

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ ಹತ್ತನೇ ವಾರವನ್ನು ಮುಗಿಸಿ, 11ನೇ ವಾರಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ 10ನೇ ವಾರಕ್ಕೆ ವೈಲ್ಡ್ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿಕೊಟ್ಟಿದ್ದ ಪವಿ ಪೂವಪ್ಪ ಭಾನುವಾರ ಸೂಪರ್ ಸಂಡೇ ವಿತ್ ಸುದೀಪ ಸಂಚಿಕೆಯಲ್ಲಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ಎಂದಿನಂತೆ ಈ ಭಾನುವಾರದ ಸಂಚಿಕೆಯು ಕೂಡ ನಗುವಿನಂದಲೇ ಆರಂಭಗೊಂಡು, ಮಧ್ಯೆದಲ್ಲಿ ಮನೆಯ ಇತರೆ ಸ್ಪರ್ಧಿಗಳು ಮುಖದ ಫೋಟೋವನ್ನು ಮಡಿಕೆಯ ಮೇಲಿಟ್ಟು ಸೂಕ್ತ ಕಾರಣಗಳನ್ನು ಕೊಟ್ಟು, ಮಡಿಕೆ ತಲೆ ಹೊಡೆಯುವ ಚಟುವಟಿಕೆ ಕೊಂಚ ಸ್ಪರ್ಧಿಗಳ ನಡುವೆ ಕೋಪದ ತಾಪವನ್ನು ಹೆಚ್ಚಿಸಿತು. ಸದ್ಯ ಮಡಿಕೆ ಪುಡಿ ಮಾಡುವ ಮುನ್ನ ಸದಸ್ಯರು ನೀಡಿದ ಕಾರಣಗಳು ಮುಂಬರುವ ದಿನಗಳಲ್ಲಿ ಎದುರಾಗುವ ಟಾಸ್ಕ್ಗಳಲ್ಲಿ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರಗಳು ಈಗಾಗಲೇ ವೀಕ್ಷಕರ ತಲೆಯಲ್ಲಿ ಓಡಿರುವುದಂತು ಅಕ್ಷರಶಃ ಸತ್ಯ ಎಂದೇ ಹೇಳಬಹುದು.
ಈ ವಾರ ಯಾರು ಮನೆಯಿಂದ ಹೊರ ಹೋಗಬಹುದು ಎಂಬ ಕಾತರದಲ್ಲಿದ್ದ ವೀಕ್ಷಕರ ಕಣ್ಮುಂದೆ ಕಡೆಯಲ್ಲಿ ಉಳಿದುಕೊಂಡಿದ್ದು, ಮೈಕಲ್, ಸಿರಿ ಮತ್ತು ಪವಿ ಪೂವಪ್ಪ ಮಾತ್ರ. ಈ ಮೂವರ ಪೈಕಿ ಮೊದಲು ಸೇವ್ ಆದ ಮೈಕಲ್ ತನಗೆ ವೋಟ್ ಹಾಕಿದವರಿಗೆ ಧನ್ಯವಾದ ತಿಳಿಸಿದರು.
ಇದಾದ ಬಳಿಕ ಅಂತಿಮವಾಗಿ ಸಿರಿ ಮತ್ತು ಪವಿ ಮಧ್ಯೆ ಯಾರು ಹೊರ ಹೋಗಲಿದ್ದಾರೆ ಎಂದು ಹೇಳಿದ ಸುದೀಪ್, ಬ್ಯಾಡ್ ಲಕ್ ಪವಿ, ನೀವು ಈ ವಾರ ಎಲಿಮಿನೇಟ್ ಆಗಿದ್ದೀರಿ ಎಂದು ಹೇಳಿದರು. ಇದೀಗ 10ನೇ ವಾರದ ಅಂತ್ಯಕ್ಕೆ ಬಿಗ್ ಮನೆಯಿಂದ ವೈಲ್ಡ್ಕಾರ್ಡ್ ಎಂಟ್ರಿ ಪವಿ ಪೂವಪ್ಪ ಹೊರಬಂದಿದ್ದಾರೆ.