

ಬೆಂಗಳೂರು: ನೀತು ವನಜಾಕ್ಷಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಿದ್ದಂತೆ, ಮನೆಮಂದಿಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ. ತೆರೆದ ಬಾಗಿಲಿಂದ ಕಡುಗೆಂಪು ಕಾರ್ ಮನೆಯೊಳಗೆ ನುಗ್ಗಿದೆ. ಅದರಿಂದ ಇಬ್ಬರು ಹೊರಗಿಳಿದಿದ್ದಾರೆ.
ಹೌದು, ಬಿಗ್ ಬಾಸ್ ಮನೆಯೊಳಗೆ ಡಬಲ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಒಬ್ಬ ಹುಡುಗಿ ಮತ್ತು ಮತ್ತೊಬ್ಬ ಹುಡುಗ ಮನೆಯೊಳಗೆ ಎಂಟ್ರಿ ಕೊಟ್ಟಿರುವುದು ಇದೀಗ ಬಿಡುಗಡೆಗೊಂಡ ಪ್ರೋಮೋದಲ್ಲಿ ನೋಡಬಹುದಾಗಿದೆ. ನಿನ್ನೆಯ ವೀಕೆಂಡ್ ನೇರಪ್ರಸಾರದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕಂಟೆಸ್ಟೆಂಟ್ಸ್ ಎಪಿಸೋಡ್ ಮುಗಿದ ಬಳಿಕ ಮನೆಯೊಳಗೆ ಕಾಣಿಸಿಕೊಂಡಿದ್ದಾರೆ.
ಹಾಗಾದ್ರೆ ಮನೆಯೊಳಗೆ ಎಂಟ್ರಿ ಕೊಟ್ಟ ಆ ಇಬ್ಬರು ಸೆಲೆಬ್ರೆಟಿ ಯಾರು? ಇದರಿಂದ ಮನೆಯೊಳಗಿನ ಲೆಕ್ಕಾಚಾರವೆಲ್ಲ ಹೇಗೆ ತಲೆಕೆಳಗಾಗಬಹುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ ಗೊತ್ತಾಗಲಿದೆ. ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ.