More

  ಅಧಿವೇಶನಕ್ಕೆ ಮುನ್ನ ನಿಗಮ-ಮಂಡಳಿಗಳಿಗೆ ನೇಮಕ: 28ರಂದು ಅಂತಿಮ ಪಟ್ಟಿ

  ಬೆಂಗಳೂರು: ಸರ್ಕಾರ ಆರು ತಿಂಗಳ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಆಡಳಿತ ಪಕ್ಷವು ನಿಗಮ-ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಸ್ವಯಂ ಗಡುವು ವಿಧಿಸಿಕೊಂಡಿದೆ.

  ಬೆಳಗಾವಿಯಲ್ಲಿ ಡಿ.4ರಿಂದ ನಡೆಯಲಿರುವ ವಿಧಾನ ಮಂಡಲ ಅಧಿವೇಶನಕ್ಕೂ ಮುನ್ನ 25 ಶಾಸಕರು, 4-5ಪರಿಷತ್ ಸದಸ್ಯರು, 15 ಮುಖಂಡರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ನೀಡಬೇಕು ಎಂದು ನಿರ್ಧಾರವಾಗಿದ್ದು, ಸಿಎಂ ಮತ್ತು ಡಿಸಿಎಂ ಜತೆಗೆ ಸಮಾಲೋಚನೆ ನಡೆಸಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಂಭಾವ್ಯ ಪಟ್ಟಿ ಸಿದ್ಧಪಡಿಸಿದ್ದಾರೆ.

  ಶಾಸಕರ ಪೈಕಿ 25 ಹೆಸರನ್ನು ಅಂತಿಮಗೊಳಿಸಿದ್ದು, ಹೆಸರು ಘೋಷಣೆಯಾದ ಬಳಿಕ ನಿರಾಕರಿಸಿದರೆ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟಾಗುವ ಕಾರಣ, ಪ್ರತಿಯೊಬ್ಬರನ್ನೂ ಸಂರ್ಪಸಿ ಅಭಿಪ್ರಾಯ ಕೇಳಲಾಗುತ್ತಿದೆ. ಒಪ್ಪಿದವರ ಹೆಸರನ್ನು ನ.28ರಂದು ನಡೆಯುವ ಮತ್ತೊಂದು ಸುತ್ತಿನ ಸಭೆಯಲ್ಲಿ ಅಂತಿಮಗೊಳಿಸಿ ಹೈಕಮಾಂಡ್ ಒಪ್ಪಿಗೆಗೆ ಕಳಿಸಲಾಗುತ್ತದೆ.

  ಸಚಿವಾಕಾಂಕ್ಷಿಗಳ ಹಿಂದೇಟು: ಜಾತಿ, ಹಿರಿತನ ಅಥವಾ ಇನ್ಯಾವುದೋ ಕಾರಣಕ್ಕೆ ತಾವು ಸಚಿವ ಸ್ಥಾನಕ್ಕೆ ಅರ್ಹರು ಎಂದು ನಂಬಿಕೊಂಡವರು ನಿಗಮ-ಮಂಡಳಿ ಅವಕಾಶ ಒಪ್ಪಿಕೊಳ್ಳಲು ಸುತಾರಾಂ ಸಿದ್ಧರಿಲ್ಲ. ಪಕ್ಷ ಹಾಗೂ ಸಿದ್ದರಾಮಯ್ಯ ಸಿದ್ಧಪಡಿಸಿದ ಪಟ್ಟಿಯಲ್ಲಿ ಇಬ್ಬರು ಶಾಸಕರು ಅವಕಾಶ ಬೇಡವೆಂದೇ ಅಭಿಪ್ರಾಯ ನೀಡಿದ್ದಾರೆ ಎನ್ನಲಾಗಿದ್ದು, ಮತ್ತೆ ಕೆಲವರು ಗೊಂದಲದಲ್ಲಿದ್ದಾರೆ. ಸರ್ಕಾರಕ್ಕೆ 2ವರ್ಷ ಪೂರ್ಣಗೊಂಡ ಬಳಿಕ ಸಚಿವ ಸಂಪುಟ ಪುನಾರಚನೆಯಾಗಬಹುದು. ಈ ವೇಳೆ ನಿಗಮ-ಮಂಡಳಿ ನೀಡಿದನ್ನೇ ನೆಪವಾಗಿಟ್ಟುಕೊಂಡು ಸಚಿವ ಸ್ಥಾನಕ್ಕೆ ಪರಿಗಣಿಸದಿಲ್ಲ ಎಂಬ ಅನುಮಾನದಲ್ಲಿ ಕೆಲ ಶಾಸಕರಿದ್ದಾರೆ. ಇನ್ನೂ ಕೆಲವರು, ಕೊಟ್ಟರೆ ಸಚಿವ ಸ್ಥಾನ ಕೊಡಲಿ, ಅದರ ಬದಲು ಉಪಯೋಗವಿಲ್ಲದ ಅಧಿಕಾರ ಪಡೆದುಕೊಳ್ಳುವುದು ವ್ಯರ್ಥ ಎಂಬ ಅಭಿಪ್ರಾಯ ಹೊಂದಿದ್ದಾರೆ ಎನ್ನಲಾಗಿದೆ.

