More

    ಚೊಚ್ಚಲ ಬಾರಿಗೆ ಏಷ್ಯಾಕಪ್ ಕಿರೀಟ ಜಯಿಸಿದ ಬಾಂಗ್ಲಾದೇಶ: ಯಶಸ್ಸಿನ ಹಿಂದೆ ಟೀಮ್ ಇಂಡಿಯಾ ಮಾಜಿ ಆಟಗಾರನ ಪಾತ್ರ!

    ದುಬೈ: ಆರಂಭಿಕ ಆಶಿಕುರ್ ರಹಮಾನ್ ಶಿಬ್ಲಿ (129) ಶತಕದ ಬಲದಿಂದ ಬಾಂಗ್ಲಾದೇಶ ತಂಡ 19 ವಯೋಮಿತಿ ಪುರುಷರ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಮೊದಲ ಬಾರಿ ಚಾಂಪಿಯನ್ ಪಟ್ಟವೇರಿದೆ. ಭಾನುವಾರ ನಡೆದ ೈನಲ್‌ನಲ್ಲಿ ಬಾಂಗ್ಲಾದೇಶ ತಂಡ, ಆತಿಥೇಯ ಯುಎಇ ವಿರುದ್ಧ 195 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಪ್ರಶಸ್ತಿ ಹೋರಾಟದಲ್ಲಿ ಬಾಂಗ್ಲಾ 8 ವಿಕೆಟ್‌ಗೆ 282 ರನ್ ಪೇರಿಸಿದರೆ, ಯುಎಇ 24.5 ಓವರ್‌ಗಳಲ್ಲಿ 87 ರನ್‌ಗಳಿಗೆ ಸರ್ವಪತನ ಕಂಡಿತು. ಕಿರಿಯರ ಏಷ್ಯಾಕಪ್‌ನಲ್ಲಿ ಮೊದಲ ಬಾರಿ ಭಾರತ (8), ಪಾಕ್ (1), ಅ್ಘಾನಿಸ್ತಾನ (1) ಹೊರತಾದ ತಂಡವೊಂದು ಪ್ರಶಸ್ತಿ ಗೆದ್ದಿದೆ.

    ಬಾಂಗ್ಲಾ: 8ವಿಕೆಟ್‌ಗೆ 282 (ಆಶಿಕುರ್ 129, ರಿಜ್ವಾನ್ 60, ಆರಿುಲ್ 50, ಮಹುಜುರ್ 21, ಅಹ್ಮದ್ 52ಕ್ಕೆ 4,ರೆಹಮಾನ್ 41ಕ್ಕೆ 2).
    ಯುಎಇ: 24.5 ಓವರ್‌ಗಳಲ್ಲಿ 87 (ಅಕ್ಷತ್ 11, ಧ್ರುವ್ 25, ಆರ್ಯನ್ಶ 9, ರೋಹನತ್ 26ಕ್ಕೆ 3,ಮರ್ೂ 29ಕ್ಕೆ3). ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ: ಆಶಿಕುರ್ ರಹಮಾನ್.

    https://x.com/WasimJaffer14/status/1736372796748599442?s=20

    ಬಾಂಗ್ಲಾ ಯಶಸ್ಸಿನಲ್ಲಿ ಭಾರತೀಯನ ಪಾತ್ರ!: 19 ವಯೋಮಿತಿ ಬಾಂಗ್ಲಾ ತಂಡ ಏಷ್ಯಾಕಪ್ ಜಯಿಸುವಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾರ್ ಪ್ರಮುಖ ಕೊಡುಗೆ ನೀಡಿದ್ದಾರೆ. ಸೆಮಿೈನಲ್‌ನಲ್ಲಿ ಭಾರತಕ್ಕೆ ಆಘಾತ ನೀಡಿ ಬಾಂಗ್ಲಾ ೈನಲ್‌ಗೇರಿತ್ತು.
    ಮುಂಬೈ ಮಾಜಿ ಬ್ಯಾಟರ್ ಜಾರ್, 2022ರ ಜುಲೈನಲ್ಲಿ ಬಾಂಗ್ಲಾ ಕಿರಿಯರ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ 2 ವರ್ಷದ ಅವಧಿಗೆ ನೇಮಕಗೊಂಡಿದ್ದರು. ಭಾರತ ಪರ 31 ಟೆಸ್ಟ್ ಪಂದ್ಯ ಆಡಿರುವ ಜಾರ್, ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ 19,410 ರನ್ ಕಲೆಹಾಕಿದ್ದಾರೆ. ಬಳಿಕ ಒಡಿಶಾ ತಂಡದ ಕೋಚ್ ಆಗಿ, ಬಳಿಕ 2019 ರಿಂದ 2021ರ ಅವಧಿಗೆ ಐಪಿಎಲ್‌ನ ಪಂಜಾಬ್ ಕಿಂಗ್ಸ್‌ನ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts