More

    ಬಿಟ್​​ಕಾಯಿನ್​ ಪ್ರಕರಣ; 3ದಿನಗಳಲ್ಲಿ 40 ಲಕ್ಷ ಕಳೆದುಕೊಂಡ ದೆಹಲಿ ವ್ಯಕ್ತಿ

    ನವದೆಹಲಿ: ಬಿಟ್‌ ಕಾಯಿನ್ ಅನ್ನೋ ಪದವನ್ನೇ ಬಹಳಷ್ಟು ಜನರಿಗೆ ಗೊತ್ತೇ ಇರಲಿಲ್ಲ. ಯಾವಾಗ ಹ್ಯಾಕರ್ ಶ್ರೀಕಿ ಪೊಲೀಸರಿಗೆ ತಗಲಾಕಿಕೊಂಡನೋ ಆಗ ಈ ಬಿಟ್ ಕಾಯಿನ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಲು ಶುರುವಾಯ್ತು. ಕೆಲವು ದಿನಗಳಿಂದ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣ ಇದೀಗ ಮತ್ತೆ ಮುನ್ನೆಲೆ ಬಂದಿದೆ.

    ದೆಹಲಿಯ ನಿವಾಸಿಯೊಬ್ಬ ಹೆಚ್ಚಿನ ಆದಾಯದ ಆಕರ್ಷಣೆಗೆ ಒಳಗಾಗಿ ಹಣ ಹೂಡಿಕೆ ಮಾಡಿ ಲಕ್ಷಂತರ ರೂಪಾಯಿ ಹಣವನ್ನು ಕಳೆದು ಕೊಂಡು ಪೊಲೀಸರ ಮೊರೆ ಹೋಗಿದ್ದಾನೆ. ಈ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

    ದೆಹಲಿಯ ನಿವಾಸಿಯೊಬ್ಬ ಅರೆಕಾಲಿಕ ಉದ್ಯೋಗವನ್ನು ಹುಡುಕುತ್ತಿದ್ದೀರಾ ಎನ್ನುವ ಸಂದೇಶವನ್ನು ಸೋಶಿಯಲ್​ ಮೀಡಿಯಾದಲ್ಲಿ ನೋಡಿದ್ದಾರೆ. ನಂತರ ಈ ವ್ಯಕ್ತಿ ಉದ್ಯೋಗಕ್ಕಾಗಿ ಅವರನ್ನು ಸಂಪರ್ಕ ಮಾಡಿದ್ದಾರೆ. ನಂತರ ವಂಚಕ ಯೂಟ್ಯೂಬ್​​ ವಿಡಿಯೋ ಲಿಂಕ್​ವೊಂದನ್ನು ಕಳಿಸಿದ್ದಾನೆ. ನಂತರ ಕೆಲವು ದಿನಗಳ ನಂತರ ವಿಐಪಿ ಡೈಲಿ ಟಾಸ್ಕ್ ಎನ್ನುವ ಸೋಶಿಯಲ್​​ ಮೀಡಿಯಾ​​ ಗ್ರೂಪ್​​ಗೆ ಸೇರಿಸಲಾಯಿತ್ತು. ನಂತರ ವಂಚಕ ದೆಹಲಿ ನಿವಾಸಿಗೆ ಬಿಟ್​ಕಾಯಿನ್​ ಬಗ್ಗೆ ಹೇಳಲು ಪ್ರಾರಂಭಿಸಿದ್ದಾನೆ. ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಹಣವನ್ನು ಲಾಭವಾಗಿ ಪಡೆಯಬಹುದು ಎಂದು ನಂಬಿಸಲು ಎಲ್ಲಿಲ್ಲದ ಕಸರತ್ತು ಮಾಡಿದ್ದಾನೆ. ಕೆಲವು ಟ್ರಾನ್​ಜೆಕ್ಷನ್​​ ಕೂಡಾ ಮಾಡಿದ್ದಾನೆ. ಇದರಿಂದ  ಹೆಚ್ಚಿನ ಹಣ ಲಾಭ ಬರುವಂತೆ  ಮಾಡಿದ್ದಾರೆ.  ವ್ಯಕ್ತಿ ಈ ವ್ಯವಹಾರದ ಕುರಿತಾಗಿ ನಂಬಿಕೆ ಬಂದಿದೆ. ನಂತರ ವಂಚಕ ಈತನಿಗೆ ಹಣ ಹೂಡಿಕೆ ಮಾಡುವಂತೆ ಮನವೊಲಿಸಿದ್ದಾನೆ.

    ಹಣ ಹೂಡಿಕೆ ಮಾಡಿದ್ರೆ ಪ್ರತಿ ಠೇವಣಿಯನ್ನು ಕೆಲವು ಕಾರ್ಯಗಳಿಗೆ ನಿಯೋಗಿಸಲಾಗುತ್ತದೆ. ನಂತರ ಕ್ರೆಡಿಟ್​ ಸ್ಕೋರ್​ ಖಾತೆಯಲ್ಲಿ ಕಾಣಿಸುತ್ತಿದೆ. ಬಿಟ್​ಕಾಯಿನಿಂದ ನೀವು ಅಧಿಕ ಹಣವನ್ನು ಗಳಿಕೆ ಮಾಡಬಹದು ಎಂದು ಕಥೆ ಕಟ್ಟಿದ್ದಾನೆ. ಇದನ್ನು ನಂಬಿದ ವ್ಯಕ್ತಿ ಒಂದು ದಿನದಲ್ಲಿ 7.5 ಲಕ್ಷ ರೂ. ಕ್ಕಿಂತಲೂ ಹೆಚ್ಚು ಮೌಲ್ಯದ ವಹಿವಾಟು ಮಾಡಿದ್ದಾನೆ. ಆದರೆ ಎಲ್ಲಾ ಹಣವನ್ನು ಕಳೆದುಕೊಂಡಿದ್ದಾನೆ. ಹಣವನ್ನು ವಾಪಸ್​ ಕೊಡಿ ಎಂದು ಕೇಳಿದಾಗ ವಂಚಕರು ಮತ್ತೆ 20 ಲಕ್ಷ ರೂ. ಹೂಡಿಕೆ ಮಾಡಲು ಹೇಳಿದ್ದಾರೆ. ನಂತರ ಸಂತ್ರಸ್ತ ವ್ಯಕ್ತಿ ತನ್ನ ಹಣವನ್ನು ವಾಪಸ್​ ಪಡೆಯಲು ಮತ್ತೆ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಾನೆ. ಆದರೆ ಈತನ ಅರ್ಜಿಯನ್ನು ಪದೇ ಪದೇ ತಿರಸ್ಕರಿಸಲಾಗುತ್ತಿತ್ತು.

    ವಂಚನೆಗೊಳಗಾದ ವ್ಯಕ್ತಿ ಹೀಗೆ ತನ್ನ ಹಣವನ್ನು ವಾಪಸ್​ ಪಡೆಯಲು ಹೋಗಿ 3 ದಿನಗಳಲ್ಲಿ 40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮೂರು ದಿನಗಳ ಅವಧಿಯಲ್ಲಿ 63 ವಹಿವಾಟುಗಳನ್ನು ನಡೆಸಿದ ನಂತರ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ನಂತರ ತಾನೂ ವಂಚನೆಗೆ ಒಳಗಾಗಿರುವುದನ್ನು ಅರಿತ ವ್ಯಕ್ತಿ ಪೊಲೀಸ್​​ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts