More

    ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕ್ಲಬ್ ಸೇರಿದ ನಾಥನ್ ಲ್ಯಾನ್: ಪರ್ತ್‌ನಲ್ಲಿ ಆಸೀಸ್‌ಗೆ ಶರಣಾದ ಪಾಕ್

    ಪರ್ತ್: ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲ್ಯಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ವಿಶ್ವದ 8ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ ಹೀಮ್ ಅಶ್ರ್ರನ್ನು ಎಲ್‌ಬಿ ಬಲೆಗೆ ಬೀಳಿಸುವ ಮೂಲಕ ನಾಥನ್ ಲ್ಯಾನ್ ಈ ಸಾಧನೆ ಮಾಡಿದರು. ವೃತ್ತಿಜೀವನದ 123ನೇ ಟೆಸ್ಟ್‌ನಲ್ಲಿ ಲ್ಯಾನ್ ಈ ಮೈಲಿಗಲ್ಲು ನೆಟ್ಟಿದ್ದಾರೆ.

    36 ವರ್ಷದ ಲ್ಯಾನ್ 500 ವಿಕೆಟ್ ಪಡೆದ ಆಸ್ಟ್ರೇಲಿಯಾದ 3ನೇ ಬೌಲರ್ ಆಗಿದ್ದಾರೆ. ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಮತ್ತು ವೇಗಿ ಗ್ಲೆನ್ ಮೆಕ್‌ಗ್ರಾತ್ ಮೊದಲಿಬ್ಬರು. ಲ್ಯಾನ್ ವಿಶ್ವದ 4ನೇ ಸ್ಪಿನ್ನರ್ ಮತ್ತು ಮುತ್ತಯ್ಯ ಮುರಳೀಧರನ್ ಬಳಿಕ ಈ ಸಾಧನೆ ಮಾಡಿದ 2ನೇ ಆ್ ಸ್ಪಿನ್ನರ್ ಆಗಿದ್ದಾರೆ. ಭಾರತದ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿರುವ ಮತ್ತೋರ್ವ ಸ್ಪಿನ್ನರ್.

    2006ರಲ್ಲಿ ಶೇನ್ ವಾರ್ನ್ ನಿವೃತ್ತಿ ಹೊಂದಿದ ಬಳಿಕ ಸಮರ್ಥ ಸ್ಪಿನ್ನರ್ ಸಿಗದೆ ಚಡಪಡಿಸುತ್ತಿದ್ದ ಆಸೀಸ್‌ಗೆ 2011ರಲ್ಲಿ ನಾಥನ್ ಲ್ಯಾನ್ ಟೆಸ್ಟ್ ಪದಾರ್ಪಣೆ ಮಾಡಿದ ಬಳಿಕ ಆ ಕೊರತೆ ನೀಗಿಸಿದ್ದರು. ಆಸೀಸ್ ತಂಡ ಸೇರುವ ಮುನ್ನ ಅವರು ಅಡಿಲೇಡ್‌ನಲ್ಲಿ ಪಿಚ್ ಕ್ಯುರೇಟರ್ ಆಗಿದ್ದರು ಎಂಬುದು ವಿಶೇಷ.
    ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕ್ಲಬ್: ಮುತ್ತಯ್ಯ ಮುರಳೀಧರನ್ (800), ಶೇನ್ ವಾರ್ನ್ (708), ಜೇಮ್ಸ್ ಆಂಡರ್‌ಸನ್ (690), ಅನಿಲ್ ಕುಂಬ್ಳೆ (619), ಸ್ಟುವರ್ಟ್ ಬ್ರಾಡ್ (604), ಗ್ಲೆನ್ ಮೆಕ್‌ಗ್ರಾಥ್ (563), ಕರ್ಟ್ನಿ ವಾಲ್ಶ್ (519), ನಾಥನ್ ಲ್ಯಾನ್ (501).

    ಪರ್ತ್‌ನಲ್ಲಿ ಆಸೀಸ್‌ಗೆ ಶರಣಾದ ಪಾಕ್: ಸ್ಟ್ರೇಲಿಯಾದ ಸಂಘಟಿತ ದಾಳಿಗೆ ಕುಸಿದ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಲ್ಕೇ ದಿನಗಳಲ್ಲಿ 360 ರನ್‌ಗಳಿಂದ ಶರಣಾಗಿದೆ. ಇದರೊಂದಿಗೆ ಪಾಕ್ ತಂಡ 1999ರಿಂದ ಆಸೀಸ್‌ನಲ್ಲಿ ಸತತ 15 ಟೆಸ್ಟ್ ಸೋತಂತಾಗಿದೆ. 1995ರಲ್ಲಿ ಕೊನೆಯದಾಗಿ ಪಾಕ್ ತಂಡ ಕಾಂಗರೂ ನೆಲದಲ್ಲಿ ಗೆದ್ದಿದೆ.

    ಭಾನುವಾರ 2 ವಿಕೆಟ್‌ಗೆ 84 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಆಸೀಸ್, 5 ವಿಕೆಟ್‌ಗೆ 233 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ ಗೆಲುವಿಗೆ 450 ರನ್ ಸವಾಲು ಪಡೆದ ಪಾಕ್, ಚಹಾ ವಿರಾಮದ ಬಳಿಕ 30.2 ಓವರ್‌ಗಳಲ್ಲಿ ಕೇವಲ 89 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಪ್ಯಾಟ್ ಕಮ್ಮಿನ್ಸ್ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಡಿ. 26ರಿಂದ ಮೆಲ್ಬೋರ್ನ್‌ನಲ್ಲಿ 2ನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದೆ.

    ಆಸ್ಟ್ರೇಲಿಯಾ: 487 ಮತ್ತು 5 ವಿಕೆಟ್‌ಗೆ 233 (ಖವಾಜ 90, ಸ್ಮಿತ್ 45, ಹೆಡ್ 14, ಮಾರ್ಷ್ 63*, ಖುರ‌್ರಮ್ 45ಕ್ಕೆ 3), ಪಾಕಿಸ್ತಾನ: 271 ಮತ್ತು 89 (ಇಮಾಮ್ 10, ಬಾಬರ್ 14, ಮಸೂದ್ 2, ಶಕೀಲ್ 24, ರ್ಸ್ರಾಜ್ 4, ಸ್ಟಾರ್ಕ್ 31ಕ್ಕೆ 3, ಹ್ಯಾಸಲ್‌ವುಡ್ 13ಕ್ಕೆ 3, ಲ್ಯಾನ್ 14ಕ್ಕೆ 2, ಕಮ್ಮಿನ್ಸ್ 11ಕ್ಕೆ 1); ಪಂದ್ಯಶ್ರೇಷ್ಠ: ಮಿಚೆಲ್ ಮಾರ್ಷ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts