

ಬೆಂಗಳೂರು: ಕಳೆದ ಬಿಜೆಪಿ ಸರ್ಕಾರ ತಮ್ಮ ಅಸಂವಿಧಾನಿಕ ನಡೆಗಳ ಮೂಲಕ ಮೀಸಲಾತಿಯನ್ನು ದುರ್ಬಲಗೊಳಿಸಲು ಯತ್ನಿಸಿದ ಸಮಯದಲ್ಲಿ ಅವರ ಆ ನೀತಿಗಳನ್ನು ವಿರೋಧಿಸಿ ರಾಜ್ಯವ್ಯಾಪಿ ಬಂಜಾರ ಸಂಘಟನೆಗಳು ಪ್ರತಿಭಟಿಸಿದ ಸಮಯದಲ್ಲಿ ಕಾರ್ಯಕರ್ತರ ಮೇಲೆ ರಾಜ್ಯವ್ಯಾಪಿ ವಿನಾಕಾರಣ ದಾಖಲಾದ ಪ್ರಕರಣಗಳನ್ನು ರಾಜ್ಯಸರ್ಕಾರ ಹಿಂಪಡೆಯಬೇಕು ಎಂದು ಬಂಜಾರ ಸಮುದಾಯದ ಮುಖಂಡರು ಸಿಎಂ ಸಿದ್ದರಾಮಯ್ಯರನ್ನು ಒತ್ತಾಯಿಸಿದ್ದಾರೆ.
ಗೃಹ ಕಛೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಬಂಜಾರ ಸಮುದಾಯದ ಮುಖಂಡರನ್ನೊಳಗೊಂಡ ನಿಯೋಗ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ನಿಯೋಗದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಂಜಾರ ಸಮುದಾಯದ ಮುಖಂಡರಿಗೆ ಭರವಸೆ ನೀಡಿದ್ದಾರೆ.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ವಕೀಲರಾದ ಅನಂತ ನಾಯ್ಕ್, ಸುಭಾಷ್ ರಾಥೋಡ್, ಡಾ.ರಾಜಾ ನಾಯ್ಕ್, ವಿಜಯ್ ಜಾಧವ್, ರಮೇಶ್ ಚವಾಣ್, ಗೋವಿಂದಸ್ವಾಮಿ, ಅನಿಲ್ ಕುಮಾರ್, ದಿಲೀಪ್ ರಾಥೋಡ್, ಪರಶುರಾಮ ರಾಥೋಡ್ ಸೇರಿದಂತೆ ಹಲವರು ಈ ಸಮಯದಲ್ಲಿ ಉಪಸ್ಥಿತಿರಿದ್ದರು.