

ಬಾಂಗ್ಲಾದೇಶ: ಟಾಪ್ ಕ್ಲಾಸ್ ಚೆಸ್ ಗ್ರ್ಯಾಂಡ್‌ಮಾಸ್ಟರ್ ಜಿಯಾವುರ್ ರೆಹಮಾನ್ ಅವರು ಚದುರಂಗ ಪಂದ್ಯದಲ್ಲಿ ತೊಡಗಿದ್ದಾಗ ದಿಢೀರ್ ಕುಸಿದುಬಿದ್ದು, ಇಹಲೋಕ ತ್ಯಜಿಸಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಶಿಪ್ ಪಂದ್ಯದ ವೇಳೆ ಅವರು ಕುಸಿದುಬಿದ್ದು ನಿಧನರಾದರು ಎಂದು ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಬಾಂಗ್ಲಾದೇಶ ಚೆಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿಯಾದ ಶಹಾಬ್ ಉದ್ದೀನ್ ಶಮಿಮ್ ಕೊಟ್ಟ ಮಾಹಿತಿ ಪ್ರಕಾರ, ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಜಿಯಾವುರ್ 12ನೇ ಸುತ್ತಿನ ಪಂದ್ಯದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಎದುರಾಳಿ ಇನಾಮುಲ್ ಹೊಸೈನ್ ವಿರುದ್ಧ ಪಂದ್ಯವಾಡುತ್ತಿದ್ದಾಗ ದಿಢೀರ್ ಕುಸಿದುಬಿದ್ದರು. ತಕ್ಷಣವೇ ಅವರನ್ನು ಢಾಕಾದ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ, ಅಷ್ಟರೊಳಗೆ ಅವರು ಸಾವನ್ನಪ್ಪಿದ್ದರು ಎಂಬುದನ್ನು ವೈದ್ಯರು ಧೃಡಪಡಿಸಿದರು ಎಂದು ಹೇಳಿದ್ದಾರೆ.
ಆಟದ ಮಧ್ಯೆ ಅವರು ಆಯಾಸಗೊಂಡಿರುವುದು ಅಥವಾ ಕಷ್ಟಪಡುತ್ತಿದ್ದಾರೆ ಎಂಬ ಯಾವುದೇ ಸೂಚನೆಗಳು ನನಗೆ ಕಂಡುಬರಲಿಲ್ಲ. ಆದ್ರೆ, ಎದುರಿಗೆ ಕುಳಿತ್ತಿದ್ದ ರೆಹಮಾನ್, ತಕ್ಷಣವೇ ಕುಸಿದುಬಿದ್ದರು ಎಂದು ಜಿಯಾವುರ್ ಅವರ ಪ್ರತಿಸ್ಪರ್ಧಿ ಇನಾಮುಲ್ ತಿಳಿಸಿದರು,(ಏಜೆನ್ಸೀಸ್).