BBKS10: ಸ್ನೇಹಿತರ ಮಧ್ಯೆ ಬಿರುಕು; ಮೂರು ದಿಕ್ಕಿನಲ್ಲಿ ಮೂವರ ಕಣ್ಣೀರು!

Untitled design (71)
Published on

ಬೆಂಗಳೂರು: ಕನ್ನಡ ಬಿಗ್​ ಬಾಸ್​ ಸೀಸನ್​ 10ರ ಸ್ಪರ್ಧಿಗಳು ಇದೀಗ ಆರನೇ ವಾರಕ್ಕೆ ಎಂಟ್ರಿ ಕೊಟ್ಟಿದ್ದು, ಟಾಸ್ಕ್​ಗಳಲ್ಲಿ ಭರ್ಜರಿ ಪೈಪೋಟಿ ಕೊಡುತ್ತಿದ್ದಾರೆ. ಈ ಹಿಂದೆ ಮನೆಯ ಸದಸ್ಯರ ನಡುವೆ ನಡೆಯುತ್ತಿದ್ದ ಜಟಾಪಟಿ, ಮನಸ್ತಾಪಗಳು ಕೊಂಚ ಕಡಿಮೆಯಾಗಿ, ಉತ್ತಮ ಬಾಂಧವ್ಯತೆ ಮೂಡುತ್ತಿದೆ ಎನ್ನುವಷ್ಟರಲ್ಲಿ ಆತ್ಮೀಯ ಸ್ನೇಹಿತರ ಮಧ್ಯೆ ಭಾರೀ ಭಿನ್ನಾಭಿಪ್ರಾಯ ಮೂಡಿ ಕಣ್ಣೀರಿಡುವಂತ ಪರಿಸ್ಥಿತಿ ಎದುರಾಗಿದೆ.

ಬಿಗ್​ ಬಾಸ್​ ಮನೆಗೆ ಬಂದ ಮೊದಲ ದಿನದಿಂದಲೂ ಕೂಡ ಕಾರ್ತಿಕ್​-ಸಂಗೀತಾ ಮತ್ತು ತನಿಷಾ ನಡುವಿನ ಒಡನಾಟ ಎಲ್ಲರ ಗಮನ ಸೆಳೆದಿತ್ತು. ಕೇವಲ ಸ್ನೇಹಿತರಾಗಿದ್ದ ಈ ಮೂವರು, ತದನಂತರ ಆತ್ಮೀಯ ಸ್ನೇಹಿತರಾಗಿ ಪರಸ್ಪರ ಸುಖ-ದುಃಖ ಹಂಚಿಕೊಳ್ಳುತ್ತಿದ್ದರು. ಟಾಸ್ಕ್​ ಆಗಲಿ ಅಥವಾ ಯಾವುದೇ ವಿಚಾರವಾಗಲಿ ಒಬ್ಬರನೊಬ್ಬರು ಬಿಟ್ಟುಕೊಡದೆ ಜತೆಗೆ ಇರುತ್ತಿದ್ದರು. ಆದ್ರೆ, ಇದೀಗ ಮೂವರ ಸ್ನೇಹದಲ್ಲಿ ಮೂಡಿರುವ ಬಿರುಕು ಕಣ್ಣನ್ನು ಒದ್ದೆ ಮಾಡಿಸಿದೆ.

ಲುಡೋ ಚುಟುವಟಿಕೆಯಲ್ಲಿ ಸೇವ್​ ಮಾಡಬಹುದು ಎಂಬ ಆಯ್ಕೆ ಕಾರ್ತಿಕ್​ ಹಾಗೂ ತನಿಷಾಗೆ ಸಿಕ್ಕಾಗ ಎದುರಿನ ತಂಡದಲ್ಲಿ ಸಂಗೀತಾ ಇದ್ದರು. ಒಮ್ಮತ ನಿರ್ಧಾರ ಕೈಗೊಂಡ ಕಾರ್ತಿಕ್​-ತನಿಷಾ ಸಂಗೀತಾ ಅವರ ಹೆಸರು ತೆಗೆದುಕೊಳ್ಳದೆ ಸಿರಿ ಅವರ ಹೆಸರನ್ನು ಪರಿಗಣಿಸುತ್ತಾರೆ. ಇದಕ್ಕೆ ತೀವ್ರ ಬೇಸರಗೊಂಡ ಸಂಗೀತಾ ತಮ್ಮಿಬ್ಬರ ಸ್ನೇಹಿತರ ಬಳಿ ಈ ವಿಷಯ ಕುರಿತು ಕೆಲ ಕಾಲ ವಾಗ್ವಾದ ನಡೆಸಿದರು.

ತನಿಷಾ ಮಾತಿಗೆ ಒಪ್ಪದ ಸಂಗೀತಾ, ಕಾರ್ತಿಕ್​ ಜತೆಗೂ ಮುನಿಸಿಕೊಂಡು ಹಾರ್ಟ್​ ಬ್ರೇಕ್​ ಆಯಿತು ಎಂದು ಹೇಳಿಕೊಂಡು ರೆಸ್ಟ್​ ರೂಮ್​ ಬಳಿ ಕಣ್ಣೀರಿಟ್ಟರು. ಇದೇ ವೇಳೆ ಮೇಕ್​ಅಪ್​ ರೂಂನಲ್ಲಿ ಕುಳಿತು ತನಿಷಾ ಅತ್ತರೇ, ಬೆಡ್​ ರೂಂನಲ್ಲಿ ಕಾರ್ತಿಕ್​ ಕಣ್ಣಂಚಲಿ ನೀರು ತುಂಬಿಕೊಂಡು ಸಿರಿ ಅವರಲ್ಲಿ ತಮ್ಮ ನೋವನ್ನು ತೋಡಿಕೊಂಡರು. ಸದ್ಯ 'ಬಿಗ್'​ ಮನೆಯಲ್ಲಿ ಬಿಗ್​ ಫ್ರೆಂಡ್ಸ್​ ಆಗಿದ್ದ ಈ ಮೂವರು ಇದೀಗ ದೂರ..ದೂರ ಎಂಬಂತೆ ಇರುವುದು ನೋಡುಗರಿಗೆ ಬೇಸರ ತಂದಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net