

ಶ್ರೀಕಾಂತ ಅಕ್ಕಿ ಬಳ್ಳಾರಿ
ಆನ್ಲೈನ್ನಿಂದ ಹಣ ಖದಿಯುತ್ತಿದ್ದ ಸೈಬರ್ ಕಳ್ಳರ ಕಣ್ಣು ಇದೀಗ ಮಹಿಳೆಯರು ಮತ್ತು ಯುವತಿಯರತ್ತ ಬಿದ್ದಿದ್ದು, ಸಮಯದ ಲಾಭ ಎತ್ತಲು ಮುಂದಾಗಿರುವ ಖದೀಮರು, ಜಾಲತಾಣಗಳಲ್ಲಿ ಅಪ್ಲೋಡ್ ಆಗುವ ಫೋಟೋಗಳನ್ನು ನಗ್ನಚಿತ್ರಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಇದನ್ನಿಟ್ಟುಕೊಂಡು ಬ್ಲಾಕ್ವೆುೕಲ್ ಮಾಡುವ ದಂಧೆ ನಡೆಸುತ್ತಿದ್ದಾರೆ.
ಕರೊನಾ ಎಫೆಕ್ಟ್ನಿಂದ ಮನೆಯಲ್ಲಿರುವ ಮಹಿಳೆಯರು ಸ್ಯಾರಿ ಚಾಲೆಂಜ್ ಸೇರಿ ನಾನಾ ಅಭಿಯಾನಗಳಲ್ಲಿ ಭಾಗವಹಿಸುವ ಮೂಲಕ ಫೋಟೋಗಳನ್ನು ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇವುಗಳನ್ನೇ ಸೈಬರ್ ವಿಕೃತಿಗಳು ದುರ್ಬಳಕೆ ಮಾಡುತ್ತಿದ್ದಾರೆ. 2018-19ನೇ ಸಾಲಿಗಿಂತ 2019-20ನೇ ಸಾಲಿನ ಜನವರಿಯಿಂದ ಏ.23ರ ವರೆಗೆ ದೇಶದಲ್ಲಿ ಮಹಿಳೆ, ಯುವತಿಯರ ಚಿತ್ರ ದುರ್ಬಳಕೆ ಪ್ರಕರಣಗಳು ಶೇ.30 ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ. ಹೀಗೆ ಪರಿವರ್ತನೆಯಾದ ನಗ್ನ ಚಿತ್ರಗಳನ್ನು ಬಳಸಿ ಕಿರುಕುಳ, ಬ್ಲಾಕ್ವೆುೕಲ್, ಚಾರಿತ್ರ್ಯಧೆ.. ಇತ್ಯಾದಿ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಸರಿ, ತಪ್ಪು ಎಂದು ಕೂಡಾ ಯೋಚಿಸದೆ ಇಂತಹ ಚಿತ್ರ, ವಿಡಿಯೋಗಳನ್ನು ಸಾವಿರಾರು ಜನರಿಗೆ ಹಂಚಿಕೊಳ್ಳುವ ಮತ್ತು ವಿಕೃತ ರೀತಿಯಲ್ಲಿ ಟ್ರೋಲ್ ಮಾಡಿ ಸಂಭ್ರಮಿಸುವ ಜನ ಹೆಚ್ಚಾಗುತ್ತಿದ್ದಾರೆ. ಅಲ್ಲದೆ ಸ್ನೇಹಿತರು, ಕುಟುಂಬ ಸದಸ್ಯರು ಜತೆಗಿರುವ ಚಿತ್ರಗಳನ್ನು ‘ಡೀಪ್ ನ್ಯೂಡ್‘ನಂತಹ ಇಂಟರ್ನೆಟ್ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಿದಾಗ ಅವು ನಗ್ನ ಚಿತ್ರಗಳಾಗಿ ಪರಿವರ್ತನೆಯಾಗುತ್ತವೆ. ಈ ಮೊದಲು ಸಾರ್ವಜನಿಕರ ತೀವ್ರ ಪ್ರತಿಭಟನೆಗೆ ಮಣಿದು 2019ರಲ್ಲಿ ಡೀಪ್ನ್ಯೂಡ್ ಸೌಲಭ್ಯ ನಿಲ್ಲಿಸಲಾಗಿತ್ತು. ಆದರೆ, ಅದಕ್ಕಿಂತ ಹೆಚ್ಚು ಸೌಲಭ್ಯ ಹೊಂದಿರುವ ತಂತ್ರಾಂಶಗಳನ್ನು ಈಗ ವಿಕೃತಿಗಳು ಬಳಸುತ್ತಿರುವುದು ಆತಂಕದ ವಿಷಯವಾಗಿದೆ.
