಮಾರು 6 ಕೋಟಿ, ಶುಕ್ರ 11 ಕೋಟಿ ಕಿ.ಮೀ.ಯಾದರೆ ಭೂಮಿ 15 ಕೋಟಿ ಕಿ.ಮೀ. ದೂರವಿದೆ. ಹೀಗಾಗಿ ಸೌರವ್ಯೂಹದಲ್ಲಿ ಭೂಮಿಗಿಂತ ಒಳಗಿರುವ ಈ ಎರಡು ಗ್ರಹಗಳು ರಾತ್ರಿ ಇಡೀ ಕಾಣುವುದಿಲ್ಲ. ಕಾಣುವುದೇ ಪಶ್ಚಿಮ ಆಕಾಶದಲ್ಲಿ ಸಾಯಂಕಾಲ ಹಾಗೂ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ. ಆಕಾಶದಲ್ಲಿ ಸೂರ್ಯಾಸ್ತದ ನಂತರ ಕೆಲ ಗಂಟೆಯವರೆಗೆ, ಹೆಚ್ಚೆಂದರೆ ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಹಾಗೂ ಬುಧ 27 ಡಿಗ್ರಿ ಎತ್ತರದಲ್ಲಿ ಹಾಗೂ ಕೆಲಸಮಯ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಕಾಣಸಿಗá-ತ್ತಾನೆ.

ಸೂರ್ಯನಿಂದ ಶುಕ್ರ ಸದಾ ಒಂದೇ ದೂರದಲ್ಲಿದ್ದರೂ (ಸುಮಾರು 11 ಕೋಟಿ ಕಿ.ಮೀ), ಭೂಮಿಯಿಂದ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. 19 ತಿಂಗಳಿಗೊಮ್ಮೆ ಅತೀ ಸಮೀಪ ದೂರ 4 ಕೋಟಿ ಕಿ.ಮೀ., ನಂತರ 2025 ಜನವರಿಯಲ್ಲಿ 26 ಕೋಟಿ ಕಿ.ಮೀ. ದೂರದಲ್ಲಿ ಗೋಚರಿಸá-ತ್ತಾನೆ. ಗ್ರಹಗಳಲ್ಲಿ ಬರೀಗಣ್ಣಿನಿಂದ ನೋಡಲು ಶುಕ್ರನೇ ಚೆಂದ. ಸುಮಾರು ಶೇ.95 ಇಂಗಾಲದ ಆಕ್ಸೈಡ್​ಗಳ ವಾತಾವರಣ, ಸ್ವಲ್ಪ ರಂಜಕದ ಡೈಆಕ್ಸೈಡ್​ಗಳಿಂದ ಅತಿ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿ ಫಲಿಸುವುದರಿಂದ ಶುಕ್ರ ಫಳ ಫಳ ಹೊಳೆಯá-ತ್ತಾನೆ. ದೂರದರ್ಶಕದಲ್ಲೀಗ ಶುಕ್ರ ಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರ ಬಿದಿಗೆ ಚಂದ್ರನಿಗಿಂತ ಕ್ಷೀಣವಾಗಿರá-ತ್ತದೆ. ಆ.8ರಿಂದ 19ರವರೆಗೆ ಸೂರ್ಯನಿಗೆ ನೇರ ಬಂದು ನಿಂತಾಗ ಅಸ್ತವಾಗಲಿದ್ದು, ನಂತರ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಗೋಚರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net