BBKS10: ನನ್ನ ಹುಡುಗಿ ಅಚ್ಚ ಕನ್ನಡದವಳಾಗಿರಬೇಕು ಹಾಗೂ….: ಬಾಳಸಂಗಾತಿ ಬಗ್ಗೆ ಕಾರ್ತಿಕ್​ ಹೇಳಿದ್ದಿಷ್ಟು

Untitled design - 2023-10-20T174526.053
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಶುರುವಾದ ಮೊದಲ ದಿನದಿಂದಲೂ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮನೆಯ ಸದಸ್ಯರ ನಡುವೆ ಮೂಡಿದ್ದ ಮನಸ್ತಾಪಗಳು ಸದ್ಯಕ್ಕೆ ಕಾಣೆಯಾಗಿದ್ದರೂ ಕೂಡ ಅಲ್ಲಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಅವಿತುಕೊಂಡಿದೆ.

ಈ ಮಧ್ಯೆ ಮನೆಗೆ ಎಂಟ್ರಿ ಕೊಟ್ಟಿರುವ ಸೀರಿಯಲ್​ ಸ್ಟಾರ್​ಗಳು ಕೇಳಿದ ಪ್ರಶ್ನೆಗೆ ಸ್ಪರ್ಧಿಗಳು ಸೂಪರ್​ ಆಗಿ ಉತ್ತರ ನೀಡಿದ್ದು, ಈ ಪೈಕಿ ಕಾರ್ತಿಕ್​ ತಮ್ಮ ಸ್ನೇಹಿತೆ ಸಂಗೀತಾ ಶೃಂಗೇರಿ ಪಕ್ಕದಲ್ಲಿ ಕುಳಿತು ಕೊಟ್ಟ ಉತ್ತರಕ್ಕೆ ಮನೆ ಮಂದಿ ಫಿದಾ ಆಗಿದ್ದಾರೆ.

ಇಂದು ಬಿಗ್​ ಬಾಸ್​ ಸೀಸನ್​ 10ರ ಮನಗೆ ಆಗಮಿಸಿದ ಸೀರಿಯಲ್​ ಕಲಾವಿದರ ದಂಡು ಮನೆಯ ಸ್ಪರ್ಧಿಗಳೊಡನೆ ಬೆರೆತು ಹಾಸ್ಯ, ಡ್ಯಾನ್ಸ್, ಡ್ರಾಮಾ ಮಾಡಿ ಸಂಭ್ರಮಿಸಿದ್ದಾರೆ. ಇದರೊಟ್ಟಿಗೆ ಮನೆಮಂದಿಗೆಲ್ಲಾ ಒಂದು ಪ್ರಶ್ನೆ ಕೇಳುವ ಮುಖೇನ ಅವರ ಅಂತರಾಳದ ಮಾತನ್ನು ಹೊರತೆಗೆದ ಅತಿಥಿಗಳು, ನೇರವಾಗಿ ಸಂಗೀತಾ ಅವರಿಗೆ ನಿಮ್ಮ ಬಾಳ ಸಂಗಾತಿ ಹೇಗಿರಬೇಕು ಎಂದು ಪ್ರಶ್ನಿಸಿದರು.

ಸಂಗೀತಾಗೆ ಕೇಳಿದ ಬೆನ್ನಲ್ಲೇ ಅವರ ಪಕ್ಕದಲ್ಲೇ ಸೋಫಾ ಒರಗಿ ಕುಳಿತ್ತಿದ್ದ ಕಾರ್ತಿಕ್​ಗೂ ಇದೇ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಕಾರ್ತಿಕ್​, ನನ್ನ ಹುಡುಗಿ ಲಕ್ಷಣವಾಗಿರಬೇಕು, ಅಚ್ಚ ಕನ್ನಡದವಳಾಗಿರಬೇಕು, ಇಂಡಿಪೆಂಡೆಂಟ್​ ಆಗಿರಬೇಕು ಆದ್ರೂ ಕೂಡ ಅವಳನ್ನು ನಾನೇ ನೋಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ತಿಕ್​ ಹೇಳಿಕೆಗೆ ಫಿದಾ ಆದ ಮನೆಯ ಸದಸ್ಯರು ಜೋಶ್​ನಿಂದ ಕಿರುಚಿದ್ದಾರೆ. ಮನೆಯಲ್ಲಿ ನಡೆದ ಕೆಲವು ಕುತೂಹಲಕಾರಿ ವಿಷಯಗಳ ಬಗ್ಗೆ ಇಂದಿನ ಸಂಚಿಕೆಯಲ್ಲಿ ಪೂರ್ತಿಯಾಗಿ ತಿಳಿಯಬಹುದು. ಇನ್ನೂ ದಿನದ 24 ಗಂಟೆಯ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net