ಸಂಬಂಧಿಯಿಂದಲೇ ದುರ್ಬಳಕೆ
ಬಳ್ಳಾರಿ ನಗರದ ಯುವತಿ, ಸ್ಯಾರಿ ಚಾಲೆಂಜ್ ಅಭಿಯಾನದಲ್ಲಿ ಭಾಗವಹಿಸಿ ಫೋಟೋವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಳು. ಆ ಫೋಟೋವನ್ನು ಯುವಕ ಅಶ್ಲೀಲವಾಗಿ ಬದಲಿಸಿ, ಬೇರೊಂದು ನಂಬರ್ನಿಂದ ಯುವತಿಗೆ ಕರೆ ಮಾಡಿ ಬ್ಲಾಕ್ವೆುೕಲ್ ಮಾಡಿದ್ದಾನೆ. ಹೆದರಿದ ಯುವತಿ, ತಂದೆ-ತಾಯಿಗೆ ವಿಷಯ ತಿಳಿಸಿದ್ದಾಳೆ. ಕುಟುಂಬದ ಸದಸ್ಯರು ನಂಬರ್ ತೆಗೆದುಕೊಂಡು ಕರೆ ಮಾಡಿ ಪೂರ್ತಿ ವಿಚಾರಿಸಿದಾಗ ಆ ಯುವಕ ಯುವತಿಯ ಸಂಬಂಧಿಕರ ಪುತ್ರ ಎಂಬುದು ಬಯಲಿಗೆ ಬಂದಿದೆ. ಮನೆಯಲ್ಲಿ ರಾಜೀ ಸಂಧಾನ ಮಾಡಿಕೊಂಡ ಕಾರಣ ಪ್ರಕರಣ ಸೈಬರ್ ಕ್ರೖೆಂ ಠಾಣೆ ಮೆಟ್ಟಿಲೇರಲಿಲ್ಲ.
ಎಚ್ಚರ ಅಗತ್ಯ
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುವ ಮುನ್ನ ಮಹಿಳೆ, ಯುವತಿಯರು ಎಚ್ಚರಿಕೆ ವಹಿಸುವುದು ಅಗತ್ಯ. ಸೆಟ್ಟಿಂಗ್ನಲ್ಲಿ ತಮ್ಮ ಪರಿಚಯವಿರುವವರಿಗೆ ಮಾತ್ರ ಫೋಟೋ ವೀಕ್ಷಿಸಲು ಅವಕಾಶವಿರುವಂತೆ ಅಪ್ಲೋಡ್ ಮಾಡಬಹುದು. ಪಬ್ಲಿಕ್ ಹೆಸರಿನ ಸೆಟ್ಟಿಂಗ್ನೊಂದಿಗೆ ಫೇಸ್ಬುಕ್, ಟ್ವಿಟರ್ ಸೇರಿ ನಾನಾ ಜಾಲತಾಣಗಳಲ್ಲಿ ಶೇರ್ ಮಾಡಿದಾಗ ಸೈಬರ್ ಕಳ್ಳರು ಇಂಥ ಫೋಟೋಗಳನ್ನು ನಗ್ನ ಚಿತ್ರಗಳನ್ನಾಗಿ ಪರಿವರ್ತಿಸುತ್ತಾರೆ.