ಸ್ಯಾಂಡಲ್​​ವುಡ್​ ಸ್ಟಾರ್‌ ನಟನ ಸಿನೆಮಾ ಸಕ್ಸಸ್‌ ಪಾರ್ಟಿ; ಜೆಟ್ಲಾಗ್ ರೆಸ್ಟೋಬಾರ್ ಮಾಲೀಕರ ವಿರುದ್ಧ ಎಫ್ಐಆರ್

Pub party
Published on

ಬೆಂಗಳೂರು:  ಸ್ಯಾಂಡಲ್​ವುಡ್​​ನ ಸ್ಟಾರ್‌ ನಟರೊಬ್ಬರ ಸಿನಿಮಾ  ಸಕ್ಸಸ್​​ ಪಾರ್ಟಿಯನ್ನು ರಾಜಾಜಿನಗರದ ಜಟ್ಲಾಗ್ ರೆಸ್ಟೋಬಾರ್ ನಲ್ಲಿ ಭರ್ಜರಿಯಾಗಿ ನಡೆಸಲಾಗಿತ್ತು. ನಿಯಮ ಉಲ್ಲಂಘಿಸಿ ಬೆಳಗ್ಗಿನವರೆಗೂ ಸ್ಯಾಂಡಲ್‌ವುಡ್‌ನ ಹಲವು ನಟ ನಟಿಯರು ಪಾರ್ಟಿ ಮಾಡಿದ್ದು,  ಜೆಟ್ಲಾಗ್ ರೆಸ್ಟೋಬಾರ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಲೇಟ್‌ ನೈಟ್‌ ಪಾರ್ಟಿಯಲ್ಲಿದ್ದವರು ಯಾರ್ಯಾರು  ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗಿ ಪಾರ್ಟಿಯಲ್ಲಿದ್ದ ಸ್ಟಾರ್ ಗಳಿಗೆ ವಿಚಾರಣೆಯ ಟೆನ್ಶನ್ ಆರಂಭವಾಗಿದೆ. ಜೆಟ್ ಲ್ಯಾಗ್ ಪಬ್ ನಲ್ಲಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಯಲ್ಲಿದ್ದ ಸ್ಟಾರ್ ಗಳಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.

ಸುಬ್ರಮಣ್ಯನಗರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಈಗಾಗಲೇ  ಕ್ಲೋಸಿಂಗ್ ಟೈಮ್ ಮುಗಿದರೂ ಅಲ್ಲೇ ಪಾರ್ಟಿಗೆ ಅವಕಾಶ ನೀಡಿದ ಹಿನ್ನೆಲೆ ಜೆಟ್ಲಾಗ್  ರೆಸ್ಟೋಬಾರ್ ಮಾಲೀಕರಾದ ಶಶಿರೇಖಾ ಮತ್ತು ಮ್ಯಾನೇಜರ್‌ ಪ್ರಶಾಂತ್ ವಿರುದ್ದ  ಎಫ್ಐಆರ್ ದಾಖಲು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net