ಆತ್ಮಸ್ಥೈರ್ಯ ತುಂಬುವ ಕೆಲಸ ಆಗಲಿ

12 nrp 1 protest
ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದು ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಕೆ.ಪಿ.ಸುರೇಶ್‌ಕುಮಾರ್, ಬಿ.ಎಸ್.ಆಶೀಶ್‌ಕುಮಾರ್, ಜೆ.ಜಿ.ನಾಗರಾಜ್, ಎಂ.ವಿ.ರಾಜೇಂದ್ರಕುಮಾರ್, ಜಯರಾಂ, ಕೆಸವಿ ಮಂಜುನಾಥ್, ಎನ್.ಡಿ.ಪ್ರಸಾದ್, ಅರುಣಕುಮಾರ್‌ಜೈನ್, ದರ್ಶನ್ ಇದ್ದರು.
Published on

ಎನ್.ಆರ್.ಪುರ: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ಅಲ್ಲಿನ ಹಿಂದುಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ ಎಂದು ವಿಶ್ವ ಹಿಂದು ಪರಿಷತ್‌ನ ಶೃಂಗೇರಿ ಕ್ಷೇತ್ರದ ಮುಖಂಡ ಕೆ.ಪಿ.ಸುರೇಶ್ ಕುಮಾರ್ ತಿಳಿಸಿದರು.
ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಿಂದು ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಮಾನವ ಸರಪಳಿ ನಿರ್ಮಿಸಿ ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿರ್ಲಕ್ಷ ಮಾಡಿದರೆ ಮುಂದೆ ಭಾರತದ ಹಿಂದುಗಳ ಮೇಲೂ ದೌರ್ಜನ್ಯ ನಡೆಯುವ ಸಾಧ್ಯತೆ ಇದೆ. ಹಿಂದುಗಳ ದೌರ್ಜನ್ಯದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದರು.
ಬಹಳ ವರ್ಷಗಳ ಹಿಂದೆ ಬಾಂಗ್ಲಾ ಪಾಕಿಸ್ತಾನದ ಒಂದು ಭಾಗವಾಗಿತ್ತು. ನಂತರ ಬಾಂಗ್ಲಾ ದೇಶ ಸ್ವತಂತ್ರ ದೇಶವಾಯಿತು. ಅವರು ಸ್ವತಂತ್ರವಾಗಲು ಭಾರತೀಯ ಸೈನಿಕರ ಶ್ರಮವೇ ಕಾರಣ. ಅದನ್ನು ಮರೆತ ಬಾಂಗ್ಲಾದವರು ಹಿಂದುಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದು ವಿಷಾದಕರ ಎಂದರು.
ಹಿಂದು ಹಿತರಕ್ಷಣಾ ಸಮಿತಿ ಮುಖಂಡರಾದ ಬಿ.ಎಸ್.ಆಶೀಶ್‌ಕುಮಾರ್, ಜೆ.ಜಿ.ನಾಗರಾಜ್, ಎಂ.ವಿ.ರಾಜೇಂದ್ರಕುಮಾರ್, ಜಯರಾಂ, ಕೆಸವಿ ಮಂಜುನಾಥ್, ಎನ್.ಡಿ.ಪ್ರಸಾದ್, ಅರುಣಕುಮಾರ್ ಜೈನ್, ದರ್ಶನ್, ಹಂಚಿನಮನೆ ರಾಘವೇಂದ್ರ, ಮಂಜುನಾಥ್ ಲಾಡ್, ದ್ವಾರಮಕ್ಕಿ ಶ್ರೀನಾಥ್, ಸುರಭಿರಾಜೇಂದ್ರ, ಮಧು ಮತ್ತಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net