More

    1ಸಾವಿರ ರೂ.ನೋಟು ಮತ್ತೆ ಬರುತ್ತಾ?:ಆರ್​ಬಿಐ ಗವರ್ನರ್ ಏನೇಳ್ತಾರೆ?

    ನವದೆಹಲಿ: ಕೇಂದ್ರ ಸರ್ಕಾರ ಕಳೆದ ವಾರ 2ಸಾವಿರ ರೂ. ನೋಟುಗಳನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಮತ್ತೆ 1ಸಾವಿರ ರೂ.ಕರೆನ್ಸಿ ಮರಳಿ ತರಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: “ಮೇಡ್​ ಇನ್​ ಇಂಡಿಯಾ” ಕುರಿತಾದ ಆನಂದ್ ಮಹೀಂದ್ರಾ ಟ್ವೀಟ್​ ವೈರಲ್​!

    2016 ರ ನವೆಂಬರ್​ ನಲ್ಲಿ ಹಳೆಯ 500ರೂ. ಜತೆಗೆ 1ಸಾವಿರ ರೂ.ನೋಟುಗಳನ್ನು ಅಮಾನ್ಯಗೊಳಿಸಲಾಯಿತು.ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ್ದರು. ಆಗ ಜನರು ದಿಗ್ಭ್ರಾಂತಿಗೆ ಒಳಗಾಗಿದ್ದು, ನೋಟುಗಳ ಬದಲಾವಣೆಗೆ ಸರ್ಕಾರ ಕಾಲಾವಕಾಶವನ್ನೂ ನೀಡಿತ್ತು. ಬಳಿಕ 5ನೂರು ರೂ. ಮತ್ತು 2ಸಾವಿರ ರೂ.ನ ಹೊಸ ನೋಟುಗಳು ಬಂದವು. ಇನ್ನೇನು ಎಲ್ಲ ಸರಿಹೋಯಿತು ಎನ್ನುತ್ತಿರುವಾಗ 2ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಅನಿರೀಕ್ಷಿತವಾಗಿ ಹಿಂತೆಗೆದುಕೊಳ್ಳಲಾಗಿದೆ.

    2ಸಾವಿರ ರೂ.ಬದಲಾವಣೆಗೆ ಮೊದಲು ಸೆ.30ರವರೆಗೆ ಬಳಿಕ ಅ.7ರವರೆಗೆ ಕಾಲಾವಕಾಶ ನೀಡಿತ್ತು. ಅ.7ರ ನಂತರ ಯಾರ ಬಳಿಯಾದರೂ ಈ ನೋಟುಗಳಿದ್ದರೆ ಆರ್​ಬಿಐ ಪ್ರಾದೇಶಿಕ ಕಾರ್ಯಾಲಯಗಳಲ್ಲಿ ಬದಲಿಸಿಕೊಳ್ಳಲು ಅನುಮತಿಸಿದೆ.

    ಪರಿಸ್ಥಿತಿ ಹೀಗಿರುವಾಗ ಪ್ರಸ್ತುತ ಅನೇಕರು ಮತ್ತೆ 1ಸಾವಿರ, 2ಸಾವಿರ ರೂಗಳನ್ನು ತರಬಹುದು ಎಂದು ಚರ್ಚಿಸುತ್ತಿದ್ದಾರೆ. ಆದರೆ 1ಸಾವಿರ ಮತ್ತು 2ಸಾವಿರ ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಹೀಗಾಗಿ ಜನರ ಊಹಾಪೋಹಕ್ಕೆ ಆರ್​ಬಿಐ ತೆರೆ ಎಳೆದಿದೆ.

    ಬೀದಿ ವ್ಯಾಪಾರಿಗಳಿಗೆ ಗೂಗಲ್ ಪೇ ಸಾಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts