More

    ಶೀಘ್ರವೇ ಈ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಶ್ರೀದೇವಿ ಪುತ್ರಿ!; ಯಾವ ಸಿನಿಮಾ? ಇಲ್ಲಿದೆ ಮಾಹಿತಿ

    ತಮಿಳುನಾಡು: ಭಾರತೀಯ ಚಿತ್ರರಂಗ ಕಂಡಂತಹ ಅದ್ಬುತ ಕಲಾವಿದೆ, ಬಾಲಿವುಡ್​ನ ಹಿರಿಯ ನಟಿ ಶ್ರೀದೇವಿ ಅವರ ಇಬ್ಬರ ಪುತ್ರಿಯರ ಪೈಕಿ ಓರ್ವ ಮಗಳು ಬಾಲಿವುಡ್​ ಹೊರತುಪಡಿಸಿ ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದು, ಈ ಚಿತ್ರವನ್ನು ಖ್ಯಾತ ನಿರ್ಮಾಣ ಸಂಸ್ಥೆ ನಿರ್ಮಿಸಲು ಮುಂದಾಗಿರುವುದು ಮತ್ತಷ್ಟು ವಿಶೇಷವಾಗಿದೆ. ಅಷ್ಟಕ್ಕೂ ಇದು ಜಾನ್ವಿನಾ ಅಥವಾ ಖುಷಿನಾ? ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ.

    ಇದನ್ನೂ ಓದಿ: ಅಧಿವೇಶನಕ್ಕೆ ಮುನ್ನ ನಿಗಮ-ಮಂಡಳಿಗಳಿಗೆ ನೇಮಕ: 28ರಂದು ಅಂತಿಮ ಪಟ್ಟಿ

    ಶ್ರೀದೇವಿ ಅವರ ಪುತ್ರಿಯರಾದ ಜಾನ್ವಿ ಮತ್ತು ಖುಷಿ ಕಪೂರ್ ಇಬ್ಬರು ಕೂಡ ಬಾಲಿವುಡ್​ ಅಂಗಳದಲ್ಲಿ ಮಿಂಚಲು ಸಕಲ ತಯಾರಿಗಳಲ್ಲಿ ತೊಡಗಿದ್ದು, ಹೆಚ್ಚು ವಿಭಿನ್ನ ಹಾಗೂ ಹೊಸ ಹೊಸ ಪ್ರಾಜೆಕ್ಟ್​ನತ್ತ ಗಮನಹರಿಸುತ್ತಿದ್ದಾರೆ. ಈ ಪೈಕಿ ಖುಷಿ ಕಪೂರ್ ಇದೀಗ ದಾಪುಗಾಲು ಇಟ್ಟಿದ್ದು, ಶೀಘ್ರವೇ ತಮಿಳು ಸಿನಿಮಾ ಮಾಡುವ ಮೂಲಕ ಕಾಲಿವುಡ್​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

    ನೆಟ್​ಫ್ಲಿಕ್ಸ್​ ಪಸ್ತುತ ಪಡಿಸುತ್ತಿರುವ ‘ದಿ ಆರ್ಚೀಸ್‌’ ಚಿತ್ರದಲ್ಲಿ ಖುಷಿ ಕಪೂರ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದು, ಈ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಲು ಮುಂದಾಗಿದ್ದಾರೆ. ಅಂದ್ಹಾಗೆ ಖುಷಿ ಶೀಘ್ರದಲ್ಲೇ ದಕ್ಷಿಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಇದೀಗ ವ್ಯಾಪಕವಾಗಿ ಕೇಳಿಬಂದಿದ್ದು, ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ತಮಿಳು ಚಿತ್ರದಲ್ಲಿ ಕುಶಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ:  ಜಾತಿ ಜೇನುಗೂಡು ಚಿಂತೆಗೀಡು: ರಕ್ಷಣಾತ್ಮಕ ತಂತ್ರಕ್ಕೆ ಸರ್ಕಾರ ಮೊರೆ, ಜಾತಿಗಣತಿ ವರದಿ ಸಾರ ಬಳಕೆಗೆ ಚಿಂತನೆ

    ಆಕಾಶ್ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ತಮಿಳಿನ ನಾಯಕ ಆಧರ್ವ ಜತೆ ಖುಷಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಚಿತ್ರದ ಮುಖೇನ ಇದೀಗ ಖುಷಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಸದ್ಯ ಖುಷಿ ಕಪೂರ್​ ಅವರನ್ನು ಕಾಲಿವುಡ್​ ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ,(ಏಜೆನ್ಸೀಸ್).

    ಇನ್ಮುಂದೆ ಟ್ವಿ-20 ಆಡುವುದಿಲ್ಲ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮಾ!; ವರದಿ ಹೇಳುವುದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts