More

    ನೆಚ್ಚಿನ ಐಪಿಎಲ್ ಫ್ರಾಂಚೈಸಿಗೆ ಮರಳಿದ ಟೀಮ್ ಇಂಡಿಯಾ ಮಾಜಿ ಆಟಗಾರ ಗಂಭೀರ್: ಕೆಎಲ್ ರಾಹುಲ್ ನಾಯಕತ್ವಕ್ಕೆ ಸಾಥ್ ನೀಡಿದ ಮತ್ತೊರ್ವ ಕನ್ನಡಿಗ ಲಖನೌ ತಂಡ ಸೇರ್ಪಡೆ

    ಕೋಲ್ಕತ: ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು 2 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಟೀಮ್ ಇಂಡಿಯಾ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಕೆಕೆಆರ್ ್ರಾಂಚೈಸಿಗೆ ಬುಧವಾರ ವಾಪಸ್ ಆಗಿದ್ದು, ನೂತನ ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಎಲ್‌ಎಸ್‌ಜಿ ್ರಾಂಚೈಸಿಯ ಗ್ಲೋಬಲ್ ಮೆಂಟರ್ ಆಗಿ ನೇಮಕಗೊಂಡಿದ್ದ ಗೌತಮ್ ಗಂಭೀರ್ ನಡೆ ಅಚ್ಚರಿ ಮೂಡಿಸಿದೆ.

    ಭಾರತದ ಟಿ20 ಮತ್ತು ಏಕದಿನ ವಿಶ್ವಕಪ್ ಗೆಲುವಿನ ಹೀರೋ ಗಂಭೀರ್, 2011ರಿಂದ 2017ರವರೆಗೆ ಕೆಕೆಆರ್ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದರು. ಹಿಂದಿನ 2 ಆವೃತ್ತಿಗಳಲ್ಲಿ ಲಖನೌ ಸೂಪರ್‌ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಮೆಂಟರ್ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ಲಖನೌ ತಂಡ ಪ್ಲೇಆಫ್‌ಗೇರುವಲ್ಲಿ ಯಶಸ್ವಿಯಾಗಿತ್ತು.

    ಆಸೀಸ್‌ನ ಜಸ್ಟಿನ್ ಲ್ಯಾಂಗರ್ ಲಖನೌ ತಂಡದ ನೂತನ ಕೋಚ್ ಆಗಿ ನೇಮಕಗೊಂಡ ಬಳಿಕ ಗಂಭೀರ್ ತಂಡ ತೊರೆಯುವ ಬಗ್ಗೆ ಸುದ್ದಿ ಹರಿದಾಡಿತ್ತು. ಮುಖ್ಯಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಗಂಭೀರ್ 2024ರ ಆವೃತ್ತಿಗೆ ಮೆಂಟರ್ ಆಗಿ ಕೈಜೋಡಿಸಲಿದ್ದಾರೆ ಎಂದು ಕೆಕೆಆರ್‌ನ ಸಿಇಒ ವೆಂಕಿ ಮೈಸೂರು ತಿಳಿಸಿದ್ದಾರೆ. 2012 ಮತ್ತು 2014ರಲ್ಲಿ ಕೆಕೆಆರ್ ತಂಡ ಗಂಭೀರ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು.

    ಲಖನೌ ತಂಡಕ್ಕೆ ಕನ್ನಡಿಗ ಪಡಿಕಲ್ ವರ್ಗಾವಣೆ: ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್ ತಂಡಕ್ಕೆ ಮತ್ತೊರ್ವ ಕನ್ನಡಿಗ ದೇವದತ್ ಪಡಿಕಲ್ ಸೇರ್ಪಡೆಗೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ್ರಾಂಚೈಸಿ 2024ರ ಐಪಿಎಲ್ ಆವೃತ್ತಿಗೆ ಎಡಗೈ ಬ್ಯಾಟರ್ ದೇವದತ್ ಪಡಿಕಲ್ ಅವರನ್ನು ಲಖನೌ ತಂಡಕ್ಕೆ ವರ್ಗಾವಣೆ ಮಾಡಿದ್ದು, ಅವರ ಬದಲಿಗೆ ವೇಗಿ ಆವೇಶ್ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

    57 ಪಂದ್ಯಗಳನ್ನಾಡಿರುವ ಪಡಿಕಲ್, 9 ಅರ್ಧಶತಕ, ಶತಕ ಸೇರಿ 1,521 ರನ್ ಕಲೆಹಾಕಿದ್ದಾರೆ. ಮಧ್ಯಪ್ರದೇಶದ ವೇಗಿ ಆವೇಶ್ ಖಾನ್, 47 ಪಂದ್ಯಗಳಲ್ಲಿ 55 ವಿಕೆಟ್ ಕಬಳಿಸಿದ್ದಾರೆ. 2022ರ ಹರಾಜು ಪ್ರಕ್ರಿಯೆಯಲ್ಲಿ ಎಲ್‌ಎಸ್‌ಜಿ ತಂಡ 10 ಕೋಟಿ ರೂ. ವೆಚ್ಚ ಮಾಡಿ ಆವೇಶ್ ಖಾನ್‌ರನ್ನು ಖರೀದಿಸಿದ್ದರೆ, ದೇವದತ್ ಪಡಿಕಲ್ 7.75 ಕೋಟಿ ರೂಪಾಯಿಗಳಿಗೆ ರಾಜಸ್ಥಾನ ತಂಡ ಸೇರಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಮನೀಷ್ ಪಾಂಡೆ, ರ್ಸ್ರಾಜ್ ಖಾನ್ ಅವರನ್ನು ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts