More

    ತೆಲಂಗಾಣ ಸಿಎಂ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ; ಸೋನಿಯಾ, ರಾಹುಲ್, ಖರ್ಗೆ ಭಾಗಿ

    ತೆಲಂಗಾಣ : ತೆಲಂಗಾಣ ಸಿಎಂ ಆಗಿ ಕಾಂಗ್ರೆಸ್ ನಾಯಕ ಅನುಮುಲ ರೇವಂತ್ ರೆಡ್ಡಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ ಒಟ್ಟು 11 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದೆ. ತೆಲಂಗಾಣ ರಾಜ್ಯಪಾಲ ತಮಿಳಿಸೈ ಸುಂದರರಾಜನ್ ಅವರು ರೇವಂತ್ ರೆಡ್ಡಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. 

    ಸಮಾರಂಭದಲ್ಲಿ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ಸೇರಿದಂತೆ ಎಲ್ಲ ಹಿರಿಯ ಕಾಂಗ್ರೆಸ್ ನಾಯಕರು ಅಲ್ಲಿ ಹಾಜರಿದ್ದರು. ರೇವಂತ್ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಉಪಸ್ಥಿತರಿದ್ದರು.

    11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
    1. ದಾಮೋದರ ರಾಜನರಸಿಂಹ
    2. ಉತ್ತಮ್ ಕುಮಾರ್ ರೆಡ್ಡಿ
    3. ಭಟ್ಟಿ ವಿಕ್ರಮಾರ್ಕ
    4. ಕೋಮಟಿ ರೆಡ್ಡಿ ವೆಂಕಟ್ ರೆಡ್ಡಿ
    5. ಸೀತಕ್ಕ
    6. ಪೊನ್ನಂ ಪ್ರಭಾಕರ್
    7. ಶ್ರೀಧರ್ ಬಾಬು
    8. ತುಮ್ಮಲ ನಾಗೇಶ್ವರ ರಾವ್
    9. ಕೊಂಡ ಸುರೇಖಾ
    10. ಜುಪಲ್ಲಿ ಕೃಷ್ಣ
    11. ಪೊಂಗುಲಾಟಿ

    ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ, ಆದ್ರೆ ‘ಬಿಜೆಪಿಯ ಸಿಎಂ’; ಈ ಚರ್ಚೆ ಏಕೆ ಹುಟ್ಟಿಕೊಂಡಿತು, ರೇವಂತ್ ರೆಡ್ಡಿ ಹಿನ್ನಲೆ ಏನು?

     

    ಇಂದು ತೆಲಂಗಾಣದ ನೂತನ ಮುಖ್ಯಮಂತ್ರಿ ಆಯ್ಕೆ ಅಂತಿಮ; ಸಿಎಂ ರೇಸ್‍ನಲ್ಲಿ ಮುಂದಿದ್ದಾರೆ ಈ ನಾಯಕ

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts