BBKS10: 'ಕನ್ನಡ ಸುಂದರ ಭಾಷೆ'! ಅನಿವಾಸಿ ಕನ್ನಡಿಗರಿಗೆ ಮೈಕಲ್​ ಕೊಟ್ಟ ಖಡಕ್ ಸಲಹೆ ಹೀಗಿದೆ

ವಿಜಯವಾಣಿ - 2024-01-08T125211.939
Published on

ಬೆಂಗಳೂರು: ಹಾಯ್, ನಾನು ನಿಮ್ಮ ಮಣ್ಣಿನ ಮಗ. ನಿಮ್ಮ ಕನ್ನಡದ ಕಂದ. ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಮೈಕಲ್ ಅಜಯ್ ಎಂದು ಮಾತು ಪ್ರಾರಂಭಿಸಿದ ಮೈಕಲ್, "ತುಂಬ ಮಿಸ್ಸಿಂಗ್ ಫೀಲಿಂಗ್‌ನಲ್ಲಿದ್ದೀನಿ. ಆದ್ರೆ, ಈಗ ಹೊರಗಡೆ ಇರುವ ಜೀವನವನ್ನು ಅನುಭವಿಸಲು ಉತ್ಸಾಹದಲ್ಲಿದ್ದೀನಿ. ನಾನು ಬಿಗ್‌ಬಾಸ್‌ ಮನೆಯೊಳಗೆ ಹೋದಾಗ, ಅಲ್ಲಿನ ವಾತಾವರಣ ನೋಡಿ ಎರಡು ಮೂರು ವಾರ ಮಾತ್ರ ಇರಬಹುದಷ್ಟೇ ಎಂದುಕೊಂಡಿದ್ದೆ. ಆದರೆ ಹದಿಮೂರು ವಾರ ಉಳಿದೆ" ಎಂದರು.

"ಕನ್ನಡ ಒಂದು ಸುಂದರವಾದ ಭಾಷೆ. ನಾನು ನನ್ನ ಬದುಕಿನಲ್ಲಿ ಕನ್ನಡ ಬಳಸಿದ್ದು ತುಂಬ ಕಡಿಮೆ. ಆದರೆ ಇಲ್ಲಿಗೆ ಬಂದು ಕನ್ನಡ ಎಂತಹ ಸುಂದರವಾದ ಭಾಷೆ, ಅದರ ಲಿಪಿ ತುಂಬ ಸರಳ. ನಾನು ಐದಾರು ದಿನಗಳಲ್ಲಿಯೇ ಕನ್ನಡ ಲಿಪಿಗಳನ್ನೆಲ್ಲ ಕಲಿತೆ. ಎಲ್ಲರ ಮೈಕ್‌ನ ನೇಮ್‌ಟ್ಯಾಗ್ ನೋಡಿ ನೋಡಿ ಅಕ್ಷರಗಳನ್ನು ಕಲಿಯುತ್ತಿದ್ದೆ. ಬಿಗ್‌ಬಾಸ್‌ ಎಂಬ ಫಲಕದಲ್ಲಿ 'ಬ' ಮತ್ತು 'ಗ' ಎಲ್ಲ ಗೊತ್ತಾಗುತ್ತಿತ್ತು ಎಂದಿದ್ದಾರೆ" ಮೈಕಲ್.

"ಕನ್ನಡ ತುಂಬ ಸುಂದರವಾದ ಭಾಷೆ ಅಂತ ನನಗನಿಸಿತು. ಕಲಿಯುವುದೂ ಸುಲಭ. ಕರ್ನಾಟಕಕ್ಕೆ ಬೇರೆ ಕಡೆಯಿಂದ ಬರುವವರೆಲ್ಲ ಮಾತನಾಡಲು ಪ್ರಯತ್ನ ಮಾಡಿದ್ರೆ ತುಂಬ ಸುಲಭವಾಗಿ ಕನ್ನಡ ಕಲಿಯಬಹುದು" ಎಂದ ಮೈಕಲ್, "ನಾನು ಆರಂಭದಲ್ಲಿಯೇ ಗಟ್ಟಿಯಾಗಿರಬೇಕಿತ್ತು. ಸ್ಟಾರ್ಟಿಂಗ್‌ನಲ್ಲಿ ತುಂಬ ಸ್ಲೋ ಆಗಿದ್ದೆ. ಅದೇ ನನ್ನನ್ನು ಕೊಂಚ ಹಿಂದಕ್ಕೆ ತಳ್ಳಿತು ಅನಿಸುತ್ತದೆ. ಆರಂಭದಿಂದಲೇ ಇನ್ನಷ್ಟು ಸ್ಟ್ರಾಂಗ್ ಆಗಿ ನಿಂತುಕೊಂಡಿದ್ದರೆ, ಇನ್ನೂ ತುಸು ಮುಂದಕ್ಕೆ ಹೋಗಬಹುದಿತ್ತು ಅನಿಸುತ್ತದೆ" ಎಂದು ಹೇಳಿದರು.

"ಮನೆಯೊಳಗೆ ವಿನಯ್‌ ತುಂಬ ಜೆನ್ಯೂನ್‌ ವ್ಯಕ್ತಿ. ಮೊದಲ ದಿನದಿಂದಲೇ ಅವರೊಂದಿಗೆ ಶುರುವಾದ ಸ್ನೇಹ, ಹೊರಗೆ ಬರುವ ದಿನದವರೆಗೆ ಮುಂದುವರಿದಿತ್ತು. ನಮ್ಮ ಮಧ್ಯ ತುಂಬ ಜಗಳಗಳಾಗಿವೆ. ಆದರೆ ಅವೆಲ್ಲವೂ ಟಾಸ್ಕ್‌ಗಳಿಗಾಗಿ. ಅದರಾಚೆಗೆ ನಮ್ಮ ಮಾತು, ಸ್ನೇಹ ಎಲ್ಲ ಶುದ್ಧವಾಗಿವೆ. ಹಾಗಾಗಿ ವಿನಯ್ ತುಂಬ ಜೆನ್ಯೂನ್ ಅನಿಸುತ್ತಾರೆ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net