BBKS10: ವರ್ತೂರ್​ ಸಂತೋಷ್ ಪ್ರಕಾರ ಮನೆಯೊಳಗೆ 'ಕೋಗಿಲೆ-ಕಾಗೆ' ಯಾರು?

Untitled design (13)
Published on

ಬೆಂಗಳೂರು: ಕನ್ನಡದ ಬಿಗ್​ ಬಾಸ್​ ಸೀಸನ್​ 10ರ ಸ್ಪರ್ಧಿಗಳು ಇದೀಗ ಏಳನೇ ವಾರಕ್ಕೆ ಕಾಲಿಟ್ಟಿದ್ದು, ಈ ಹಿಂದೆಯಿದ್ದ ಅಸಲಿ ಆಟದ ವೈಖರಿಯನ್ನು ಟಾಸ್ಕ್​ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ. ತಲೆ ಬೋಳಿಸಿಕೊಳ್ಳುವ ಮುಖೇನ ಕಾರ್ತಿಕ್​ ಮತ್ತು ತುಕಾಲಿ ಸಂತೋಷ್​ ಸಂಪತ್ತಿಗೆ ಸವಾಲೆಸೆದರೆ ಅತ್ತ ನನ್ನಿಂದ ಕಾರ್ತಿಕ್​ಗೆ ಹೀಗಾಯಿತು ಎಂದು ಸಂಗೀತಾ ಕಣ್ಣೀರಿಟ್ಟಿದ್ದಾರೆ.

ಆಪ್ತ ಸ್ನೇಹಿತರಾಗಿದ್ದ ಸಂಗೀತಾ-ಕಾರ್ತಿಕ್​ ನಡುವೆ ಇದೀಗ ಭಾರೀ ವೈಮನಸ್ಸು ಮೂಡಿದ್ದು, ಒಬ್ಬರನೊಬ್ಬರು ಪರಸ್ಪರ ಮುಖ ನೋಡಿ ಮಾತಾಡುವುದಕ್ಕೂ ಇಚ್ಚಿಸುತ್ತಿಲ್ಲ ಎಂಬ ಸಂಗತಿ ಮನೆಯ ಸದಸ್ಯರಿಗೆ ಎಷ್ಟು ಅಚ್ಚರಿ ತಂದಿದೆಯೋ ಅಷ್ಟೇ ಶಾಕಿಂಗ್​ನಲ್ಲಿ ವೀಕ್ಷಕರು ಕೂಡ ಇದ್ದಾರೆ.

ಈ ಮಧ್ಯೆ ಕಾರ್ತಿಕ್​ ನಡೆಗೆ ಬೇಸರಗೊಂಡ ಸಂಗೀತಾ ಬಿಕ್ಕಿ ಬಿಕ್ಕಿ ಅತ್ತಿದ್ದು, ತಾನು ಬಿಗ್​ ಬಾಸ್​ ಮನೆಯಿಂದ ಹೊರಹೋಗಲು ಬಯಸುತ್ತೇನೆ ಎಂದು ಕೆಲ ಸಮಯ ಮನವಿ ಮಾಡಿದರು. ಸಂಗೀತಾ ಪರ ನಿಂತ ನಮ್ರತಾ, ವಿನಯ್​, ಪ್ರತಾಪ್​ ಸಮಾಧಾನ ಪಡಿಸಿ, ಊಟ ಮಾಡಿಸಿದ್ದಾರೆ.

ಆದ್ರೆ, ಈ ವಿಷಯಕ್ಕೆ ಮೊದಲು ಮಾತನಾಡಿದ ಕಾರ್ತಿಕ್​, ತದನಂತರ ಹೆಚ್ಚು ಸ್ಪಂದಿಸದೆ ಸುಮ್ಮನಾಗಿದ್ದಾರೆ. ಇದೆಲ್ಲದಕ್ಕೂ ಮುನ್ನ ಮನೆಯ ಹೊರಗಡೆ ಕುಳಿತು ತುಕಾಲಿ ಸಂತೋಷ್​, ವರ್ತೂರ್​​ ಸಂತೋಷ್​ ಮತ್ತು ಕಾರ್ತಿಕ್​ ಕಾಗೆ-ಕೋಗಿಲೆ ಬಗ್ಗೆ ಮಾತನಾಡಿಕೊಂಡಿದ್ದಾರೆ.

ವರ್ತೂರ್​ ಸುದೀರ್ಘವಾಗಿ ಹೇಳಿದ ಕಾಗೆ ಮತ್ತು ಕೋಗಿಲೆ ಕಥೆಗೆ ತಲೆಯಾಡಿಸಿದ ಕಾರ್ತಿಕ್​, ತುಕಾಲಿ ಕಡೆಯದಾಗಿ ನಸುನಕ್ಕು ಇಲ್ಲಿ ಕಾಗೆ ಯಾರು? ಕೋಗಿಲೆ ಯಾರು? ಎಂದು ಕೇಳಿದ್ದಾರೆ. ಅಸಲಿಗೆ ಮನೆಯೊಳಗಿನ ಕಾಗೆ ಮತ್ತು ಕೋಗಿಲೆ ಯಾರಾಗಿರಬಹುದು ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದ್ದು, ಈ ವಿಷಯ ಕುರಿತು ವಾರಂತ್ಯದಲ್ಲಿ ಸುದೀಪ್​ ಪ್ರಶ್ನಿಸಲಿದ್ದಾರಾ ಎಂಬುದನ್ನು ತಿಳಿಯಲು ಶನಿವಾರದ ಸಂಚಿಕೆಗೆ ಕಾಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net