BBKS10: ಶಾಕಿಂಗ್ ಡಬಲ್​​ ಎಲಿಮಿನೇಷನ್;​ ಮನೆಯಿಂದ ಮೊದಲು ಇಶಾನಿ ಔಟ್​!

Untitled design (96)
Published on

ಬೆಂಗಳೂರು: ಸತತ ನಾಮಿನೇಷನ್​ನಿಂದ ಪಾರಾಗಿದ್ದ ಇಶಾನಿ ಆರನೇ ವಾರದಲ್ಲಿ ಉಳಿದುಕೊಳ್ಳುವಲ್ಲಿ ವಿಫಲವಾಗಿದ್ದು, ಶಾಕಿಂಗ್​ ಡಬಲ್​ ಎಲಿಮಿನೇಷನ್​ನಲ್ಲಿ ಇದೀಗ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿಯಾಗಿದ್ದಾರೆ.

ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಮನೆಯ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದಿದ್ದು, ಎಂದಿನಂತೆ ತಮ್ಮ ಖಡಕ್​ ಶೈಲಿಯಲ್ಲೇ ಸುದೀಪ್ ಅರ್ಥ ಮಾಡಿಸಿದ್ದಾರೆ. ಭಾಗ್ಯಶ್ರೀ ವಿರುದ್ಧ ಸ್ನೇಹಿತ್​ ನೀಡಿದ್ದ ಹೇಳಿಕೆಯನ್ನು ಎಲ್ಲರ ಮುಂದೆ ಹೇಳುವಂತೆ ಹೇಳಿ, ಬುದ್ದಿ ಮಾತುಗಳನ್ನು ತಿಳಿ ಹೇಳಿದರು. ನಗುಕ್ಕಿಂತ ಹೆಚ್ಚು ಬಿಸಿ ಬಿಸಿ ಚರ್ಚೆಯನ್ನು ಮುನ್ನೆಲೆಗೆ ತಂದ ಸುದೀಪ್​, ತಕ್ಷಣವೇ ನಾಮಿನೇಷನ್​ ಸಾಲಿಗೆ ಬಂದು ಎಲಿಮಿನೇಟ್ ಆದವರ ಹೆಸರನ್ನು ಘೋಷಣೆ​ ಮಾಡಿಯೇ ಬಿಟ್ಟರು.

ಅಂತಿಮವಾಗಿ ಬಿಗ್‌ಬಾಸ್‌ ಮನೆಯಲ್ಲಿ ಇಶಾನಿ ಜರ್ನಿ ಎಂಡ್ ಆಗಿದೆ. ಕಳೆದ ವಾರ ವರ್ತೂರ್ ಸಂತೋಷ್‌ ಅವರ ಕಾರಣದಿಂದ ಎಲಿಮಿನೇಷನ್ ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್ ಆದ ಕಾರಣ ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಸುದೀಪ್​ ಹೇಳಿದರು. ಶನಿವಾರದ ಸಂಚಿಕೆಯ ಕಡೆಯಲ್ಲಿ ಕಿಚ್ಚ, ‘ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು.

ಈ ವೇಳೆ ಮೆಲ್ಲನೇ ಎದ್ದು ನಿಂತುಕೊಂಡ ಇಶಾನಿಗೆ "ನಿಜ. ನಿಮ್ಮ ಪಯಣ ಬಿಗ್‌ಬಾಸ್‌ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ದಿ ಬೆಸ್ಟ್" ಎಂದು ಸುದೀಪ್ ಹೇಳಿದರು. ನಾಳೆಯ ಎಪಿಸೋಡ್‌ನಲ್ಲಿ ಇನ್ನೊಬ್ಬರು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜತೆ ಭಾನುವಾರದ ಸಂಚಿಕೆಯಲ್ಲಿ ಕಿಚ್ಚನ ಸಂವಾದ ಇರಲಿದೆ. ಇದೀಗ ಹೊರಬರುವ ಮತ್ತೊಬ್ಬ ಸ್ಪರ್ಧಿ ಯಾರು ಎಂಬುದನ್ನು ತಿಳಿಯಲು ವೀಕ್ಷಕರು ಕುತೂಹಲದಿಂದ ಕಾಯತೊಡಗಿದ್ದಾರೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net