ಬ್ಯಾಂಕಿಗೆ ವಂಚನೆ, ಮೂವರಿಗೆ ಜೈಲು

ನ್ಯಾಯಾಲಯ
ನ್ಯಾಯಾಲಯ
Published on

ಬೆಂಗಳೂರು: ನಕಲಿ ದಾಖಲೆ ಆಧಾರದ ಮೇಲೆ ಸಾಲ ಮಂಜೂರು ಮಾಡಿ ವಂಚಿಸಿದ್ದ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳು ಸೇರಿ ಮೂವರಿಗೆ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಮಂಡ್ಯದ ಅಂದಿನ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಎಚ್.ಎಂ.ಸ್ವಾಮಿಗೆ ಮೂರು ವರ್ಷ ಜೈಲು, 1.5 ಲಕ್ಷ ರೂ. ದಂಡ, ಕೊಳ್ಳೆಗಾಲ ಶಾಖೆಯ ವ್ಯವಸ್ಥಾಪಕ ವಿಟಲ್ ದಾಸ್‌ಗೆ ಒಂದು ವರ್ಷ, 50 ಸಾವಿರ ರೂ. ಮತ್ತು ಖಾಸಗಿ ವ್ಯಕ್ತಿ ಅಸಾದುಲ್ಲ ಖಾನ್‌ಗೆ ಮೂರು ವರ್ಷ ಮತ್ತು 50 ಲಕ್ಷ ರೂ. ದಂಡ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ.

2009ರ ಏ.15ರಂದು ಸಿಂಡಿಕೇಟ್ ಬ್ಯಾಂಕ್ ವಿಚಕ್ಷಣ ದಳ, ಅಪರಾಧಿಗಳ ವಿರುದ್ಧ ಸಿಬಿಐಗೆ ದೂರು ಸಲ್ಲಿಸಿದ್ದರು. ಸಿಂಡ್ ಜೈ ಕಿಸಾನ್ ಸಾಲ ಮತ್ತು ಇತರ ಕ್ರೆಡಿಟ್ ಸೌಲಭ್ಯಗಳ ಸೋಗಿನಲ್ಲಿ ನಕಲಿ ದಾಖಲೆ ಆಧಾರದ ಮೇಲೆ ಸಾಲ ಮಂಜೂರು ಮಾಡಿ ವಂಚನೆ ಮಾಡಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಕೋರ್ಟ್‌ಗೆ 2010ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net