BBKS11: ವೈಲ್ಡ್​ಕಾರ್ಡ್​ ಸ್ಪರ್ಧಿ ಹೊರಹಾಕುವ ಸಂಚು ಮಡಿಕೆಯಲ್ಲಿ ನುಚ್ಚುನೂರು!

ವಿಜಯವಾಣಿ - 2024-11-18T195419.761
Published on

ಬೆಂಗಳೂರು: ಕಳೆದ ಭಾನುವಾರದ ಸಂಚಿಕೆಯಲ್ಲಿ ಏಳು ವಾರಗಳನ್ನು ಪೂರೈಸುವ ಮೂಲಕ 50 ದಿನಕ್ಕೆ ಕಾಲಿಟ್ಟ ಬಿಗ್ ಬಾಸ್​ ಮಂದಿ, ಇದೀಗ ಸೆಕಂಡ್​ ಆಫ್​ ಪಯಣವನ್ನು ಆರಂಭಿಸಿದ್ದಾರೆ. ಈ ಓಟದಿಂದ ಹೊರಬಿದ್ದ ಸುಂದರಿ ಅನುಷಾ ರೈ, ಬಿಗ್ ಮನೆಯಿಂದ ಕಣ್ಣೀರಿಡುತ್ತಲೇ ಹೊರಬಂದರು. ಒಂದೆಡೆ ಅನುಷಾ ಎಲಿಮಿನೇಟ್​ ಆದರೆ, ಇಬ್ಬರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಒಳಗೆ ಬಂದಿರುವುದು ಸದಸ್ಯರಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ರಜತ್​ ಕಿಶನ್​ ಮತ್ತು ತೆಲುಗು ಬಿಗ್​ ಬಾಸ್​ನಲ್ಲಿ ಕನ್ನಡ ಕಂಪನ್ನು ಹರಡಿಸಿದ್ದ ಶೋಭಾ ಶೆಟ್ಟಿ ವೈಲ್ಡ್​ಕಾರ್ಡ್​ನಲ್ಲಿ ಎಂಟ್ರಿ ಕೊಟ್ಟಿರುವ ಘಟಾನುಘಟಿ ಸ್ಪರ್ಧಿಗಳು. ಇವರಿಬ್ಬರ ಪೈಕಿ ರಜತ್​ರನ್ನು ಆದಷ್ಟು ಬೇಗ ಈ ಸ್ಪರ್ಧೆಯಿಂದ ಹೊರಗಿಡಲು ಉಗ್ರಂ ಮಂಜು ಹೂಡಿದ್ದ ಮಾಸ್ಟರ್​ಪ್ಲ್ಯಾನ್​ ಸದ್ಯ ಮಡಿಕೆಯಲ್ಲಿ ಚೂರಾಗಿದೆ.

ರಜತ್​ ಆಡುತ್ತಿದ್ದ ಮಾತುಗಳನ್ನು ಸೂಕ್ಷ್ಮವಾಗಿ ಆಲಿಸಿದ ಮಂಜು, ಮನೆಯ ಮಾಜಿ ಕ್ಯಾಪ್ಟನ್​ ತ್ರಿವಿಕ್ರಮ್ ಮತ್ತು ಧರ್ಮ ಕೀರ್ತಿರಾಜ್​ಗೆ ಒಂದು ಮನವಿ ಮಾಡಿದರು. ಆತ ಅಖಾಡಕ್ಕೆ ಹೊಸಬ್ಬ. ಸರಿಯಾದ ಟಕ್ಕರ್, ಪೈಪೋಟಿ ನಾವು ಕೊಡಬೇಕು. ನಾವೇನು ಎಂಬುದನ್ನು ಅವನಿಗೆ ತೋರಿಸೋಣ, ನನ್ನ ಜತೆ ಕೈಜೋಡಿಸು ಎಂದು ತ್ರಿವಿಕ್ರಮ್ ನೋಡುತ ಹೇಳಿದರು. ಇದಕ್ಕೆ ಒಪ್ಪಿಗೆ ನೀಡಿದ ತ್ರಿವಿಕ್ರಮ್​, ಇನ್ನು ಈಗ ಎಂಟ್ರಿ ಅಲ್ವಾ, ನೋಡೋಣ ಎಂದು ತಿಳಿಸಿದ್ದರು. ಆದರೆ, ಒಂದೇ ಒಂದು ಮಡಿಕೆ ಆ ಎಲ್ಲಾ ಪ್ಲ್ಯಾನ್​ಗಳನ್ನು ಇದೀಗ ಚೂರು ಚೂರು ಮಾಡಿದೆ.

ಈ ಬಾರಿ ನಾಮಿನೇಷನ್​ ಪ್ರಕ್ರಿಯೆಯನ್ನು ವಿಭಿನ್ನವಾಗಿ ನೀಡಿದ ಬಿಗ್ ಬಾಸ್​, ತಮ್ಮ ಮುಂದಿರುವ ಮಡಿಕೆಯನ್ನು ಆಯಾ ಸ್ಪರ್ಧಿಗಳ ಹೆಸರನ್ನು ಸೂಚಿಸಿ, ನಾಮಿನೇಟ್ ಮಾಡಬೇಕು ಎಂದು ತಿಳಿಸಿದರು. ಇದರ ಅನ್ವಯ ಮಂಜು ಮತ್ತು ತ್ರಿವಿಕ್ರಮ್​ ಎದುರು-ಬದುರು ನಿಂತು, ವಾಕ್ಸಮರ ನಡೆಸಿದ್ದಾರೆ. ಮಡಿಕೆ ಹೊಡೆದು, ತ್ರಿವಿಕ್ರಮ್ ವಿರುದ್ಧ ಮಂಜು ಕಿಡಿಕಾರಿದರೆ, ಧ್ವನಿ ಏರಿಸಿ ಮಾತನಾಡಲು ನಮಗೂ ಬರುತ್ತೆ ಎಂದು ಹೇಳುತ ತ್ರಿವಿಕ್ರಮ್​ ಮಂಜು ಹೆಸರಿನ ಮಡಿಕೆಯನ್ನು ಪುಡಿ ಮಾಡಿದ್ದಾರೆ. ಸದ್ಯ ಇವರಿಬ್ಬರು ಹಾಕಿಕೊಂಡಿದ್ದ ಸಂಚು ಇದೀಗ ಮಡಿಕೆಯಲ್ಲಿಯೇ ನುಚ್ಚುನೂರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net