  ಒಗ್ಗಟ್ಟು ಪ್ರದರ್ಶಿಸಲು ಸಿದ್ಧತೆ: ಡಿ.4ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೆ ಪಕ್ಷದ ಎಲ್ಲ ಶಾಸಕರು ಭಾಗಿಯಾಗಿ ಆಡಳಿತ ಪಕ್ಷದ ಒಗ್ಗಟ್ಟು ಪ್ರದರ್ಶಿಸಬೇಕಿದೆ. ನಿಗಮ-ಮಂಡಳಿ ಹಂಚಿಕೆ ಮಾಡದಿದ್ದರೆ ಮುನಿಸಿಕೊಂಡು ಶಾಸಕರು ಕಲಾಪದಿಂದ ದೂರ ಉಳಿಯಬಹುದು. ಇದರಿಂದ ಪ್ರತಿಪಕ್ಷಗಳನ್ನ ಎದುರಿಸುವುದು ಕಷ್ಟಸಾಧ್ಯವಾಗಲಿದೆ ಎಂಬ ಅಭಿಪ್ರಾಯ ಪಕ್ಷದಲ್ಲಿದೆ. ಇದೇ ಕಾರಣಕ್ಕೆ ನ.28ರಂದು ದೆಹಲಿಗೆ ಪಟ್ಟಿ ಕಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.

  ರಮ್ಯಾ ಪುನರ್ ಪ್ರವೇಶಕ್ಕೆ ಅಡ್ಡಗಾಲು
  ಮಂಡ್ಯ ಲೋಕಸಭೆ ಕ್ಷೇತ್ರದಿಂದ ಮಾಜಿ ಸಂಸದೆ, ನಟಿ ರಮ್ಯಾ ಪುನಃ ಸ್ಪರ್ಧೆ ಮಾಡುತ್ತಾರೆಂಬ ಚರ್ಚೆಗೆ ಕಾಂಗ್ರೆಸ್​ನಲ್ಲಿ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಸಚಿವ ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ನಡೆದ ಲೋಕಸಭಾ ಕ್ಷೇತ್ರಗಳ ವೀಕ್ಷಕರ ಸಭೆಯಲ್ಲಿ ಯಾವುದೇ ಕಾರಣಕ್ಕೂ ರಮ್ಯಾರನ್ನ ಚುನಾವಣೆಗೆ ಕರೆತರಬೇಡಿ ಎಂದು ಮುಖಂಡರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಭಾಗಿಯಾಗಿದ್ದ ಮಂಡ್ಯ ಜಿಲ್ಲೆಯ ಕೈ ನಾಯಕರು, ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ನಾಯಕರಿಗೆ ಅವಕಾಶ ನೀಡಿ ಎಂದು ಒತ್ತಾಯ ಮಾಡಿದ್ದಾರೆ. ಕಡೇಪಕ್ಷ ಸಚಿವ ಚಲುವರಾಯಸ್ವಾಮಿ ಪತ್ನಿಯನ್ನಾದರೂ ಕಣಕ್ಕಿಳಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್ ಹೆಸರು ಕೂಡ ಸಭೆಯಲ್ಲಿ ಪ್ರಸ್ತಾಪವಾಗಿದೆ.

  ಎಸ್​ಪಿ ಕಚೇರಿಯ ಕೊಠಡಿಯಲ್ಲಿ ಏಕಾಂತದಲ್ಲಿ ಮೈಮರೆತಿದ್ದ ಪೊಲೀಸ್​ ಜೋಡಿಗೆ ಮಧ್ಯರಾತ್ರಿ ಕಾದಿತ್ತು ಶಾಕ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts