

ನವದೆಹಲಿ: ಬ್ಯಾಂಕ್ ಉದ್ಯೋಗಿಗಳ ಬಹುದಿನಗಳ ಬೇಡಿಕೆ ಆಗಿರುವ ವಾರಕ್ಕೆ ಐದೇ ದಿನಗಳ ಕೆಲಸದ ಮನವಿಯನ್ನು ಕೇಂದ್ರ ಸರ್ಕಾರ ಈ ವರ್ಷ ಒಪ್ಪಿ ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬೇಡಿಕೆ ಕುರಿತ ಮನವಿ ಹಣಕಾಸು ಸಚಿವಾಲಯದ ಮುಂದಿದ್ದು, ಜೂನ್ ತಿಂಗಳಲ್ಲಿ ವೇತನ ಹೆಚ್ಚಳ ಸಾಧ್ಯತೆ ಕೂಡ ಇರುವುದು ತಿಳಿದು ಬಂದಿದೆ. ಬ್ಯಾಂಕ್ ಉದ್ಯೋಗಿಗಳ ಸಂಟನೆಗಳ ಒಕ್ಕೂಟವಾಗಿರುವ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ವಾರಕ್ಕೆ ಐದೇ ದಿನಗಳ ಕೆಲಸದ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದೆ.
ಈ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಭಾರತೀಯ ಬ್ಯಾಂಕುಗಳ ಸಂಕ್ಕೆ ಸೂಕ್ತ ನಿರ್ದೇಶನ ನೀಡುವಂತೆಯೂ ಸಚಿವರಿಗೆ ಕೋರಿಕೆ ಸಲ್ಲಿಸಲಾಗಿದೆ.