BBKS10: ರಣರಂಗವಾಯ್ತು ಬಿಗ್​​ ಮನೆ; ‘ಅವಳು ಯಾವ ಸೀಮೆ ರಾಣಿ ಗುರೂ'….?

Untitled design (37)
Published on

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ರಕ್ಕಸ-ಗಂಧರ್ವರ ಜಿದ್ದಾಜಿದ್ದಿ ಕ್ಷಣಕ್ಷಣಕ್ಕೂ ತೀವ್ರವಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಗಳಿಗೆಗೊಂದು ತಿರುವು ಪಡೆದುಕೊಂಡು ಬೆಳೆಯುತ್ತಲೇ ಇದೆ. ಆದರೆ ಆ ಟಾಸ್ಕ್‌ ಈಗ ಒಂದು ಹಂತಕ್ಕೆ ಬಂದು ನಿಂತಿರುವ ಸೂಚನೆ ಈಗಾಗಲೇ ವೀಕ್ಷಕರಿಗೆ ಸಿಕ್ಕಿದೆ. ಆರಂಭದಲ್ಲಿ ರಾಕ್ಷಸರಾಗಿದ್ದ ಸಂಗೀತಾ ತಂಡ, ಈಗ ಗಂಧರ್ವರಾಗಿದ್ದಾರೆ.

ಅತ್ತೆಗೊಂದು ಕಾಲ..ಸೊಸೆಗೊಂದು ಕಾಲ ಎಂಬಂತೆ ರಾಕ್ಷಸರೆಲ್ಲ ಇಂದು ಗಂಧರ್ವರು, ಗಂಧರ್ವರೆಲ್ಲಾ ಈಗ ರಾಕ್ಷಸರು. ಸದ್ಯ ಇದೇ ಟಾಸ್ಕ್​ನಲ್ಲಿ ಕಿಚ್ಚು ಹೆಚ್ಚಲು ಕಾರಣವಾಯ್ತು ಎಂದು ವೀಕ್ಷಕರಿಗೆ ಅನಿಸಿದೆ. ಇದು ಸೇಡು ತೀರಿಸಿಕೊಳ್ಳುವ ರೀತಿ ಸಾಗುತ್ತಿದ್ದು, ಮೊದಲ ದಿನ ರಕ್ಕಸರಿಂದ ಕಿರುಕುಳ, ಅಪಮಾನ ಅನುಭವಿಸಿದ್ದ ವರ್ತೂರು ಸಂತೋಷ್ ತಂಡ ದುಪ್ಪಟ್ಟು ರೋಷದೊಂದಿಗೆ ರಕ್ಕಸರಾಗಿ ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ.

ಈ ನಡುವೆ ಸದ್ಯ ಗಂಧರ್ವರಾಗಿರುವ ಸಂಗೀತಾ ತಂಡ ದಣಿದಂತೆ ಕಾಣಿಸುತ್ತಿದೆ. ನಿರಂತರವಾದ ರಕ್ಕಸರ ಕಿರುಕುಳವನ್ನು ತಾಳಲಾಗದೆ ಕಾರ್ತಿಕ್, ‘ನನ್ನ ಕೈಲಿ ಸಾಧ್ಯವಾಗುತ್ತಿಲ್ಲ’ ಎಂದು ನೆಲಕ್ಕೊರಗಿದ್ದಾರೆ. ಇದರ ಬೆನ್ನಲ್ಲೇ ನಾಯಕಿ ಸಂಗೀತಾ, ಸಿರಿ ಅವರೊಂದಿಗೆ, ‘ಪನಿಷ್ಮೆಂಟ್ ತೆಗೆದುಕೊಳ್ಳಬೇಕು ಎಂದು ಎಲ್ಲೂ ಹೇಳಿಲ್ಲ. ನಾವು ತಗೊಳ್ಳಲ್ಲ ಎಂದು ಹೇಳೋಣ’ ಎಂದು ಹೇಳಿದ್ದಾರೆ.

ಆದ್ರೆ, ಇತ್ತ ರಾಕ್ಷಸರ ಗುಂಪಿನ ನಮ್ರತಾ, ‘ಅವಳು ಯಾವ ಸೀಮೆ ರಾಣಿ ಗುರೂ..ಇಂಡಿವಿಷುವಲ್ ಗೇಮ್ ಆಡೋಕೆ ಬಂದಿಲ್ವಾ ನೀವು?’ ಎಂದು ಎದುರಾಳಿ ವಿರುದ್ಧ ಕಿರುಚಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಂಗೀತಾ 'ಅವ್ರು ವರ್ಸ್ಟ್‌ ಆಗಿ ಮಾಡ್ತಿರೋದಕ್ಕೆ ಅವರೇ ಹೊಣೆ ಮ್ಯಾಮ್, ನಾನದಕ್ಕೆ ಕಾರಣ ಅಲ್ಲ’ ಎಂದು ತನ್ನದೇ ಗುಂಪಿನ ಸದಸ್ಯರ ಎದುರಿಗೆ ಕೈ ಮುಗಿದು ಕಣ್ಣೀರಿಟ್ಟಿದ್ದಾರೆ.

ಸದ್ಯ ಇಡೀ ಮನೆ ರಣರಂಗವಾಗಿದ್ದು, ಯಾವುದು ಸರಿ, ಯಾವುದು ತಪ್ಪು ಎಂಬುದು ತಿಳಿಯದಷ್ಟು ಗೊಂದಲದ ಗೂಡಾಗಿದೆ. ಇದರ ಪರಿಣಾಮ ಏನಾಗುತ್ತದೆ? ಯಾವ ತಂಡ ಗೆಲುವಿನ ದಡ ಸೇರುತ್ತದೆ? ಯಾವ ತಂಡ ಸೋಲಿನಲ್ಲಿ ಕೊಚ್ಚಿಕೊಂಡು ಹೋಗಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಿಚ್ಚನ ಪಂಚಾಯಿತಿಯಲ್ಲಿ ಸಿಗಲಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net