More

    ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತರುವುದು ಹೇಗೆ? ವಿಡಿಯೋ ಬಿಡುಗಡೆ ಮಾಡಿದ NDRF

    ಡೆಹ್ರಾಡೂನ್​: ಕುಸಿದ ಸುರಂಗದಲ್ಲಿ ಕಳೆದ 13 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ದೊಡ್ಡ ಪೈಪ್​ ಮೂಲಕ ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಕೆಲವೇ ಕ್ಷಣಗಳಲ್ಲಿ ಸುರಂಗದಿಂದ ಹೊರ ಕರೆತರಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಆರ್​ಎಫ್​)ದ ಅಧಿಕಾರಿಗಳು ತಿಳಿಸಿದ್ದಾರೆ.

    ಇದೀಗ ಎನ್​ಡಿಆರ್​ಎಫ್​ ಬಿಡುಗಡೆ ಮಾಡಿರುವ ವಿಡಿಯೋವೊಂದರಲ್ಲಿ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಯಾವ ರೀತಿ ಹೊರ ತೆಗೆಯಲಾಗುತ್ತದೆ ಎಂಬುದನ್ನು ಪ್ರದರ್ಶಿಸಲಾಗಿದೆ. ಸ್ವತಃ ರಕ್ಷಣಾ ಕಾರ್ಯಕರ್ತರು ಪೈಪ್​ ಒಳಗೆ ಹೋಗಿ ಗಾಲಿ ಸ್ಟ್ರೆಚರ್​ನಲ್ಲಿ ಹೊರಗಡೆ ಬರುವ ದೃಶ್ಯವಿದೆ.

    ಸುರಂಗದ ಒಳಗೆ ಕುಸಿದಿರುವ ಅವಶೇಷಗಳನ್ನು ಕೊರೆದು ಅಳವಡಿಸಲಾಗಿರುವ ಬೃಹತ್​ ಪೈಪ್​ ಮೂಲಕ ಸ್ಟ್ರೆಚರ್​ ಅನ್ನು ಕಳುಹಿಸಿ ಪ್ರತಿಯೊಬ್ಬ ಕಾರ್ಮಿಕರನ್ನು ಅದರ ಮೇಲೆ ಮಲಗಿಸಿ ಹಗ್ಗದ ಸಹಾಯದಿಂದ ಸ್ಟ್ರೆಚರ್​ ಅನ್ನು ಹೊರಗೆಳೆಯಲಾಗುವುದು. ಪೈಪ್​ಗಳನ್ನು ವೆಲ್ಡಿಂಗ್​ ಮಾಡಿರುವ ಕಾರಣ ಕಾರ್ಮಿಕರು ತೆವಳುವಾಗ ತರಚಿ ಗಾಯಗಳಾಗಬಹುದು ಎಂಬ ಕಾರಣಕ್ಕೆ ಗಾಲಿ ಸ್ಟ್ರೆಚರ್​ ಸಹಾಯದಿಂದ ಹೊರಗೆ ತರಲು ಎನ್​ಡಿಆರ್​ಎಫ್​ ಸಲಕ ಸಿದ್ಧತೆಯನ್ನು ಮಾಡಿಕೊಂಡಿದೆ.

    ಕಾರ್ಮಿಕರಿಗೆ ಒಬ್ಬೊಬ್ಬರಾಗಿ ತೆವಳುವ ಆಯ್ಕೆಯನ್ನು ಸಹ ಪರಿಗಣಿಸಿದ್ದರೂ ಅವರ ಆರೋಗ್ಯ ಸ್ಥಿತಿಯು ಸ್ಟ್ರೆಚರ್​ ಮೇಲೆ ಹೆಚ್ಚು ಅವಲಂಬನೆಯಾಗಿದೆ. ಏಕೆಂದರೆ, ಕಳೆದ 13 ದಿನಗಳಿಂದ ಯಾವುದೇ ನೈಸರ್ಗಿಕ ಬೆಳಕು ಮತ್ತು ಸಂಪೂರ್ಣ ಊಟವಿಲ್ಲದೆ ಸುರಂಗದ ಭಗ್ನಾವಶೇಷಗಳ ಅಡಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ನಿತ್ರಾಣಗೊಂಡಿರುವ ಕಾರ್ಮಿಕರಿಗೆ ತೆವಳುವುದು ತುಂಬಾ ಕಷ್ಟವಾಗಬಹುದು. ಹೀಗಾಗಿ ಗಾಲಿ ಸ್ಟ್ರೆಚರ್​ ರಕ್ಷಣಾ ಕಾರ್ಯಕರ್ತರ ಪ್ರಧಾನ ಆಯ್ಕೆಯಾಗಿದೆ.

    ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿರುವ ಸಿಲ್ಕ್​ಯಾರ್​ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಗಳು ಅಂತಿಮ ಘಟ್ಟಕ್ಕೆ ಬಂದಿದೆ. ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರು ಮಂಗಳವಾರ ಮೊದಲ ಬಾರಿಗೆ ಹೊರ ಜಗತ್ತಿನ ಮಂದಿಗೆ ಕಾಣಿಸಿಕೊಂಡರು. ಪೈಪ್ ಮೂಲಕ ಅಳವಡಿಸಲಾದ ಕ್ಯಾಮೆರಾ ಮೂಲಕ ಕಾರ್ಮಿಕರ ದೃಶ್ಯಗಳನ್ನು ಸೆರೆಹಿಡಿಯಲಾಯಿತು. ಬದುಕಿದ್ದಾರೋ? ಯಾವ ಸ್ಥಿತಿಯಲ್ಲಿದ್ದಾರೋ ಎಂಬ ಚಿಂತೆಯಲ್ಲಿದ್ದ ಮುಳುಗಿದ್ದ ಕಾರ್ಮಿಕರ ಕುಟುಂಬಕ್ಕೆ ಈ ಒಂದುಯ ದೃಶ್ಯ ಹೊಸ ಭರವಸೆ ತಂದಿತು. ಕಾರ್ಮಿಕರಿಗೂ ಕೂಡ ಹೊಸ ಬೆಳಕು ನೀಡಿತು.

    ಸುರಂಗ ಮಾರ್ಗದ ಉದ್ದೇಶವೇನು?
    ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. (ಏಜೆನ್ಸೀಸ್​)

    ಅಪ್ಪ ರೂಮ್​ನಲ್ಲಿದ್ದಾರೆ ಇನ್ನೊಂದು ತಿಂಗಳಲ್ಲಿ ನಗ್ತಾರೆ… ರೋಹಿತ್​ ಪುತ್ರಿಯ ವಿಡಿಯೋ ವೈರಲ್​

    ನಮ್ಮ ಮೆಟ್ರೋ ಒಳಗೆ ಭಿಕ್ಷೆ ಬೇಡುತ್ತಿದ್ದವನಿಗೆ ಬಿತ್ತು ದಂಡ

    ಬಿಟ್​​ಕಾಯಿನ್​ ಪ್ರಕರಣ; 3ದಿನಗಳಲ್ಲಿ 40 ಲಕ್ಷ ಕಳೆದುಕೊಂಡ ದೆಹಲಿ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts