BBK11: ಗ್ರ್ಯಾಂಡ್​ ಫಿನಾಲೆಯಲ್ಲಿ ಈ ಇಬ್ಬರು ಕಿಚ್ಚನ ಅಕ್ಕ-ಪಕ್ಕ! ಇದೇನಾ ಪಕ್ಕಾ?

ವಿಜಯವಾಣಿ - 2025-01-20T171220.019
Published on

BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್​ ಕನ್ನಡ ಸೀಸನ್​ 11ರ ಸ್ಪರ್ಧಿಗಳು ಇದೀಗ ಯಶಸ್ವಿ 15 ವಾರಗಳನ್ನು ಪೂರೈಸಿ, 16ನೇ ವಾರ ಹಾಗೂ ಕೊನೆಯ ವಾರಕ್ಕೆ ಕಾಲಿಟ್ಟಿದ್ದಾರೆ. ಆರಂಭಿಕದ ಮೊದಲೆರೆಡು ವಾರಗಳಲ್ಲೇ ದೊಡ್ಡ ವಿವಾದಕ್ಕೆ ಮತ್ತು ಜಟಾಪಟಿಗೆ ಕಾರಣವಾಗಿದ್ದ ಬಿಗ್ ಬಾಸ್​ ಸೀನಸ್​ 11 ಇದೀಗ ಕೊನೆಯ ಹಂತವನ್ನು ತಲುಪಿದ್ದು, ಗ್ರ್ಯಾಂಡ್​ ಫಿನಾಲೆಗೆ ಸನ್ನಿಹಿತವಾಗಿದೆ. ಸ್ನೇಹ, ಪ್ರೀತಿ-ಸಂಬಂಧ, ದೋಸ್ತಾ, ಜಗಳ, ಮನಸ್ತಾಪಗಳ ನಡುವೆ 20 ಘಟಾನುಘಟಿ ಸ್ಪರ್ಧಿಗಳ ಪೈಕಿ ಸದ್ಯ ಮನೆಯೊಳಗೆ ಉಳಿದುಕೊಂಡಿರುವುದು ಕೇವಲ 6 ಸದಸ್ಯರು ಮಾತ್ರ. ಇವರಲ್ಲಿ ಫಿನಾಲೆ ಕಪ್​ ಗೆಲ್ಲುವುದು ಒಬ್ಬರೇ ಆಗಿದ್ದು, ಅದು ಯಾರ ಮುಡಿಗೆ ಎಂಬುದೇ ಈಗ ಕೌತುಕ.

ಇವರಿಗೆ ಬಿಗ್ ಬಾಸ್​ ಟ್ರೋಫಿ ಫಿಕ್ಸ್

Bigg Boss Kannada 11

ಕಳೆದ ಶನಿವಾರ ಮತ್ತು ಭಾನುವಾರ ಸಂಚಿಕೆಯಲ್ಲಿ ಎಲಿಮಿನೇಟ್​ ಆದ ಗೌತಮಿ ಜಾದವ್​ ಮತ್ತು ಧನರಾಜ್​ ಅವರ ಫಿನಾಲೆ ಕನಸು ಭಗ್ನಗೊಂಡಿತು. ಇನ್ನು ಬಿಗ್ ಬಾಸ್​ ಸೀಸನ್​ 11ರ ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿಕೊಟ್ಟಿರುವ ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯ ಗೌಡ, ಉಗ್ರಂ ಮಂಜು, ಹನುಮಂತು ಮತ್ತು ರಜತ್​ ಇದೀಗ ಬಿಗ್ ಬಾಸ್​ ಟ್ರೋಫಿಯನ್ನು ಗೆದ್ದು ಬೀಗುವ ಕನಸು ಕಾಣುತ್ತಿದ್ದಾರೆ. ಇದೆಲ್ಲದರ ನಡುವೆ ಸದ್ಯ ಸೀಸನ್​ 11ರ ಪಟ್ಟ ಯಾರಿಗೆ ಎಂಬ ಲೆಕ್ಕಾಚಾರಗಳು ಸದ್ಯ ಬಿರುಸಿನಿಂದ ಸಾಗುತ್ತಿದ್ದು, ಪ್ರಥಮ ಬಾರಿಗೆ ವೀಕ್ಷಕರು ಭಾರೀ ಗೊಂದಲಕ್ಕೆ ಸಿಲುಕಿರುವುದು ಕಂಡುಬಂದಿದೆ. ಕಾರಣ, ಪ್ರತಿ ಬಿಗ್ ಬಾಸ್​ ಸೀಸನ್​ ಅಂತಿಮ ಹಂತ ತಲುಪುವಷ್ಟರಲ್ಲಿ ವೀಕ್ಷಕರು ಇವರು ಖಂಡಿತ ಗೆಲ್ಲುತ್ತಾರೆ. ಇವರಿಗೆ ಬಿಗ್ ಬಾಸ್​ ಟ್ರೋಫಿ ಫಿಕ್ಸ್​ ಎಂದು ತಮ್ಮಲ್ಲೇ ನಿರ್ಧರಿಸುತ್ತಾರೆ. ಆದ್ರೆ, ಇದೇ ಮೊದಲ ಬಾರಿಗೆ ಯಾರು ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ ಎಂಬುದನ್ನು ಊಹಿಸುವುದು ಕಷ್ಟಕರವಾಗಿದೆ.

ನೆಟ್ಟಿಗರ ಅಭಿಪ್ರಾಯ

ಇಬ್ಬರಲ್ಲಿ ಒಬ್ಬರು ವಿನ್ನರ್ ಆಗಬಹುದು ಎಂದು ಹೇಳಬಹುದು. ಆದ್ರೆ, ಫಿನಾಲೆ ಪ್ರವೇಶಿಸುವವರ ಪೈಕಿ ಎಲ್ಲರೂ ಅದ್ಬುತ ಪ್ರದರ್ಶನ ನೀಡಿದ್ದು, ಸೀಸನ್​ ವಿಜೇತರಾಗಲು ಇವರು ಅರ್ಹರಲ್ಲ ಎಂದು ಹೇಳಲು ವೀಕ್ಷಕರಿಗೆ ಅಸಾಧ್ಯವಾಗಿದೆ ಎಂಬದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಂದಾಗಿರುವ ನೆಟ್ಟಿಗರು, ಮನೆಯೊಳಗಿರುವ ಸ್ಪರ್ಧಿಗಳ ಪೈಕಿ ಹೆಚ್ಚಾಗಿ ತ್ರಿವಿಕ್ರಮ್​, ರಜತ್​, ಮಂಜು, ಹನುಮಂತು ಹೆಸರನ್ನು ಪರಿಗಣಿಸಿದ್ದಾರೆ.

ಎಡ-ಬಲ

ಘಟಾನುಘಟಿ ಸ್ಪರ್ಧಿಗಳ ನಡುವೆ ಫಿನಾಲೆ ವೇದಿಕೆ ತಲುಪಿ, ಸುದೀಪ್ ಅವರ ಎಡಗೈ ಹಾಗೂ ಬಲಗೈನಲ್ಲಿ ತ್ರಿವಿಕ್ರಮ್​ ಮತ್ತು ಹನುಮಂತು ಇರಲಿದ್ದಾರೆ ಎಂಬ ಅಭಿಪ್ರಾಯಗಳು ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಒಂದೆಡೆ ತ್ರಿವಿಕ್ರಮ್​ ಗೆಲ್ಲಬೇಕು ಎಂದು ಒಂದಷ್ಟು ಜನ ಹೇಳಿದ್ರೆ, ಮತ್ತೊಂದೆಡೆ ಹಳ್ಳಿಹೈದ ಹನುಮಂತು ವಿಜೇತರಾಗಿ ಹೊರಹೊಮ್ಮಬೇಕು ಎಂದು ಮತ್ತೊಂದಷ್ಟು ಜನ ಹೇಳಿದ್ದಾರೆ. ಒಟ್ಟಾರೆ ವೀಕ್ಷಕರ ಪ್ರಕಾರ ಈ ಇಬ್ಬರೇ ಫಿನಾಲೆ ವೇದಿಕೆಯಲ್ಲಿ ಸುದೀಪ್ ಅವರ ಅಕ್ಕ-ಪಕ್ಕ ಬರುತ್ತಾರಾ? ಅಥವಾ ಲೆಕ್ಕಾಚಾರಗಳು ಬದಲಾಗಲಿದೆಯಾ ಎಂಬುದನ್ನು ಗ್ರ್ಯಾಂಡ್​ ಫಿನಾಲೆ ದಿನದಂದೇ ಅಧಿಕೃತವಾಗಿ ಕಾದು ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net