

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಅದ್ದೂರಿ ಲಾಂಚ್ ಪಡೆದು ಇಂದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಮನೆಯಲ್ಲಿ ಹಳ್ಳಿ ಸೊಗಡು, ಸಂಪ್ರದಾಯದಂತೆ ಹೊಸ ಟಾಸ್ಕ್ಗೆ ಸಿದ್ಧಗೊಂಡ ಬಿಗ್ ಸ್ಪರ್ಧಿಗಳು ಇದೀಗ ಮಾತಿನ ಸಮರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸ್ಪರ್ಧಿಗಳ ನಡುವೆ ಇರಬೇಕಿದ್ದ ಮಾತಿನ ಚೌಕಟ್ಟು ಮೀರಿ ಹೋಗಿದೆ!
ಟಾಸ್ಕ್ ಮಧ್ಯೆ ಸಣ್ಣದಾಗಿ ಶುರುವಾದ ಜಟಾಪಟಿಯಲ್ಲಿ ಸಂಗೀತಾ ಮತ್ತು ವಿನಯ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ತದನಂತರದಲ್ಲಿ ಮಾತಿನ ದಾಟಿ ಬದಲಾಗಿದ್ದು, ಇಬ್ಬರು ತಮ್ಮ ತಮ್ಮ ಯೋಗ್ಯತೆ ಬಗ್ಗೆ ಏರುಧ್ವನಿಯಲ್ಲಿ ವಾಗ್ವಾದ ನಡೆಸಿದ್ದಾರೆ. ಕಿಲಾಡಿ, ಡಾನ್, ಯೋಗ್ಯತೆ, ಬಳೆ, ಅನ್ಯಾಯ, ನೋಡ್ತೀನಿ ಎಂಬ ಪದಗಳು ಸಂಗೀತಾ-ವಿನಯ್ ನಡುವೆ ಸ್ಪೋಟಗೊಂಡ ಜಗಳಕ್ಕೆ ಕಾರಣವಾದ ಪ್ರಮುಖ ಪದಗಳು.
ಇವರಿಬ್ಬರ ಮಾತಿನ ಸಮರ ಇಲ್ಲಿಗೆ ಮುಗಿಯಿತೇ ಅಥವಾ ಟಾಸ್ಕ್ ಅಂತ್ಯದವರೆಗೂ ಕೊಂಡ್ಯೊದರಾ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.