BBKS10: ಮುಂದೆ ಇದು ನಿನ್ನ ಬಾಳಿನ ಕಣ್ಣೀರಿನ ಕಥೆಯಾಗುತ್ತದೆ ಕಣೋ; ಭವಿಷ್ಯ ನುಡಿದ ತುಕಾಲಿ ಸಂತು

Untitled design - 2023-10-26T135344.578
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಯಶಸ್ವಿಯಾಗಿ ಪ್ರಾರಂಭಗೊಂಡು ಇಂದಿಗೆ ಮೂರು ವಾರಗಳು ಕಳೆದಿವೆ. ಈ ವೇಳೆ ಹಲವು ರೋಚಕ ತಿರುವುಗಳು ಪಡೆದುಕೊಳ್ಳುತ್ತಿದ್ದು, ಮನೆಯ ಸದಸ್ಯರ ನಡುವೆ ಆಟದ ಪೈಪೋಟಿ ಜತೆಗೆ ಸದಸ್ಯರ ನಡುವೆ ಮನಸ್ತಾಪಗಳು ಹುಟ್ಟಿಕೊಂಡಿವೆ. ಮನೆಯಲ್ಲಿ ಬೆಸ್ಟ್​ ಫ್ರೆಂಡ್ಸ್​ ಆಗಿದ್ದ ಕಾರ್ತಿಕ್​ ಮತ್ತು ಸಂಗೀತಾ ಶೃಂಗೇರಿ ಮಧ್ಯೆ ಇದೀಗ ದೊಡ್ಡ ಭಿನ್ನಾಭಿಪ್ರಾಯ ಮೂಡಿದೆ.

ನಾಯಕನನ್ನು ಆಯ್ದುಕೊಳ್ಳುವ ವಿಷಯದಲ್ಲಿ ಕಾರ್ತಿಕ್ ಮತ್ತು ಸಂಗೀತಾ ನಡುವೆ ಭಿನ್ನಾಭಿಪ್ರಾಯ ಹುಟ್ಟಿತು. ಸಂಗೀತಾ ‘ನೀನು ಫೇಕ್‌’ ಎಂದು ಕಾರ್ತಿಕ್ ಅವರಿಗೆ ಹೇಳಿದ್ದೇ ತಡ ಆ ಮಾತು ಅವರ ಮನಸ್ಸಿಗೆ ಘಾಸಿಗೊಳಿಸಿತು. ಅಲ್ಲದೆ ಮನೆ ಎರಡು ತಂಡಗಳಾಗಿ ವಿಂಗಡಣೆಯಾಗಿದೆ. ಇದೇ ತಂಡಕ್ಕೆ ಕಾರ್ತಿಕ್ ಮತ್ತು ಸಂಗೀತಾ ಇಬ್ಬರೂ ನಮ್ರತಾ ನಾಯಕತ್ವದ ‘ವೀರಂ’ ತಂಡ ಸೇರ್ಪಡೆಗೊಂಡಿದ್ದಾರೆ.

ನಮ್ರತಾ ತಂಡ ಸೇರಿಕೊಂಡಾಗಿನಿಂದಲೂ ಕಾರ್ತಿಕ್‌ ನಮ್ರತಾ ಅವರ ಜತೆಗೆ ತುಸು ಹೆಚ್ಚಿನ ಸಲಿಗೆಯಿಂದ ಇರಲು ಪ್ರಾರಂಭಿಸಿದ್ದಾರೆ. ಬೇಕಂತಲೇ ಸಂಗೀತಾ ಎದುರೇ ನಮ್ರತಾ ಅವರೊಂದಿಗೆ ಕಾರ್ತಿಕ್​ ಡಾನ್ಸ್‌ ಕೂಡ ಮಾಡಿದರು. ಇದೀಗ ಕಾರ್ತಿಕ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಇಂದು ಬೆಳಗ್ಗೆ ಬಿಗ್‌ಬಾಸ್‌ ಮನೆಯ ಕಿಚನ್‌ನಲ್ಲಿ ಎಲ್ಲರೂ ಅಡುಗೆ ಮಾಡುವುದರಲ್ಲಿ ನಿರತರಾಗಿದ್ದರೆ, ಕಾರ್ತಿಕ್, ನಮ್ರತಾ ಜತೆಗೆ ಹಾಸ್ಯ ಮಾಡುವುದರಲ್ಲಿ ಮುಳುಗಿದ್ದರು.

ತಮಾಷೆ ತಮಾಷೆಯಾಗಿಯೇ ಶುರುವಾದ ಮಾತು, ನಮ್ರತಾ ಜತೆಗೆ ಡೇಟ್ ಮಾಡುವುದರವರೆಗೂ ಮುಂದುವರಿದಿದೆ. ಅಂದಹಾಗೆ ಅವರು ಡೇಟ್‌ ಮಾಡಲು ಪ್ಲ್ಯಾನ್ ಮಾಡಿರುವುದು ಬೇರೆ ಎಲ್ಲೂ ಅಲ್ಲ, ಬಿಗ್‌ಬಾಸ್‌ ಮನೆಯ ಬಾಲ್ಕನಿಯಲ್ಲಿ! ಕಾರ್ತಿಕ್ ಮತ್ತು ನಮ್ರತಾ ಡೇಟಿಂಗ್ ಮ್ಯಾಟರ್ ಕೇಳಿಸಿಕೊಂಡ ಮೇಲೆ ಸಂಗೀತಾ ಕೂಡ ಅಷ್ಟೇ ಈಸಿಯಾಗಿ ನಗುನಗುತ್ತಾ ಇರ್ತಾರಾ ಅಥವಾ ಮುಖ ಊದಿಸಿಕೊಳ್ಳುತ್ತಾರಾ ಎಂಬುದನ್ನು ನೋಡಲು ಮನೆಯ ಸದಸ್ಯರೆಲ್ಲರೂ ಕಾದು ಕೂತಿರುವಂತಿದೆ.

ಇದಕ್ಕೆ ಪೂರಕವಾಗಿ ತುಕಾಲಿ ಸಂತೋಷ್, ‘ನಿಂಗೆ ಹೊಗೆನೇ ಕಾರ್ತಿಕ… ಹಾಸ್ಯಕ್ಕೋಸ್ಕರ ಮಾಡ್ತಿರೋ ಈ ಪ್ರೀತಿ, ಮುಂದೆ ನಿನ್ನ ಬಾಳಿನ ಕಣ್ಣೀರಿನ ಕಥೆಯಾಗುತ್ತದೆ ಕಣೋ…. ನಂಗೆ ಮುನ್ಸೂಚನೆ ಈಗಲೇ ಕಾಣಿಸುತ್ತಿದೆ’ ಎಂದು ಬೇರೆ ಭವಿಷ್ಯ ನುಡಿದಿದ್ದಾರೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ನೇರಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net