

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾದ ಮೊದಲ ದಿನದಿಂದಲೂ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಮನೆಯ ಸದಸ್ಯರು ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಇಬ್ಬರು ಮಹಿಳಾ ನಾಯಕರ ನೇತೃತ್ವದಲ್ಲಿ ಟಾಸ್ಕ್ ಆಡಿ, ಪೂರ್ಣಗೊಳಿಸಿದ್ದಾರೆ. ತನಿಶಾ ಮತ್ತು ನಮ್ರತಾ ತಂಡಗಳು ಸ್ಪರ್ಧೆಯ ಜತೆಗೆ ಮಾತಿನ ಜಟಾಪಟಿ ಕೂಡ ನಡೆಸಿದೆ. ಇಂದು ಬಿಗ್ ಮನೆಯ ಬಿಗ್ ಸ್ಪರ್ಧಿಗಳಾದ ವಿನಯ್ ಮತ್ತು ಕಾರ್ತಿಕ್‌ಗೆ ಬಿಗ್ ಬಾಸ್ ಶಿಕ್ಷೆಯೊಂದನ್ನು ನೀಡಿದ್ದಾರೆ.
ಬಿಗ್‌ಬಾಸ್ ಮನೆ ಅಂದಮೇಲೆ ಎಲ್ಲದಕ್ಕೂ ನೀತಿ-ನಿಯಮಗಳು ಇದ್ದೇ ಇರತ್ತದೆ. ಅದನ್ನು ಮೀರಿದವರಿಗೆ ಶಿಕ್ಷೆಯೂ ಅಷ್ಟೇ ಖಚಿತವಾಗಿ ಸಿಗುತ್ತದೆ. ಈ ವಿಷಯ ವೀಕ್ಷಕರಿಗೆ ಸ್ಪಷ್ಟವಾಗಿ ತಿಳಿದಿದೆ. ನಿಯಮ ಉಲ್ಲಂಘಿಸಿದವರಿಗೆ ಶಿಕ್ಷಿಸುವುದು ಕಡ್ಡಾಯವಾದ ಹಿನ್ನಲೆ ತಪ್ಪು ಮಾಡಿದ
ವಿನಯ್ ಮತ್ತು ಕಾರ್ತಿಕ್‌ಗೆ ಪನೀಶ್ಮೆಂಟ್ ದೊರತಿದೆ.
ವಿನಯ್ ಮತ್ತು ಕಾರ್ತಿಕ್ ಮೊದಲಿನಿಂದಲೂ ತಮ್ಮ ಸ್ನೇಹಸಂಬಂಧವನ್ನು ಉಳಿಸಿಕೊಂಡು ಬಂದವರು. ಪರಸ್ಪರ ವಿರುದ್ಧ ತಂಡಗಳಲ್ಲಿ ಆಡುವಾಗಲೂ, ಜಿದ್ದಾಜಿದ್ದಿನ ಸ್ಪರ್ಧೆ ಇದ್ದಾಗಲೂ, ಟಾಸ್ಕ್ ಕಾರಣಕ್ಕೆ ಮನೆಯೊಳಗೆ ಪರಸ್ಪರ ಮಾತಿಗೆ ಮಾತು ಬೆಳೆದಾಗಲೂ ಇವರಿಬ್ಬರೂ ನಂತರ ಅದನ್ನು ಮರೆತು ಒಂದಾಗಿದ್ದರು. ಇದೀಗ ಈ ಸ್ನೇಹದ ಜೋಡಿ ಜೊತೆಜೊತೆಯಲ್ಲಿಯೇ ಶಿಕ್ಷೆ ಅನುಭವಿಸುವ ಸಂದರ್ಭವೂ ಬಂದಿದೆ. ಆಗಿದ್ದಿಷ್ಟೆ!
ಬೆಳಗ್ಗೆ ಎದ್ದಾಗ ಸ್ಪರ್ಧಿಗಳಿಗೆ ಬಿಗ್‌ಬಾಸ್ ಧ್ವನಿ ಕೇಳಿಸಿದೆ. ಆ ಧ್ವನಿ ಯಾವುದೋ ಸೂಚನೆ ನೀಡುವುದಕ್ಕಾಗಲಿ, ಶುಭಾಶಯ ಕೋರುವುದಕ್ಕಾಗಿ ಅಥವಾ ಟಾಸ್ಕ್ ನೀಡುವುದಕ್ಕಾಗಲಿ ಬಂದಿದ್ದಲ್ಲ. ಬದಲಿಗೆ ಶಿಕ್ಷೆ ನೀಡುವುದಕ್ಕೆ. ವಿನಯ್ ಹಾಗೂ ಕಾರ್ತಿಕ್ ಇಬ್ಬರೂ ರಾತ್ರಿ ಲೈಟ್ ಆಫ್ ಆಗುವ ಮುನ್ನವೇ ನಿದ್ರೆಗೆ ಜಾರಿದ್ದರು. 'ಇನ್ನೂ ಮನೆಯ ಮಹತ್ವಗಳನ್ನು ಅರಿಯದೇ ಬದುಕುತ್ತಿರುವ ವಿನಯ್ ಹಾಗೂ ಕಾರ್ತಿಕ್ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ’ ಎಂದು ಬಿಗ್‌ಬಾಸ್ ಧ್ವನಿ ಹೇಳುತ್ತಿರುವ ಹಾಗೆಯೇ ಮನೆಯವರೆಲ್ಲರೂ ಒಮ್ಮೆ ಅಚ್ಚರಿಗೊಂಡಿದ್ದಾರೆ.
ಬಿಗ್‌ಬಾಸ್ ವಿಧಿಸಿದ ಶಿಕ್ಷೆಯೂ ಅಷ್ಟೇ ಪ್ರಖರವಾಗಿತ್ತು. ವಿನಯ್ ಮತ್ತು ಕಾರ್ತಿಕ್ ಅವರನ್ನು ಗಾರ್ಡನ್ ಏರಿಯಾದಲ್ಲಿ ಕುರ್ಚಿಯಲ್ಲಿ ಕೂಡಿಸಿ, ಮನೆಯವರೆಲ್ಲರೂ ಅವರ ಮುಖದ ಮೇಲೆ ತಣ್ಣೀರು ಎರಚಿ, ‘ಎದ್ದೇಳಿ ವಿನಯ್, ಎದ್ದೇಳಿ ಕಾರ್ತಿಕ್’ ಎಂದು ಹೇಳಿದ್ದಾರೆ. ಬೆಳಗಿನ ಚಳಿಯಲ್ಲಿ ಮೊದಲೇ ಮುದುರಿದ್ದ ವಿನಯ್ ಮತ್ತು ಕಾರ್ತಿಕ್ ತಣ್ಣೀರ ಸ್ನಾನದಿಂದ ಗಡಗಡ ನಡುಗಿಹೋಗಿದ್ದಾರೆ.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.