BBKS10: 'ನಾವು ಇಲ್ಲಿ ಮನುಷ್ಯರೇ! ನೀವೇನು ಮೇಲಿಂದ ಇಳಿದುಬಂದಿಲ್ಲ'; ಸಿಡಿದೆದ್ದ ಪ್ರತಾಪ್​

Untitled design (22)
Published on

ಬೆಂಗಳೂರು: ಕನ್ನಡ ಬಿಗ್​ ಬಾಸ್​ ಸೀಸನ್​ 10 ಇದೀಗ ಏಳನೇ ವಾರದಲ್ಲಿದ್ದು, ಬಿಗ್​ ಮನೆಯ ಸ್ಪರ್ಧಿಗಳು ಚಟುವಟಿಕೆಗಳಿಗಿಂತ ಹೆಚ್ಚಾಗಿ ಜಟಾಪಟಿಯಲ್ಲಿ ಸಂಪೂರ್ಣವಾಗಿ ಸಕ್ರಿಯರಾಗುತ್ತಿರುವುದು ಸದ್ಯ ವೀಕ್ಷಕರಿಗೆ ಭಾರೀ ಗೊಂದಲ ಹಾಗೂ ಬೇಸರ ಮೂಡಿಸುತ್ತಿದೆ.

ಟಾಸ್ಕ್​ ಆಡುವ ಭರದಲ್ಲಿ ವೈಯಕ್ತಿಕವಾಗಿ ಮಾತನಾಡಿ, ಪರಸ್ಪರ ಏರುಧ್ವನಿಯಲ್ಲಿ ನಡೆಸುತ್ತಿರುವ ವಾಗ್ದಾಳಿ ಸದ್ಯ ಮನೆಯೊಳಗೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಸ್ನಾನದ ವಿಚಾರವಾಗಿ ಪ್ರತಾಪ್​- ಸ್ನೇಹಿತ್​ ನಡುವೆ ಬಿರುಸಿನ ಮಾತಿನ ಚಕಮಕಿ ಉಂಟಾಗಿದೆ.

ಸ್ನಾನಕ್ಕೆ ತೆರಳಲು ಕಾಯುತ್ತಿದ್ದ ಡ್ರೋಣ್​ ಪ್ರತಾಪ್,​ 'ಆಯ್ತಾ ನಿಮ್ಮದು ಸ್ನಾನ' ಎಂದು ಸ್ನೇಹಿತ್​ಗೆ ಕೇಳಿದ್ದಾರೆ. ಈ ವೇಳೆ ವಿನಯ್​ ನಾನು ಸ್ನಾನಕ್ಕೆ ಹೋಗ್ತೀನಿ ಸ್ನೇಹಿತ್​ ಎಂದು ಹೇಳಿದ ಕೂಡಲೇ ಅವರಿಗಾಗಿ ಬಾತ್​ ರೂಂ ಮೀಸಲಿಡಲು ಒಳಗೆ ಹೋಗಿದ್ದಾರೆ. ಇದನ್ನು ನೇರವಾಗಿ ಕಂಡ ಪ್ರತಾಪ್​, 'ಬನ್ನಿ ಅಣ್ಣ, ಅಲ್ಲಿ ನಿಂತ್ಕೊಂಡು ಏನು ಮಾಡುತ್ತಿದ್ದೀರಾ? ಬೇಕ್​ ಬೇಕಾದವರಿಗೆ ಬಾತ್​ರೂಂ ಬ್ಲಾಕ್​ ಮಾಡ್ಕೊಂಡು, ನಿಮಗೆ ಇಷ್ಟ ಬಂದಾಗ ಮಾಡೋದಲ್ಲ ಅಣ್ಣ ಇಲ್ಲಿ' ಎಂದು ಗುಡುಗಿದ್ದಾರೆ.

ಇದಕ್ಕೆ ಉತ್ತರಿಸಿದ ಸ್ನೇಹಿತ್​, 'ನನ್ನ ಕೆಲಸ ಮುಗಿದಿರಲಿಲ್ಲ' ಎಂದು ಹೇಳಿದ್ದಾರೆ. 'ನಾವು ಇಲ್ಲಿ ಮನುಷ್ಯರೇ ಅಣ್ಣ, ನೀವೇನು ಮೇಲಿಂದ ಇಳಿದುಬಂದಿಲ್ಲ, ಈ ರೀತಿ ಮಾಡುವುದು ಸರಿ ಹೋಗಲ್ಲ ಇಲ್ಲಿ' ಎಂದು ಪ್ರತಾಪ್​ ಸ್ನೇಹಿತ್​ ವಿರುದ್ಧ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಾತುಗಳು ಜಗಳಕ್ಕೆ ತಿರುಗಿತಾ? ಅಥವಾ ವಿನಯ್​ ಬಂದು ಮಾತನಾಡಿದ್ರಾ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net