More

    ಆ ದೇಶಕ್ಕೆ ಭಾರತೀಯರು ಪ್ರಯಾಣಿಸಿದರೆ $1,000 ಹೆಚ್ಚುವರಿ ತೆರಿಗೆ ಕಟ್ಟಲೇಬೇಕು!

    ಸ್ಯಾನ್ ಸಾಲ್ವಡಾರ್(ಮಧ್ಯ ಅಮೆರಿಕಾ): ಇದೊಂದು ದೇಶ ಭಾರತ ಮತ್ತು ಆಫ್ರಿಕಾದ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ $1,000 ತೆರಿಗೆ ವಿಧಿಸುತ್ತಿದೆ. ಈ ದೇಶ ಯಾವುದೆಂದರೆ ಮಧ್ಜಯ ಅಮೆರಿಕಾದ ಎಲ್ ಸಾಲ್ವಡಾರ್‌. ಜಗತ್ತಿನ ಬೇರಾವುದೇ ದೇಶಗಳಿಗೆ ಹೇರದ ನಿರ್ಬಂಧ ಭಾರತ ಮತ್ತು ಆಫ್ರಿಕಾದ 50 ದೇಶಗಳಿಗೆ ಮಾತ್ರ ಏಕೆಂದು ನಿಮಗೆ ಎನಿಸಬಹುದು? ಇದಕ್ಕೆ ಕಾರಣವಿದೆ.

    ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಸಿರಿಯಾದಲ್ಲಿ ಅಮೆರಿಕ ವೈಮಾನಿಕ ದಾಳಿ
    ಅದೇನೆಂದರೆ, ಇತ್ತೀಚೆಗೆ ಈ ದೇಶಗಳಿಂದ ವಲಸೆ ಹೆಚ್ಚಿರುವುದು. ಮಧ್ಯ ಅಮೆರಿಕಾದ ಈ ದೇಶದ ಮೂಲಕ ವಲಸಿಗರು ಅಮೆರಿಕಾಗೆ ತಲುಪುತ್ತಿದ್ದಾರೆ. ಇದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಬರುವ ಪ್ರಯಾಣಿಕರಿಗೆ ತೆರಿಗೆ ವಿಧಿಸಲಾಗಿದೆ.

    ಎಲ್ ಸಾಲ್ವಡಾರ್‌ನ ಬಂದರು ಪ್ರಾಧಿಕಾರವು ಅ.20 ರಂದು ತನ್ನ ವೆಬ್‌ಸೈಟ್‌ನಲ್ಲಿ ಈ ವಿಷಯ ತಿಳಿಸಿದೆ.ಮಧ್ಯ ಅಮೇರಿಕಾ ಮೂಲಕ ಯುಎಸ್​ಗೆ ವಲಸೆ ಹೋಗುವುದನ್ನು ತಡೆಯುವ ಪ್ರಯತ್ನ ಇದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

    ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ಈ ವಾರ ಯುಎಸ್​ ಪಶ್ಚಿಮ ಹೆಮಿಸ್ಪೇರ್​ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಬ್ರಿಯಾನ್ ನಿಕೋಲ್ಸ್​ ಅವರನ್ನು ಭೇಟಿಯಾಗಿದ್ದು, ವಲಸೆ ಸಮಸ್ಯೆ ಪರಿಹರಿಸುವ ಪ್ರಯತ್ನಗಳ ಕುರಿತು ಚರ್ಚಿಸಿದರು. 2023 ರ ಆರ್ಥಿಕ ವರ್ಷದಲ್ಲಿ ಸೆಪ್ಟೆಂಬರ್‌ ವರೆಗೆ ಯುಎಸ್ ಕಸ್ಟಮ್ಸ್ ಮತ್ತು ಗಡಿ ಗಸ್ತು ಇಲಾಖೆ ದಾಖಲೆಯ ಪ್ರಕಾರ 3.2 ಮಿಲಿಯನ್ ವಲಸಿಗರು ಎಲ್ ಸಾಲ್ವಡಾರ್ ತಲುಪಿದ್ದಾರೆ. ಇವರಿಂದ $1,130 ಹೆಚ್ಚುವರಿ ವೆಚ್ಚವನ್ನು ದೇಶ ಭರಿಸಬೇಕಾಗಿದೆ. ಹೀಗಾಗಿ ಹೊಸ ಶುಲ್ಕ ವಿಧಿಸುವ ಅಗತ್ಯವಿದೆ. ಇದಕ್ಕೆ ಎಲ್ ಸಾಲ್ವಡಾರ್ ನ ಬೆಂಬಲ ಕೋರಿದ್ದೇವೆ ಎಂದು ಬ್ರಿಯಾನ್ ನಿಕೋಲ್ಸ್​ ತಿಳಿಸಿದ್ದಾರೆ.

    ಪ್ರಯಾಣಿಕರಿಗೆ ವಿಧಿಸುವ ಹೊಸ ತೆರಿಗೆ ಅಕ್ಟೋಬರ್ 23 ರಿಂದ ಜಾರಿಗೆ ಬಂದಿದೆ ಮತ್ತು ದೇಶದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣದದಲ್ಲಿ ಹೆಚ್ಚಿದ ಬಳಕೆಯಿಂದಾಗಿ ವಿಧಿಸಲಾಗಿದೆ ಎಂದು ನಯೀಬ್ ಬುಕೆಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
    ಕೊಲಂಬಿಯಾದ ಏರ್‌ಲೈನ್ಸ್, ತೆರಿಗೆ ಪಾವತಿಸಬೇಕಾದ ದೇಶಗಳ ಪಟ್ಟಿಯಲ್ಲಿ ಬರುವ ಪ್ರಯಾಣಿಕರು ಎಲ್ ಸಾಲ್ವಡಾರ್‌ಗೆ ವಿಮಾನಗಳನ್ನು ಹತ್ತುವ ಮೊದಲು ಕಡ್ಡಾಯವಾಗಿ ತೆರಿಗೆ ಪಾವತಿಸಬೇಕು ಎಂದು ಪ್ರಯಾಣಿಕರಿಗೆ ಸೂಚಿಸುತ್ತಿದೆ.

    ನಾಲ್ವರು ಅಮೆರಿಕನ್ನರಿಂದ ಚೀನಾಗೆ ಡೈನೋಸರ್ ಮೂಳೆ ಅಕ್ರಮ ಮಾರಾಟ: ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts