More

    ನಾಲ್ವರು ಅಮೆರಿಕನ್ನರಿಂದ ಚೀನಾಗೆ ಡೈನೋಸರ್ ಮೂಳೆ ಅಕ್ರಮ ಮಾರಾಟ: ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ!

    ವಾಷಿಂಗ್ಟನ್​: ನಾಲ್ವರು ಅಮೆರಿಕನ್ನರ ಮೇಲೆ ಡೈನೋಸರ್ ಮೂಳೆಗಳನ್ನು ಕದ್ದು ಚೀನಾಗೆ ಸಾಗಿಸಿ ಮಾರಾಟ ಮಾಡಿದ ಆರೋಪ ಹೊರಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಒಂದೂವರೆಗೆ ಲಕ್ಷಕ್ಕೂ ಅಧಿಕ ಪೌಂಡ್​ ಪಳಯುಳಿಕೆಗಳ ಸಂಪನ್ಮೂಲವನ್ನು ಸಾಗಾಟ ಮಾಡಿದ್ದಾರೆಂದು ತಿಳಿದುಬಂದಿದೆ.

    ಆರೋಪಿಗಳನ್ನು ವಿಂಟ್​ ವೇಡ್​ (65), ಡೊನ್ನಾ ವೇಡ್​ (67), ಸ್ಟೀವನ್​ ವಿಲ್ಲಿಂಗ್​ (67) ಮತ್ತು ಜೋರ್ಡನ್​ ವಿಲ್ಲಿಂಗ್​ (40) ಎಂದು ಗುರುತಿಸಲಾಗಿದೆ. ಆರೋಪಿಗಳು ಲಾಸ್​ ಏಂಜಲೀಸ್​ ಮತ್ತು ಒರೆಂಗಾವ್​ ಮೂಲದವರು. ಇದೀಗ ಆರೋಪಿಗಳ ಮೇಲೆ ಬಹು ಅಪರಾಧಗಳ ಆರೋಪ ಹೊರಿಸಲಾಗಿದೆ. ಪಲೆಯೋಂಟಾಲಾಜಿಕಲ್​ ರಿಸೋರ್ಸ್ ಪ್ರಿಸರ್ವೇಶನ್​ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಉತಾಹ್ ರಾಜ್ಯದ ಯುಎಸ್​ ಅಟಾರ್ನಿ ಕಚೇರಿ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

    ಮಾರಾಟ ಮಾಡಲು ಯತ್ನಿಸಿದ ಡೈನೋಸರ್​ ಮೂಳೆಗಳು 1 ಮಿಲಿಯನ್​ ಡಾಲರ್ (8.22 ರೂಪಾಯಿ)​ಗೂ ಅಧಿಕ ಮೌಲ್ಯದ್ದು ಎಂದು ತಿಳಿದುಬಂದಿದೆ. ಪಲೆಯೋಂಟಾಲಾಜಿಕಲ್​ ರಿಸೋರ್ಸ್ ಪ್ರಿಸರ್ವೇಶನ್​ ಕಾಯಿದೆಯ ಪ್ರಕಾರ ಪಳೆಯುಳಿಕೆಯಾದ ಅವಶೇಷಗಳು, ಕುರುಹುಗಳು, ಅಥವಾ ಭೂಮಿಯ ಹೊರಪದರದಲ್ಲಿ ಸಂರಕ್ಷಿಸಲ್ಪಟ್ಟಿರುವ ಜೀವಿಗಳ ಮುದ್ರೆಗಳನ್ನು ಪಲೆಯೋಂಟಾಲಾಜಿಕಲ್​ ರಿಸೋರ್ಸ್ ಎಂದು ಪರಿಗಣಿಸಲಾಗಿದೆ.

    ನಾಲ್ವರು ಆರೋಪಿಗಳು 2018ರ ಮಾರ್ಚ್​ನಿಂದ 2023ರ ಮಾರ್ಚ್​ ವವರೆಗೆ ಐದು ವರ್ಷಗಳ ಕಾಲ ಫೆಡರಲ್ ಪ್ರಾಂತ್ಯದಿಂದ ಡೈನೋಸಾರ್ ಮೂಳೆಗಳನ್ನು ಖರೀದಿಸಿ, ಸ್ಥಳಾಂತರಿಸಿದ್ದಾರೆ ಮತ್ತು ರಫ್ತು ಮಾಡಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸೇರಿದ ಕಳ್ಳತನವಾದ ಆಸ್ತಿಯನ್ನು ಗೊತ್ತಿದ್ದೂ ಮರೆಮಾಚಲು ಇಟ್ಟುಕೊಂಡ ಆರೋಪ ನಾಲ್ವರ ವಿರುದ್ಧ ಹೆಚ್ಚುವರಿಯಾಗಿ ದಾಖಲಾಗಿದೆ.

    ತಮ್ಮ ಸ್ವಂತ ಲಾಭಕ್ಕಾಗಿ ಗ್ರಾಹಕ ಉತ್ಪನ್ನಗಳನ್ನು ಮಾಡಲು ಈ ಡೈನೋಸಾರ್ ಮೂಳೆಗಳನ್ನು ತೆಗೆದುಹಾಕಿ, ಸಂಸ್ಕರಿಸುವ ಮೂಲಕ ಡೈನೋಸಾರ್ ಮೂಳೆಗಳು ವೈಜ್ಞಾನಿಕ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಭವಿಷ್ಯದ ಪೀಳಿಗೆಗಳು ಫೆಡರಲ್ ಭೂಮಿಯಲ್ಲಿ ಈ ಮೂಳೆಗಳ ವಿಜ್ಞಾನ ಮತ್ತು ಅದ್ಭುತವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ ಎಂದು ಯುಎಸ್​ ಅಟಾರ್ನಿ ಟ್ರಿನಾ ಎ. ಹಿಗ್ಗಿನ್ಸ್ ಬೇಸರ ಹೊರಹಾಕಿದ್ದಾರೆ. (ಏಜೆನ್ಸೀಸ್​)

    VIDEO | ರಸ್ತೆಬದಿ ಬಲೂನ್​ ಮಾರುತ್ತಿದ್ದ ವ್ಯಾಪಾರಿ ಮೇಲೆ ಹರಿದ ಕಾರು; ವ್ಯಕ್ತಿ ಸ್ಥಳದಲ್ಲೇ ಮೃತ್ಯು!

    ರಜಿನಿಕಾಂತ್​ಗೆ ದೇವಸ್ಥಾನ ನಿರ್ಮಿಸಿ 250 ಕೆಜಿ ಪ್ರತಿಮೆ ಸ್ಥಾಪನೆ! ಅಭಿಮಾನಿಯಿಂದ ನಿತ್ಯ ಪೂಜೆ, ಹಾಲಿನ ಅಭಿಷೇಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts