

ಪ್ಯಾರಿಸ್: ತಂಬಾಕಿನಲ್ಲಿರುವ ನಿಕೋಟಿನ್ ಧೂಮಪಾನಿಗಳಲ್ಲಿ ಕರೊನಾ ವೈರಸ್ ಸೋಂಕು ತಗಲುವುದು ಕಡಿಮೆ ಎಂಬುದು ಆರಂಭಿಕ ಸಂಶೋಧನೆಯಲ್ಲಿ ಪತ್ತೆಯಾಗಿದೆ.
ಇದನ್ನೇ ಆಧಾರವಾಗಿಟ್ಟುಕೊಂಡು ನಿಕೋಟಿನ್ ಕರೊನಾ ವೈರಸ್ ಸೋಂಕನ್ನು ತಡೆಯುತ್ತದೆಯೇ ಎಂಬುದನ್ನು ಪೂರ್ಣ ಪ್ರಮಾಣದಲ್ಲಿ ಪತ್ತೆ ಮಾಡಲು ಫ್ರಾನ್ಸ್ನ ಸಂಶೋಧಕರು ಈಗ ಮುಂದಾಗಿದ್ದಾರೆ.
ಪಿಟಿ ಸಾಲ್ ಪೆಟ್ರಿಯೆರ್ ಆಸ್ಪತ್ರೆಯ ಸಂಶೋಧಕರು, ಆಸ್ಪತ್ರೆಗೆ ದಾಖಲಾದ ರೋಗಿಗಳು ಹಾಗೂ ಸಾಮಾನ್ಯ ಜನರನ್ನು ನಿಕೋಟಿನ್ ಸಂಶೋಧನೆಗೆ ಒಳಪಡಿಸಲು ಫ್ರೆಂಚ್ ಸರ್ಕಾರದ ಅನುಮತಿಗೆ ಕಾಯುತ್ತಿದ್ದಾರೆ.
ಆಸ್ಪತ್ರೆಯ ಸಂಶೋಧಕರು ಧೂಮಪಾನಿಗಳಲ್ಲಿ ಕರೊನಾ ವೈರಸ್ ಸೋಂಕು ತಗುಲುವುದು ಕಡಿಮೆ ಪ್ರಮಾಣವಾಗಿದೆ ಎಂಬುದನ್ನು ಈಗಾಗಲೇ ಸಂಶೋಧನೆಯಿಂದ ಪತ್ತೆ ಮಾಡಿದ್ದಾರೆ. ಧೂಮಪಾನಿಗಳಲ್ಲಿ ಸೋಂಕು ಹರಡಿದರೆ ಅವರಲ್ಲಿ ತೀವ್ರವಾದ ಪರಿಣಾಮ ಬೀರುವುದಿಲ್ಲ ಎಂಬುದನ್ನು ಕೂಡ ಕಂಡು ಹಿಡಿದಿದ್ದಾರೆ.
ಆದರೆ ಧೂಮಪಾನಿಗಳ ಮೇಲೆ ವೈರಸ್ ತೀವ್ರವಾದ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿವರೆಗಿನ ಸಂಶೋಧನೆಯಾಗಿದೆ. ಪ್ಯಾರಿಸ್ ಸಂಶೋಧಕರ ಈ ಹೊಸ ಸಂಶೋಧನೆ ನಿಜವಾಗುತ್ತಾ ಕಾದು ನೋಡಬೇಕಾಗಿದೆ. (ಏಜೆನ್ಸೀಸ್)