More

    ವಿರಾಟ್​ ಕೊಹ್ಲಿಯನ್ನು ಸ್ವಾರ್ಥಿ ಎಂದವರು ಇಂದು ಪಾಕ್​ ಕ್ರಿಕೆಟ್​ ತಂಡದ ಮುಖ್ಯ ಕೋಚ್

    ನವದೆಹಲಿ: ಏಕದಿನ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನದಿಂದಾಗಿ ಕಠಿಣ ನಿರ್ಧಾರಗಳನ್ನು ಪ್ರಕಟಿಸಿದ್ದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಆಯ್ಕೆ ಸಮಿತಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಇದಾದ ಬಳಿಕ ನಾಯಕತ್ವ ಸ್ಥಾನದಿಂದ ಬಾಬರ್ ಅಜಂರನ್ನು ನಾಯಕತ್ವದಿಂದ ಕಳಗಿಳಿಸಿದ ಬೆನ್ನಲ್ಲೇ ಇದೀಗ ಹೊಸ ನಿರ್ಧಾರ ಒಂದನ್ನು ಪ್ರಕಟಿಸಿದೆ.

    ಪಾಕ್​ ಕ್ರಿಕೆಟ್​ನಲ್ಲಿ ಪ್ರೊಫೆಸರ್​ ಎಂದೇ ಖ್ಯಾತಿ ಪಡೆದಿರುವ ಮಾಜಿ ನಾಯಕ ಮೊಹಮ್ಮದ್ ಹಫೀಜ್ () ಅವರನ್ನು ಪಿಸಿಬಿ, ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ನ್ಯೂಜಿಲೆಂಡ್​ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಇವರು ತಂಡವನ್ನು ಕೋಚ್​ ಆಗಿ ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

    ಹಫೀಜ್‌ಗಿಂತ ಮೊದಲು, ಗ್ರಾಂಟ್ ಬ್ರಾಡ್‌ಬರ್ನ್ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದರೆ, ಅವರ ಅಧಿಕಾರಾವಧಿಯಲ್ಲಿ, ತಂಡವು ಏಷ್ಯಾಕಪ್ ಮತ್ತು ನಂತರ ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಇದರ ನಂತರ, ಪಿಸಿಬಿ ಅವರನ್ನು ಸಂಪೂರ್ಣ ಸಿಬ್ಬಂದಿಯೊಂದಿಗೆ ಎನ್‌ಸಿಎಗೆ ವರ್ಗಾಯಿಸಿದ್ದು, ಈಗ ಹಫೀಜ್ ಅವರನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಪಾಕಿಸ್ತಾನ ತಂಡದ ತರಬೇತುದಾರರನ್ನಾಗಿ ಆಯ್ಕೆ ಮಾಡಲಾಗಿದೆ.

    ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಹಫೀಜ್ ಮೇಲೆ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿದ್ದು, ಅವರಿಗೆ ಎರಡು ಪ್ರಮುಖ ಜವಾಬ್ದಾರಿ ನೀಡಿದ್ದಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸದ ಸಂದರ್ಭದಲ್ಲಿ ಅವರು ತಂಡದ ಕೋಚ್ ಆಗಿದ್ದಲ್ಲದೆ, ಹಫೀಜ್ ಅವರನ್ನು ತಂಡದ ನಿರ್ದೇಶಕರಾಗಿಯೂ ಪಿಸಿಬಿ ನೇಮಕ ಮಾಡಿದೆ. ಹಫೀಜ್​ಗೂ ಮೊದಲು ಈ ಜವಾಬ್ದಾರಿ ಮಿಕ್ಕಿ ಆರ್ಥರ್ ತಂಡದ ನಿರ್ದೇಶಕರಾಗಿದ್ದರು.

    ಪಾಕಿಸ್ತಾನ, ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಮತ್ತು ನ್ಯೂಜಿಲೆಂಡ್‌ನಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಾಗಿದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ತಂಡ ಈ ಪ್ರವಾಸ ಮಾಡಲಿದೆ.  ಶಾನ್ ಮಸೂದ್ ಅವರನ್ನು ಟೆಸ್ಟ್ ತಂಡದ ನಾಯಕರನ್ನಾಗಿ ಪಿಸಿಬಿ ಮಾಡಿದ್ದು, ಟಿ20 ತಂಡದ ನಾಯಕತ್ವವನ್ನು ಶಾಹೀನ್ ಶಾ ಆಫ್ರಿದಿಗೆ ವಹಿಸಲಾಗಿದೆ. ಆದರೆ ಏಕದಿನ ತಂಡದ ನಾಯಕನನ್ನು ಪಿಸಿಬಿ ಇನ್ನು ಪ್ರಕಟಿಸಿಲ್ಲ

    ವಾಸ್ತವವಾಗಿ ಪಾಕ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಹಫೀಜ್, ಕೆಲವೇ ದಿನಗಳ ಹಿಂದೆ ವಿರಾಟ್ ಕೊಹ್ಲಿಯನ್ನು ಸ್ವಾರ್ಥಿ ಎಂದು ಕರೆದು ತೀವ್ರ ಟೀಕೆಗೆ ಗುರಿಯಾಗಿದ್ದರು. ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳನ್ನು ಸರಿಗಟ್ಟಿದಾಗ, ಹಫೀಜ್ ಕೊಹ್ಲಿಯನ್ನು ಸ್ವಾರ್ಥಿ ಎಂದು ಕರೆದಿದ್ದರು. ಕೊಹ್ಲಿ ಅವರು ತಮ್ಮ ಶತಕವನ್ನು ಪೂರ್ಣಗೊಳಿಸುವ ಸಲುವಾಗಿ ನಿಧಾನವಾಗಿ ಬ್ಯಾಟಿಂಗ್ ಮಾಡಿದರು ಎಂದು ಆರೋಫಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts