More

    “ಮೇಡ್​ ಇನ್​ ಇಂಡಿಯಾ” ಕುರಿತಾದ ಆನಂದ್ ಮಹೀಂದ್ರಾ ಟ್ವೀಟ್​ ವೈರಲ್​!

    ನವದೆಹಲಿ: ಉತ್ಪಾದಕತೆಯಲ್ಲಿ ಭಾರತವನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಪ್ರಯತ್ನಗಳಿಗೆ ಪ್ರತಿಫಲ ಸಿಗುತ್ತಿದೆ. ಮೇಡ್​ ಇನ್​ ಇಂಡಿಯಾ ಯಶಸ್ಸು ಹೇಗಿದೆ ಎಂಬುದನ್ನು ಪ್ರಮುಖ ಉದ್ಯಮಿ, ಮಹೀಂದ್ರಾ ಅಂಡ್​ ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಅನಿಸಿಕೆ ಮತ್ತು ಅನುಭವವನ್ನು ಕಣ್ಣಿಗೆ ಕಟ್ಟಿದಂತೆ “x”(ಎಕ್ಸ್​)ನಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಬೀದಿ ವ್ಯಾಪಾರಿಗಳಿಗೆ ಗೂಗಲ್ ಪೇ ಸಾಲ!

    ಮೇಕ್​ ಇನ್​ ಇಂಡಿಯಾ ಭಾಗವಾಗಿ ಟೆಕ್​ ದಿಗ್ಗಜ ಗೂಗಲ್​ ಗೂಗಲ್​ ಫಾರ್​ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರಮುಖ ಪ್ರಕಕಟಣೆ ಮಾಡಿತ್ತು. ಅದೇನೆಂದರೆ ತನ್ನ ಪ್ರೀಮಿಯಂ ಫೋನ್​ ಪಿಕ್ಸೆಲ್​ ಸೀರಿಸ್​ ಅನ್ನು ಭಾರತದಲ್ಲಿ ತಯಾರಿಸುವುದಾಗಿ ಘೋಷಿಸಿತು. ಈ ನಿರ್ದಾರದ ಕುರಿತು ಆನಂದ್​ ಮಹೀಂದ್ರಾ ಟ್ವೀಟ್​ ಮಾಡಿದ್ದು, ನೆಟ್ಟಿಗರ ಪ್ರಶಂಸೆಗೆ ಕಾರಣವಾಗಿದೆ.

    ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಯೋಜನೆಯ ಅಷ್ಟೇ ಅಲ್ಲ, ಮೇಕ್​ ಇನ್ ಇಂಡಿಯಾ ಬಗ್ಗೆ ತಮಗೆ ಅಮೆರಿಕಾದಲ್ಲಿ ಆದ ಅನುಭವ ಹಂಚಿಕೊಂಡಿದ್ದಾರೆ. “ನಾನು ಇತ್ತೀಚೆಗೆ ಅಮೆರಿಕಾಗೆ ಹೋಗಿದ್ದೆ. ಆಗ ಸ್ಥಳೀಯ ಸಿಮ್ ಪಡೆಯಲು ವೆರಿಝೋನ್ ಅಂಗಡಿಗೆ ತೆರಳಿದೆ. ಅಲ್ಲಿ ಭಾರತದಲ್ಲಿ ತಯಾರಾದ ನನ್ನ ಐಫೋನ್ 15ಕ್ಕೆ ಸಿಮ್​ ಬೇಕೆಂದು ಕೇಳಿದೆ. ಅದಕ್ಕೆ ಅಂಗಡಿಯವನು ಹುಬ್ಬುಗಳನ್ನು ಏರಿಸಿ ನೋಡುತ್ತಾನೆ. ಆ ಕ್ಷಣ ನನಗೆ ಆನಂದವಾಗಿತ್ತು” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ಅಷ್ಟೇ ಅಲ್ಲ, “ನನ್ನ ಬಳಿ ಗೂಗಲ್ ಪಿಕ್ಸೆಲ್ ಮೊಬೈಲ್​ ಕೂಡ ಇದೆ.ಮೇಡ್​ ಇನ್​ ಇಂಡಿಯಾದ “ಪಿಕ್ಸೆಲ್​” ಬಿಡುಗಡೆಯಾದಾಗ ಅದನ್ನೂ ಕೊಂಡುಕೊಳ್ಳುತ್ತೇನೆ ಹಾಗಾಗಿ ನನ್ನ ಪಿಕ್ಸೆಲ್ ಅನ್ನು ಭಾರತದಲ್ಲಿಯೂ ತಯಾರಿಸಲಾಗುತ್ತದೆ ಎಂದು ನಾನು ಮುಂದೆ ಅವರಿಗೆ(ಅಮೆರಿಕಾ) ಹೇಳಬಲ್ಲೆ… ಆದರೆ ಆ ಸಮಯದಲ್ಲಿ ಯಾವುದೇ ಹುಬ್ಬುಗಳು ಮೇಲೇರುವುದಿಲ್ಲ. ಏಕೆಂದರೆ ಆ ಹೊತ್ತಿಗೆ, ಭಾರತವು ಉತ್ಪಾದನಾ ಶಕ್ತಿ ಕೇಂದ್ರವಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ,” ಎಂದು ಟ್ವೀಟ್​ ಮಾಡಿದ್ದಾರೆ. ಈ ಪೋಸ್ಟ್​ ಕೆಲವು ಗಂಟೆಗಳಲ್ಲಿ 5.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗೊಳಪಟ್ಟಿದೆ. ಶೇರ್ ಗಳ ಜತೆಗೆ ಸುಮಾರು 12,000 ಲೈಕ್‌ಗಳನ್ನು ಪಡೆದುಕೊಂಡಿದೆ.

    ಎಲೆಕ್ಟ್ರಿಕ್ ವಾಹನೋದ್ಯಮದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts