

ಆಲ್ದೂರು: ಕಣಚೂರು ಆಸ್ಪತ್ರೆಯಲ್ಲಿ ನಡೆಸುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ರೋಗಿಗಳ ಪಾಲಿಗೆ ವರದಾನ ಎಂದು ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್‌ನ ಮಂಗಳೂರು ಅಧ್ಯಕ್ಷ ಡಾ. ಹಾಜಿ ಯು.ಕೆ.ಮೋನು ಹೇಳಿದರು.
ಪಟ್ಟಣದ ದಿ.ಚನ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ಭಾನುವಾರ ತಾಲೂಕು ಬ್ಯಾರಿ ಒಕ್ಕೂಟ, ಚಿಕ್ಕಮಗಳೂರು ಇಂಪಲ್ ಚಾರಿಟೇಬಲ್ ಟ್ರಸ್ಟ್, ನ್ಯಾಷನಲ್ ವೆಲ್ಫೇರ್ ಮತ್ತು ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ವೈದ್ಯಕೀಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಸ್ಥಳದಲ್ಲೇ ರೋಗಿಗಳಿಗೆ ಔಷಧ ನೀಡಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕಣಚೂರು ಆಸ್ಪತ್ರೆ 11 ವರ್ಷದಿಂದ ಇಂತಹ ಶಿಬಿರವನ್ನು ಉಚಿತವಾಗಿ ನಡೆಸುತ್ತಿದೆೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತವಾಗಿ ಹೆರಿಗೆ ಮಾಡಿಸಲಾಗುತ್ತದೆ ಎಂದರು. ಎಲ್ಲರಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯಬೇಕೆಂಬ ಉದ್ದೇಶದಿಂದ ಆಸ್ಪತ್ರೆ ತೆರೆಯಲಾಗಿದೆ ಎಂದು ಹೇಳಿದರು.
ಆಲ್ದೂರು ಗ್ರಾಪಂ ಅಧ್ಯಕ್ಷೆ ಜಯಶೀಲಾ ಚಿದಂಬರ ಮಾತನಾಡಿ, ವಿವಿಧ ಸಂಘಟನೆಗಳು ಒಟ್ಟಾಗಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. 480 ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು.
ಜಿಪಂ ಮಾಜಿ ಸದಸ್ಯ ಹೂವಪ್ಪ, ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಎ.ಯು.ಇಬ್ರಾಹಿಂ, ಹಂಝತ್‌ಉಲ್ ಖರಾರ್ ಮಸೀದಿ ಅಧ್ಯಕ್ಷ ಬದ್ರುದೀನ್, ಒಕ್ಕಲಿಗರ ಸಂಘದ ಅಧ್ಯಕ್ಷ ಅಶೋಕ್, ಬಿ ಹ್ಯೂಮನ್ ಸಂಸ್ಥೆ ಅಧ್ಯಕ್ಷ ಾರುಕ್, ರಾಷ್ಟ್ರೀಯ ವೆಲ್ಫೇರ್ ಮತ್ತು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ರಿಯಾಜ್ ಖಾನ್, ಡಿಎಸ್‌ಎಸ್ ಹೊನ್ನಪ್ಪ ಯಲಗುಡಿಗೆ, ಬಿಲ್ಲವ ಸಮಾಜದ ಅಧ್ಯಕ್ಷ ಕೆ.ಎಲ್.ಕುಮಾರ್, ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ಬಿಜೆಪಿ ಮಂಡಲದ ಅಧ್ಯಕ್ಷ ರವಿ ಬಸರವಳ್ಳಿ, ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಸುರೇಶ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾರಾಯಣ್ ಆಚಾರ್ಯ, ಸವಿತಾ ಸಮಾಜದ ಅಧ್ಯಕ್ಷ ಚಂದ್ರಶೇಖರ್, ಕಾಫಿ ಮಹಿಳಾ ಪತ್ತಿನ ಸಂಘದ ನಿರ್ದೇಶಕಿ ಚಂಪಾ ಜಗದೀಶ್, ರವಿಚಂದ್ರ, ಭಾನುಪ್ರಕಾಶ್ ಇತರರಿದ್ದರು.