More

    ರೈತರ ಆತ್ಮಹತ್ಯೆಗೆ ಪಿಣರಾಯಿ ವಿಜಯನ್ ಸರ್ಕಾರವೇ ಹೊಣೆ: ಕೇಂದ್ರ ಸಚಿವೆ ಶೋಭಾ

    ಪತ್ತನಂತಿಟ್ಟ(ಕೇರಳ): ಕೇರಳದಲ್ಲಿ ನಡೆದ ರೈತರ ಆತ್ಮಹತ್ಯೆಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ನೇತೃತ್ವದ ರಾಜ್ಯ ಸರ್ಕಾರವೇ ಹೊಣೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕಾರಂದ್ಲಾಜೆ ಆರೋಪಿಸಿದರು.

    ಇದನ್ನೂ ಓದಿ: ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ; 48 ದಿನ ಮಂಡಲೋತ್ಸವ: ಪೇಜಾವರ ಶ್ರೀ
    ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಕೇರಳ ಸರ್ಕಾರವು ರೈತರಿಗೆ ಸಮರ್ಪಕವಾಗಿ ಬೆಂಬಲ ನೀಡುತ್ತಿಲ್ಲ.ಈ ನಿರ್ಲಕ್ಷ್ಯವು ಬಿಕ್ಕಟ್ಟಿಗೆ ಕಾರಣವಾಗುತ್ತಿದೆ. ಅನೇಕ ರೈತರು ತಮ್ಮ ಹಣವನ್ನು ಸಹಕಾರಿ ಸಂಘಗಳಲ್ಲಿ ಹೂಡಿಕೆ ಮಾಡಿದ್ದು, ಅವರ ನೆರವಿಗೆ ರಾಜ್ಯ ಸರ್ಕಾರ ತಕ್ಷಣ ಬರಬೇಕು ಎಂದರು.

    ರಾಜ್ಯದಲ್ಲಿ ರೈತರು ಮತ್ತು ಸಹಕಾರಿ ಸಂಘಗಳು ಬಿಕ್ಕಟ್ಟಿನಲ್ಲಿವೆ. ಕಣ್ಣೂರಿನ ಅಯ್ಯಂಕುಂನಲ್ಲಿ ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತರ ನೆರವಿಗೆ ಮುಖ್ಯಮಂತ್ರಿ ಮಧ್ಯಸ್ಥಿಕೆ ವಹಿಸಬೇಕು ಪೆರವೂರಿಗೆ ಬರಲಿರುವ ಮುಖ್ಯಮಂತ್ರಿಯವರಿಗೆ ಈ ಸಂಬಂಧ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

    ಮುದಿಕಾಯಂನ ಪಾಲತುಮಕಡವ್ ನಿವಾಸಿ ನಟುವತ್ ಸುಬ್ರಮಣಿಯನ್ ಬುಧವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ಯಾನ್ಸರ್ ರೋಗಿಯಾಗಿದ್ದ ಅವರಿಗೆ ಪಿಂಚಣಿ ಸ್ಥಗಿತಗೊಂಡಿದ್ದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಸುಬ್ರಮಣಿಯನ್ ಮತ್ತು ಅವರ ಕುಟುಂಬ ಸ್ವಂತ ಮನೆಯನ್ನು ಬಿಟ್ಟು ಬಾಡಿಗೆ ಮನೆಗೆ ಸ್ಥಳಾಂತರಗೊಂಡಿತ್ತು. ಅವರಿಗೆ ವೃದ್ಧಾಪ್ಯ ವೇತನ ಆದಾಯದ ಮೂಲವಾಗಿತ್ತು. ಆದರೆ ಪಿಂಚಣಿಯನ್ನು ಅಮಾನತುಗೊಳಿಸಿದ್ದು ಜೀವನ ನಡೆಸುವುದು ಕಷ್ಟವಾಗಿತ್ತು. ಲೈಫ್ ಯೋಜನೆಯಡಿ ಮನೆಗಾಗಿ ಅರ್ಜಿ ಸಲ್ಲಿಸಿದ್ದು, ಎರಡು ಎಕರೆ ಜಮೀನು ಇರುವುದರಿಂದ ತಿರಸ್ಕರಿಸಲಾಗಿತ್ತು ಎಂದು ಸಂಬಂಧಿಕರು ಹೇಳುತ್ತಾರೆ ಎಂದು ಅವರು ವಿವರಿಸಿದರು.

    ಕೇಂದ್ರದೊಂದಿಗೆ ಪಿಣರಾಯಿ ವಿಜಯನ್​ ಸರ್ಕಾರ ಅಸಹಕಾರ ತೋರುತ್ತಿದೆ. ರಾಜ್ಯದಲ್ಲಿ ರೈತರು ಮತ್ತು ಸಹಕಾರಿ ಸಂಸ್ಥೆಗಳು ಸಂಕಷ್ಟದಲ್ಲಿ ಸಿಲುಕಿದ್ದು, ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಮರಳುವ ಅಗತ್ಯವಿದೆ.

    ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಧಕ್ ಧಕ್ ಗರ್ಲ್; ಈ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಮಾಧುರಿ ದೀಕ್ಷಿತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts