BBK11: ಜಾತ್ರೆಯಲ್ಲಿ ಬಲಿ ಕೊಟ್ರಂತೆ...! ಹರಕೆಯ ಕುರಿ ಧನರಾಜ್​ ಎಂದ ಮನೆ ಮಂದಿ, ಗೌತಮಿ-ಮಂಜು ವಿರುದ್ಧ ಕಿಡಿ

ವಿಜಯವಾಣಿ (67)
Published on

BBK11: ನೂರು ದಿನಗಳನ್ನು ಪೂರೈಸಿ ಇನ್ನು ಉಳಿದಿರುವ ಮೂರು ವಾರಗಳನ್ನು ದಾಟಲು ಸದ್ಯ ಭಾರೀ ಸೆಣಸಾಟದಲ್ಲಿ ತೊಡಗಿರುವ ಬಿಗ್ ಬಾಸ್​ ಸೀಸನ್ 11ರ ಸ್ಪರ್ಧಿಗಳಲ್ಲಿ ಆಟದ ಬಿಸಿ ಹೆಚ್ಚಾಗಿದೆ. ಈ ವಾರದ ಕೊನೆಯಲ್ಲಿ ಒಬ್ಬರಿಗೆ ಸೇರುವ ಫಿನಾಲೆ ಟಿಕೆಟ್​ಗೆ ಬಿರುಸಿನ ಪೈಪೋಟಿ ಶುರುವಾಗಿದ್ದು, ಮನಸ್ಸಿನಲ್ಲಿದ್ದ ಅಭಿಪ್ರಾಯಗಳ ಕಟ್ಟೆ ಒಡೆದು ಒಂದೊಂದಾಗಿ ಹೊರಬರುತ್ತಿರುವುದು ಈಗ ವೀಕ್ಷಕರ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತಿದೆ.

ಈಗಾಗಲೇ ಫಿನಾಲೆ ವಾರದ ಟಾಸ್ಕ್​ಗಳಿಂದ ಚೈತ್ರಾ ಕುಂದಾಪುರ ಹೊರಬಿದ್ದರೆ, ಗೌತಮಿ ಜಾದವ್, ಮಂಜು ಮತ್ತು ಧನರಾಜ್​ ಟಿಕೆಟ್ ರೇಸ್​ನಲ್ಲಿದ್ದಾರೆ. ಈ ಮೂವರ ಮಧ್ಯೆ ನಿಮ್ಮಲ್ಲಿ ಒಬ್ಬರನ್ನು ಫಿನಾಲೆ ಟಿಕೆಟ್​ ರೇಸ್​ನಿಂದ ಹೊರಗಿಡಲು ಯಾರನ್ನು ಒಮ್ಮತದಿಂದ ಆಯ್ಕೆ ಮಾಡುತ್ತೀರಿ ಎಂದು ಬಿಗ್ ಬಾಸ್ ಕೇಳಿದ್ದಕ್ಕೆ, ಗೌತಮಿ ಮತ್ತು ಮಂಜು ಧನರಾಜ್​ ಹೆಸರು ಸೂಚಿಸುವ ಮೂಲಕ ಅವರನ್ನು ಟಿಕೆಟ್​ ಟು ಫಿನಾಲ್​ ಓಟದಿಂದ ಹೊರಗಿಟ್ಟಿದ್ದಾರೆ. ಈ ವಿಷಯವನ್ನು ಬಿಗ್ ಬಾಸ್​ ಹೇಳುತ್ತಿದ್ದಂತೆ ಮನೆ ಮಂದಿ ಧನರಾಜ್​ ಅವರೇ ಇದಕ್ಕೆ ಮೊದಲ ಆಯ್ಕೆ, ಹರಕೆಯ ಕುರಿಯಾದರು ಧನು ಎಂದು ನೇರವಾಗಿ ಅಣುಕಿಸಿದ್ದಾರೆ.

ತ್ರಿವಿಕ್ರಮ್​, ರಜತ್​, ಭವ್ಯ, ಮೋಕ್ಷಿತಾ ಮತ್ತು ಹನುಮಂತು ಇಲ್ಲಿ ಧನರಾಜ್​ ಹರಕೆಯ ಕುರಿಯಾದರು. ಅವರನ್ನೇ ಅವರಿಬ್ಬರು ಹೊರಗಿಡುವುದು. ಮಾರಮ್ಮನ ಜಾತ್ರೆಯಲ್ಲಿ ಕುರಿಯನ್ನು ಬಲಿಕೊಟ್ಟಂತೆ ಧನರಾಜ್​ರನ್ನು ಇಲ್ಲಿ ಹರಕೆಯ ಕುರಿ ಮಾಡಿದ್ದಾರೆ ಎಂದು ಮನೆ ಮಂದಿ ಮಂಜು ಮತ್ತು ಗೌತಮಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಇದೇ ವಿಷಯಕ್ಕೆ ರಜತ್ ಮತ್ತು ಮಂಜು ನಡುವೆ ಒಂದಷ್ಟು ಮಾತಿನ ಚಕಮಕಿ ಕೂಡ ನಡೆದಿವೆ. ಅಸಲಿಗೆ ಅಲ್ಲಿ ನಡೆದಿದ್ದೇನು? ಎಂಬುದನ್ನು ತಿಳಿಯಲು ಇಂದಿನ ಸಂಚಿಕೆ ವೀಕ್ಷಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net